- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿಗೆ ಚತುರ್ಥಪರ್ಯಾಯದ ಸಂಭ್ರಮ

Paryaya [1]ಉಡುಪಿ:  ಉಡುಪಿ ಶ್ರೀ ಕೃಷ್ಣ ಮಠದ ಶ್ರೀ ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಶ್ರೀಪಾದರು  ತನ್ನ ಚತುರ್ಥಪರ್ಯಾಯದ ಗದ್ದುಗೆಯನ್ನೇರಿದರು.

ಉಡುಪಿ ಶ್ರೀಕೃಷ್ಣ ಮಠದ ಪೂಜಾಧಿಕಾರ ಹಸ್ತಾಂತರ ಸಮಾರಂಭದಲ್ಲಿ, ಪ್ರಸ್ತುತ ಪರ್ಯಾಯ ಪೀಠಾಧಿಪತಿಗಳಾದ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿಗೆ ಪೊಡವಿಗೊಡೆಯ ಶ್ರೀಕೃಷ್ಣನ ಪೂಜಾಧಿಕಾರವನ್ನು ವಿಧ್ಯುಕ್ತವಾಗಿ ಹಸ್ತಾಂತರಿಸಿದರು.

2 ವರ್ಷಕ್ಕೊಮ್ಮೆ ನಡೆಯುವ ಈ ಸಮಾರಂಭದಲ್ಲಿ ಮಂಗಳವಾರ  ನಸುಕಿನ ಜಾವ 5.25ಕ್ಕೆ ಶ್ರೀಕೃಷ್ಣಮಠ ಪ್ರವೇಶ ಮಾಡಿ ದೇವರ ದರ್ಶನ ಪಡೆದ ಶ್ರೀಗಳಿಗೆ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು ಬೆಳಗ್ಗೆ 5.45ಕ್ಕೆ ಶ್ರೀ ಮನ್ಮಧ್ವಾಚಾರ್ಯ ಕರಾರ್ಚಿತ ಅಕ್ಷಯಪಾತ್ರ ಬೆಳ್ಳಿಯ ಸಟ್ಟುಗ ಹಸ್ತಾಂತರಿಸಿ, ಬೆಳಗ್ಗೆ 5.55ಕ್ಕೆ ಪವಿತ್ರ ಸರ್ವಜ್ಞ ಪೀಠಾರೋಹಣಗೊಳಿಸಿದರು.

ಕೋವಿಡ್ ನಿರ್ಬಂಧಗಳ ನಡುವೆ ಸರಳವಾಗಿ ಸಾಂಪ್ರದಾಯಿಕವಾಗಿ ಬೆಳಗ್ಗೆಯಿಂದಲೇ ವೈಭವಯುತವಾಗಿ ಪರ್ಯಾಯ ಆಚರಣೆ, ಮೆರವಣಿಗೆ ನಡೆದವು.

Paryaya [2]ಸ್ಥಬ್ಧಚಿತ್ರ ಪ್ರದರ್ಶನಕ್ಕೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ನಿರ್ಬಂಧ ಹೇರಲಾಗಿದ್ದು ಮಠದಿಂದ ಬೆರಳೆಣಿಕೆಯ ಸ್ಥಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಸಾಂಪ್ರದಾಯಿಕವಾಗಿ ಮನೋಹರವಾಗಿ ಮೆರವಣಿಗೆ ರಥಬೀದಿ ತಲುಪಿದಾಗ ಸ್ವಾಮೀಜಿಗಳು ಪಲ್ಲಕ್ಕಿಯಿಂದ ಇಳಿದು ರಥಬೀದಿಯಲ್ಲಿ ನಡೆದುಕೊಂಡು ಹೋಗಿ ಮುಂದೆ ಸಾಗಿದರು.

ಉಡುಪಿ ಕೃಷ್ಣಮಠದಲ್ಲಿ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಕನಕನ ಕಿಂಡಿ ಮೂಲಕ ಕೃಷ್ಣ ದರ್ಶನ ಪಡೆದರು.

ಈ ಬಾರಿ ಸಾಂಸ್ಕೃತಿಕ ಗೌಜುಗದ್ದಲಗಳಿಗೆ ಕಡಿವಾಣ ಹಾಕಲಾಗಿತ್ತು. ಸರಳವಾಗಿ ನಡೆದ ಪರ್ಯಾಯೋತ್ಸವಕ್ಕೆ  ರಥಬೀದಿಯನ್ನು ದೀಪಾಲಂಕೃತಗೊಳಿಸಲಾಗಿತ್ತು. ಉಡುಪಿಯ ಬೀದಿಗಳು ದುರಸ್ತಿಗೊಂಡು ಸ್ವಚ್ಛಗೊಳಿಸಲಾಗಿತ್ತು. ಪರ್ಯಾಯ ಮೆರವಣಿಗೆ ಸಾಗುವ ರಸ್ತೆಯಲ್ಲಿ ಹತ್ತಾರು ಕಮಾನುಗೋಪುರಗಳನ್ನೂ ನಿರ್ಮಿಸಲಾಗಿತ್ತು.

Paryaya [3]