ಪ್ರಿಯತಮೆಯ ತಮ್ಮನನ್ನು ಅಪಹರಿಸಿದ ಪ್ರೇಮಿ

7:24 PM, Saturday, January 22nd, 2022
Share
1 Star2 Stars3 Stars4 Stars5 Stars
(No Ratings Yet)
Loading...

Srinivasaಬೆಂಗಳೂರು:  ಪ್ರಿಯತಮೆಯ ತಮ್ಮನನ್ನು ಪ್ರೇಮಿಯೊಬ್ಬ ಅಪಹರಿಸಿ ನೀನು ನನ್ನ ಜೊತೆ ಬರದಿದ್ದರೆ ನಿನ್ನ ತಮ್ಮನ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುವ ಘಟನೆ ನಗರದ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

ಆರೋಪಿಯನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದ್ದು, ಪ್ರಿಯತಮೆಯ ತಮ್ಮ ವೆಂಕಟೇಶ್‍ನನ್ನು ಆರೋಪಿ ಅಪಹರಿಸಿದ್ದಾನೆ. ಪ್ರಿಯತಮೆ ಬೇರೊಬ್ಬನ ಜೊತೆ ಮದುವೆ ಆಗಿದ್ದಳು. ಆದರೂ ಗಂಡನ ಬಿಟ್ಟು ಪ್ರಿಯಕರನ ಜೊತೆ ಸ್ವಲ್ಪ ದಿನ ಜೀವನ ಮಾಡಿದ್ದಾಳೆ. ಬಳಿಕ ರಾಜಿ ಪಂಚಾಯತಿ ಮಾಡಿ ಗಂಡನ ಮನೆಗೆ ಹೋಗಿದ್ದಾಳೆ. ನಂತರ ಗಂಡನನ್ನೂ ಬಿಟ್ಟು ತವರು ಮನೆ ಬಂದು ಸೇರಿಕೊಂಡಿದ್ದಳು. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್

ಪ್ರಿಯತಮೆ ತವರು ಮನೆ ಸೇರಿರುವ ವಿಚಾರ ತಿಳಿದ ಆರೋಪಿ ತನ್ನ ಜೊತೆ ಬರುವಂತೆ ಪೀಡಿಸಿದ್ದಾನೆ. ಈ ವೇಳೆ ಪ್ರಿಯತಮೆ ಬರಲು ಒಪ್ಪದಿದ್ದಾಗ ಆಕೆಯ ತಮ್ಮನ ಕಿಡ್ನಾಪ್ ಮಾಡಿದ್ದಾನೆ. ಅಲ್ಲದೇ ನೀನು ನನ್ನ ಜೊತೆ ಬರದೇ ಹೋದರೆ ನಿನ್ನ ತಮ್ಮನ ಕೊಲೆ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ತಾಜ್‍ಮಹಲ್‍ಗೆ ನಕಲಿ ಟಿಕೆಟ್ ಮಾರುತ್ತಿದ್ದ

ನಂತರ ವೆಂಕಟೇಶ್‍ನನ್ನು ಆಂಧ್ರಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಎಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿಯ ಬೆನ್ನತ್ತಿದ್ದ ಬ್ಯಾಡರಹಳ್ಳಿ ಪೊಲೀಸರು ಆತನನ್ನು ಬಂಧಿಸಿ ಪ್ರಿಯತಮೆಯ ತಮ್ಮನ ಜೀವ ಉಳಿಸಿದ್ದಾರೆ.

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English