ಭಗವಂತನಿಗೆ ಮೆಚ್ಚುಗೆ ಆಗುವ ರೀತಿಯಲ್ಲಿ ನಾವೆಲ್ಲರೂ ಬದುಕು ರೂಪಿಸಿಕೊಳ್ಳಬೇಕು : ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿ

4:22 PM, Monday, January 24th, 2022
Share
1 Star2 Stars3 Stars4 Stars5 Stars
(5 rating, 1 votes)
Loading...

Kalahastendraಮಂಗಳೂರು: ಭಗವಂತನಿಗೆ ಮೆಚ್ಚುಗೆ ಆಗುವ ರೀತಿಯಲ್ಲಿ ನಾವೆಲ್ಲರೂ ಬದುಕು ರೂಪಿಸಿಕೊಳ್ಳಬೇಕು, ಸರ್ವವ್ಯಾಪಿಯಾದ ದೇವರ ಸ್ಮರಣೆಯನ್ನು ಕೇವಲ ಕಷ್ಟ ಕಾಲದಲ್ಲಿ ಮಾತ್ರ ಮಾಡದೆ ನಿರಂತರವಾಗಿ ಸದಾ ಕಾಲ ಸ್ಮರಿಸಿ ದೇವರ ಕ್ರಪೆಗೆ ಪಾತ್ರರಾಗಬೇಕು ಶ್ರೀ ಕಾಳಿಕಾಂಬಾ ಅಮ್ಮನವರಿಗೆ ಸರ್ವಸ್ವವನ್ನೂ ಅರ್ಪಿಸಿ ಕಾರ್ಯಕರ್ತರು ದೇವಸ್ಥಾನ ಜೀರ್ಣೋದ್ದಾರ ಕಾರ್ಯದಲ್ಲಿ ಶ್ರಮಿಸಿದ್ದಾರೆ ಧನ ಸಹಾಯವನ್ನೂ ಮಾಡಿದ್ದಾರೆ ಅವರೆಲ್ಲರಿಗೂ ಒಳಿತಾಗಲಿ ಎಂದು ಶ್ರೀಮತ್ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಯವರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮ ಕಲಶೋತ್ಸವದ (23.01.2022) ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ದಲ್ಲಿ ಹೇಳಿದರು.

ನಿರಂತರ ಭಗವಂತನ ಸ್ಮರಣೆ ಮಾಡಬೇಕು.ದೇವರು ಎಲ್ಲ ಕಡೆ ಇದ್ದಾನೆ. ಅನುರೆಣತ್ರಣ ಕಾಷ್ಟ ದಲ್ಲೂ ದೇವನಿದ್ದಾನೆ. ದೇವರನ್ನು ಶಿಲೆ, ಮರ, ಲೋಹದಲ್ಲೂ ದೇವರನ್ನು ಕಾಣುವಂತೆ ಮಾಡುವ ಸಮಾಜ ಇದ್ದರೆ ಅದು ವಿಶ್ವ ಕರ್ಮ ಸಮಾಜ. ಗುರು ಪೀಠದ ಮೂಲಕ ಸಮಾಜ ಕಟ್ಟುವಂತಹ ಕೆಲಸ ಆಗಲಿ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಬ್ರಹ್ಮ ಶ್ರೀ ವಿಠಲ ದಾಸ ತಂತ್ರಿ ದೇರೆಬೈಲ್ ಶ್ರೀ ಕ್ಷೇತ್ರ ಕದ್ರಿ ಇವರು ದೇವಾಲಯ ಮತ್ತು ಬ್ರಹ್ಮ ಕಲಶೋತ್ಸವ ಎಂಬ ವಿಷಯದ ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಆಗಮಿಸಿ ಕಾಳಿಕಾಂಬಾ ದೇವಳದ ಜೀರ್ಣೋದ್ದಾರ ಕಾಮಗಾರಿಗೆ 1ಕೋಟಿ ಮೊತ್ತ ಸರಕಾರ ದಿಂದ ಮುಖ್ಯ ಮಂತ್ರಿಗಳ ಶಿಫಾರಿಸಿನ ಬಜೆಟ್ ನಲ್ಲಿ ಮಂಜೂರಾತಿ ಮಾಡಿ ಕೊಡುವ ಬಗ್ಗೆ ಭರವಸೆ ನೀಡಿದರು. ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಶ್ರೀ ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠದ ಅಧ್ಯಕ್ಷ ಶ್ರೀಧರ ಆಚಾರ್ಯ ವಡೆರಹೋಬಳಿ, ಕಲ್ಕೂರ ಪ್ರತಿಷ್ಟಾನದ ಎಸ್ ಪ್ರದೀಪ್ ಕುಮಾರ್ ಕಲ್ಕೂರ, ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ಸಹಾಯಕ ಅಭಿಯಂತರು ಶಿವಪ್ರಸನ್ನ ಡಿ ಎಸ್, ಕೆ ಶುಭ ಹಾರೈಸಿದರು. ಕೇಶವ ಆಚಾರ್ಯ ಆಡಳಿತ ಮೊಕ್ತೇಸರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಮುಂಬೈಯ ಉದ್ಯಮಿಗಳಾದ ಕರಂಬಾರ್ ಸುಂದರ ಆಚಾರ್ಯ, ಕೃಷ್ಣ ವಿ ಆಚಾರ್ಯ, ಅಚ್ಚುತ ಆಚಾರ್ಯ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮುಂಬೈಯ ಸದಾನಂದ ಎನ್ ಆಚಾರ್ಯ, ಜಿ ಟಿ ಆಚಾರ್ಯ, ಅಂತರ್ ರಾಷ್ಟ್ರೀಯ ಜ್ಯೋತಿಷಿ ಉಮೇಶ್ ಆಚಾರ್ಯ ಕ್ಷೇತ್ರದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಮೂರನೇ ಮೊಕ್ತೇಸರ ಎ ಲೋಕೇಶ್ ಆಚಾರ್ಯ ಉಪಸ್ಥಿತರಿದ್ದರು. ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ರಮೇಶ್ ಆಚಾರ್ಯ ಬಿ ಜೆ ಸ್ವಾಗತಿಸಿದರು. ಪಶುಪತಿ ಉಳ್ಳಾಲ್ ಮತ್ತು ವಾರುಣಿ ನಾಗರಾಜ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರದ ಮೂರನೇ ಮೊಕ್ತೇಸರ ಎ ಲೋಕೇಶ್ ಆಚಾರ್ಯ ಬಿಜೈ ವಂದಿಸಿದರು.
Kalikamba Temple
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹರಿದಾಸ್ ಡಾ. ಎಸ್. ಪಿ. ಗುರುದಾಸ್ ಹಾಗೂ ಪಿ ಎನ್ ಆಚಾರ್ಯ ಇವರಿಂದ ಭಕ್ತನುಗ್ರಹಕಾರಿಣಿ ಕಾಳಿಕಾ ಚಿತ್ರ – ಕಥಾ ಕೀರ್ತನ ಹರಿದಾಸ್ ಎಸ್ ಪಿ ಆಚಾರ್ಯ ಬೆಂಗಳೂರು ಇವರ ಸೇವಾ ರೂಪದಲ್ಲಿ ನಡೆಯಿತು.

ವಿಡಿಯೋಗಳು 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English