ರಸ್ತೆ ಬದಿಯಲ್ಲಿ ಮಲಗುತ್ತಿದ್ದ ದನಗಳನ್ನು ಕಳ್ಳತನ ಮಾಡಿ ವಧೆ ಮಾಡುತ್ತಿದ್ದ ತಂಡ ಪರಾರಿ, ಓರ್ವನ ಬಂಧನ

11:18 AM, Monday, January 31st, 2022
Share
1 Star2 Stars3 Stars4 Stars5 Stars
(5 rating, 1 votes)
Loading...

karkala-policeಕಾರ್ಕಳ : ನಲ್ಲೂರು, ಬಜಗೋಳಿ. ಮಾಳ ಕಡೆ ರಸ್ತೆ ಬದಿಯಲ್ಲಿ ಮಲಗುತ್ತಿದ್ದ ದನಗಳನ್ನು ಕಳ್ಳತನ ಮಾಡಿ ಕಡಿದು ಮಾಂಸ ಮಾಡಿ ಮಾರುತ್ತಿದ್ದ ತಂಡವೊಂದು ಕಾರ್ಕಳ ಗ್ರಾಮಾಂತರ ಪೋಲೀಸರಿಂದ ತಪ್ಪಿಸಿಕೊಂಡ ಘಟನೆ ಮುಡಾರು ಗ್ರಾಮದ ಹೆಪೆಜಾರು ಎಂಬಲ್ಲಿ ರವಿವಾರ ನಸುಕಿನ ಜಾವದಲ್ಲಿ ನಡೆದಿದೆ.

ಈ ಮದ್ಯೆ ತಪ್ಪಿಸಿಕೊಳ್ಳಲೆತ್ನಿಸಿದ ಮೂಡುಬಿದಿರೆ ತಾಲೂಕಿನ ಮಿಜಾರು ಹಂಡೇಲಿನ ನಿವಾಸಿ ಸಯ್ಯದ್ ಜುಹಾದ್(31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಗೋ ಸಾಗಾಟ ವಾಹನದ ಮಾಹಿತಿದಾರನಾಗಿ ಕುಕೃತ್ಯದಲ್ಲಿ ಸಕ್ರಿಯಾಗೊಂಡಿದ್ದನು ಎನ್ನಲಾಗಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ಫಿರೋಜ್, ಮೈಯದ್ದಿ, ಸುರೇಶ್ ಎಂಬವರು ತಪ್ಪಿಸಿಕೊಂಡಿದ್ದಾರೆ.

ಜನವರಿ 29ರ ರಾತ್ರಿ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ, ಠಾಣಾ ಕಾನ್‌ಸ್ಟೇಬಲ್ ರಂಜಿತ್ ಕುಮಾರ್ ರವರೊಂದಿಗೆ ಇಲಾಖಾ ಜೀಪಿನ ಇದರ ಚಾಲಕ ಸತೀಶ್ ನಾಯ್ಕ ಇವರೊಂದಿಗೆ ಕರ್ತವ್ಯದಲ್ಲಿ ನಿರತರಾಗಿದ್ದು, ಪದವು, ಲೆಮಿನಾ ಕ್ರಾಸ್,ನಿಟ್ಟೆ, ಬೆಳ್ಮಣ್‌ಗಳಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ಬಜಗೊಳಿ ಕಡೆಗಳಲ್ಲಿ ರೌಂಡ್ಸ್ ಮಾಡಿದರು. ಜನವರಿ 30ರ ಬೆಳಗಿನ ಜಾವ ಕಾರ್ಕಳ ತಾಲೂಕು ಮುಡಾರು ಗ್ರಾಮ ಹೆಪೆಜಾರು ಎಂಬಲ್ಲಿ ಮೊದಲೇ ಹಾಕಿದ ಬ್ಯಾರಿಕೇಡ್‌ಗಳ ಬಳಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು.

ಬಜಗೊಳಿ ಕಡೆಯಿಂದ ಮಾಳ ಕಡೆಗೆ ಓರ್ವ ಬೈಕ್ ಸವಾರ ಹಾಗೂ ಓರ್ವ ಕಾರು ಚಾಲಕ ಒಂದರ ಹಿಂದೆ ಒಂದರಂತೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದರು. ಪೊಲೀಸರು ವಾಹನಗಳನ್ನು ನಿಲ್ಲಿಸುವಂತೆ ಕೈಸನ್ನೆ ಮಾಡಿದ್ದರು. ಬೈಕ್ ಸವಾರ ಹಾಗೂ ಕಾರಿನ ಚಾಲಕ ವಾಹನಗಳನ್ನು ನಿಲ್ಲಿಸದೇ ಪೊಲೀಸರ ಸೂಚನೆಯನ್ನು ಉಲ್ಲಂಘಿಸಿ ಕಾರನ್ನು ಬ್ಯಾರಿಕೇಡ್ ಗಳಿಗೆ ಹೊಡೆದು ತಪ್ಪಿಸಿಕೊಂಡಿದ್ದರು.

ಈ ಸಂದರ್ಭ ಎಸ್‌ಐ ಸಹಿತ ಇತರ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

ಮಾರುತಿ ರಿಡ್ಜ್ ಕಾರಿನಲ್ಲಿ ಮೂವರು ಇದ್ದು ಕಾರಿನ ಒಳಗಡೆ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿರುವುದನ್ನು ಪೊಲೀಸರು ನೋಡಿದ್ದರು.

ಪೊಲೀಸರು ಜೀಪಿನಲ್ಲಿ ಕಾರನ್ನು ಹಾಗೂ ಬೈಕ್ ನ್ನು ಹಿಂಬಾಲಿಸಿಕೊಂಡು ಹೋಗಿದ್ದರು. ಕಾರು ತಪ್ಪಿಸಿಕೊಂಡು ಮುಂದೆ ಸಾಗಿದ್ದರೆ, ಸುಮಾರು 3 ರಿಂದ 4 ಕಿ. ಮೀ. ದೂರದಲ್ಲಿ ಹುಕ್ರಟ್ಟೆ ಕ್ರಾಸ್‌ನಲ್ಲಿ ಬಂಧಿರ್ತ ಆರೋಪಿ ಬೈಕ್ ಸಮೇತ ರಸ್ತೆಯ ಬದಿಯ ಚರಂಡಿಗೆ ಬಿದ್ದು ಬೈಕ್ ನ್ನು ಬಿಟ್ಟು ಓಡಲು ಪ್ರಯತ್ನಿಸಿದ ಸಯ್ಯದ್ ಜುಹಾದ್‌ನನ್ನು ಪೊಲೀಸರು ಬಂದಿಸಿದ್ದಾರೆ.

ಗೋ ಕಳವು ತಂಡಕ್ಕೆ ಮಾಳ ಚೌಕಿಯ ಸುರೇಶ ಎಂಬಾತನು ತನ್ನ ಮೊಬೈಲ್ ಮೂಲಕ ಕರೆ ಮಾಡಿ ನಲ್ಲೂರು, ಬಜಗೋಳಿ. ಮಾಳ ಕಡೆ ರಸ್ತೆ ಬದಿಯಲ್ಲಿ ಮಲಗುತ್ತಿದ್ದ ದನಗಳ ಕುರಿತು ಸೈಯದ್ ಜುಹಾದ್ ಮಾಹಿತಿ ನೀಡುತ್ತಿದ್ದನು. ಆತ ತನ್ನ ಸಂಬಂಧಿ ಫೀರೋಜ್ ಹಾಗೂ ಮೈಯದ್ದಿ ಜೊತೆ ಸೇರಿ ದನಗಳನ್ನು ಕಡಿದು ಮಾಂಸ ಮಾಡುವ ಉದ್ದೇಶದಿಂದ ದನಗಳನ್ನು ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English