ಕಾಟಿಪಳ್ಳದಲ್ಲಿ ಯುವಕನನ್ನು ತಲವಾರ್‌ನಿಂದ ಕಡಿದು ಪರಾರಿಯಾದ ತಂಡ

4:18 PM, Wednesday, February 2nd, 2022
Share
1 Star2 Stars3 Stars4 Stars5 Stars
(No Ratings Yet)
Loading...

Mohammed Anasಮಂಗಳೂರು : ನಗರದ ಹೊರ ವಲಯದ ಸುರತ್ಕಲ್‌ನ ಕಾಟಿಪಳ್ಳ 6ನೇ ಬ್ಲಾಕ್‌ನಲ್ಲಿ ತಂಡವೊಂದು ಮಹಮ್ಮದ್ ಅನಾಸ್ (29) ಎಂಬವರನ್ನು ತಲವಾರ್‌ನಿಂದ ಕಡಿದು ಕೊಲೆಗೆ ಯತ್ನಿಸಿದೆ.
ಮನೆ ಬಾಡಿಗೆ ವಿಚಾರದಲ್ಲಿ ಚಾರು, ರವೂಫ್, ಅಕ್ಕಿ, ಮುಸ್ತಫಾ ಮತ್ತಿತರರ ತಂಡ ಮಂಗಳವಾರ ರಾತ್ರಿ ತಲವಾರ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದೆ.

ಕೈ, ತಲೆ ಹಾಗು ಕುತ್ತಿಗೆಯ ಭಾಗಕ್ಕೆ ಗಂಭೀರ ಗಾಯಗೊಂಡ ಮಹಮ್ಮದ್ ಅನಾಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾರು ಮತ್ತು ರವೂಫ್ ವಾಸವಾಗಿದ್ದ ಬಾಡಿಗೆ ಮನೆ ತೆರವು ಮಾಡಲು ಮಧ್ಯಸ್ಥಿಕೆ ವಹಿಸಿದ್ದಾರೆ ಎನ್ನುವ ಕಾರಣದಿಂದ ಕೊಲೆಗೆ ಯತ್ನಿಸಿಸಲಾಗಿದೆ ಎಂದು ಗಾಯಾಳು ದೂರು ನೀಡಿದ್ದು, ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English