- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಟಿಕ್ ಟಾಕ್ ಖ್ಯಾತಿಯ ಕಮಲಜ್ಜಿ ನಿಧನ

kamalajji [1]ಬಂಟ್ವಾಳ : ಅನಂತಾಡಿ ಗ್ರಾಮದ ಮಾಮೇಶ್ವರ ಸಂಕೇಶ ನಿವಾಸಿ ಟಿಕ್ ಟಾಕ್ ಕಮಲಜ್ಜಿ ಯಾನೆ ಕಮಲ(85) ರವರು ಬುಧವಾರ ಸಂಜೆ ನಿಧನರಾಗಿದ್ದಾರೆ.

ಟಿಕ್ ಟಾಕ್ ನ ಹಾಸ್ಯ ವಿಡಿಯೋಗಳಲ್ಲಿ ಕಾಣಿಸಿಕೊಂಡು ಅಪಾರ ಅಭಿಮಾನಿ ವರ್ಗವನ್ನು ಪಡೆದಿದ್ದ, ಅವರು ಕಳೆದ ಒಂದುವಾರದಿಂದ ಅನಾರೋಗ್ಯ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಇಂದು ಸಂಜೆ ನಿಧನರಾಗಿದ್ದಾರೆ.

ಮೃತರು ಆರು ಗಂಡು, ಮೂವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಸಹಿತ ಅಪಾರ ಬಂಧುಗಳನ್ನು, ಅಭಿಮಾನಿಗಳನ್ನು ಅಗಲಿದ್ದಾರೆ.

ಪ್ರಸೂತಿ ತಜ್ಞೆಯಾಗಿದ್ದ ಇವರು ಪರೋಪಕಾರ ಮನಸ್ಸಿನವರಾಗಿದ್ದರು.

ಟಿಕ್ ಟಾಕ್ ಸ್ಟಾರ್ ಧನರಾಜ್ ಜೊತೆ ಕಮಲಜ್ಜಿ 50ಕ್ಕೂ ಅಧಿಕ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದು, ಇವರ ಕುಟುಂಬವೇ ಟಿಕ್ ಟಾಕ್ ಫ್ಯಾಮಿಲಿ ಎಂದು ಹೆಸರು ಪಡೆದಿತ್ತು.

ತಮ್ಮ ಇಳಿವಯಸ್ಸಿನಲ್ಲೂ ಇವರು ಟಿಕ್ ಟಾಕ್ ವಿಡಿಯೋಗಳಲ್ಲಿ ತೋರುತ್ತಿದ್ದ ಅಭಿನಯ, ಮಾತಿನ ವೇಗ, ಮನೆಮಂದಿಯ ಜೊತೆ ಬೆರೆಯುತ್ತಿದ್ದ ದೃಶ್ಯಾವಳಿಗಳಿಂದಾಗಿ ತಮ್ಮದೇ ಆದ ಅಭಿಮಾನಿ ವರ್ಗವನ್ನು ಅವರು ಪಡೆದಿದ್ದರು.