ಶ್ರೀದೇವಿ ಯಕ್ಷ ಕಲಾ ನಿಲಯ ನಾಲಾಸೋಪಾರ -ವಿರಾರ್ ವಾರ್ಷಿಕೋತ್ಸವ ಹಾಗೂ ಶಶಿಧರ ಕೆ. ಶೆಟ್ಟಿ ದಂಪತಿಯ ವೈವಾಹಿಕ ಬೆಳ್ಳಿ ಹಬ್ಬ ಸಂಬ್ರಮ

5:04 PM, Tuesday, February 22nd, 2022
Share
1 Star2 Stars3 Stars4 Stars5 Stars
(No Ratings Yet)
Loading...

Sri Devi Yaksha Kala Nilaya ಮುಂಬಯಿ : ನನ್ನ ಸಮಾಜ ಸೇವೆಯ ಯಶಸ್ಸಿಗೆ ಅನೇಕರು ಕಾರಣರು. ಅವರೆಲ್ಲರೆ ಪ್ರೇರಣೆಯಿಂದ ಹಾಗೂ ಮಾರ್ಗದರ್ಶನದಿಂದ ನಾನು ಸಮಾಜ ಸೇವಾ ನಿರತನಾಗಿದ್ದೇನೆ. ನನ್ನ ಗುರುಗಳ ಬಗ್ಗೆ ಯಾರಾದರೂ ಕೇಳಿದಲ್ಲಿ ಐಕಳ ಹರೀಶ್ ಶೆಟ್ಟಿಯವರ ಹೆಸರು ಹೇಳುತ್ತಿದ್ದೆ ಯಾಕೆಂದರೆ ಕೇವಲ ಮೂರು ವರ್ಷಗಳಲ್ಲಿ ಅದೆಷ್ಟೋ ಕೋಟಿ ರೂಪಾಯಿ ವೆಚ್ಚದಲ್ಲಿ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟ ಐಕಳ ಹರೀಶ್ ಶೆಟ್ಟಿಯಂತವರನ್ನು ಗುರು ಎನ್ನಲು ನನಗೆ ಹೆಮ್ಮೆಯಾಗುತ್ತದೆ ಎಂದು ಶ್ರೀ ದೇವಿ ಯಕ್ಷಕಲಾ ನಿಲಯ ನಲಾಸೋಪಾರ – ವಿರಾರ್ ಇದರ ಅಧ್ಯಕ್ಷರಾದ ಶಶಿಧರ ಕೆ. ಶೆಟ್ಟಿ ಇನ್ನಂಜೆ ಅಭಿಪ್ರಾಯ ಪಟ್ಟರು.

ಫೆ. 20 ರಂದು ಹೋಟೆಲ್ ಉಡುಪಿ (ಗ್ರೌಂಡ್) ವಸಯಿ (ಪೂರ್ವ) ಇಲ್ಲಿ ಜರಗಿದ ಶ್ರೀ ದೇವಿ ಯಕ್ಷ ಕಲಾ ನಿಲಯದ 5ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ತನ್ನ ವೈವಾಹಿಕ ಜೀವನದ 25ನೇ ವರ್ಷ ಪೂರೈಸಿದ ಸಂದರ್ಭದಲ್ಲಿ ಎಲ್ಲರ ಗೌರವವನ್ನು ಸ್ವೀಕರಿಸಿ ಮಾತನಾಡಿದ ಶಶಿಧರ ಕೆ. ಶೆಟ್ಟಿ ಇನ್ನಂಜೆ ಯವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಾಧನೆಯನ್ನು ನೋಡುವಾಗ ವಸಯಿ ಪರಿಸರದಲ್ಲಿ ಒಂದು ಶಾಲೆ ನಿರ್ಮಿಸುವ ಯೋಜನೆಯನ್ನೂ ಕೈಗೊಳ್ಳಬೇಕು ಎಂದು ಸ್ಥಳೀಯರ ಪರವಾಗಿ ವಿನಂತಿಸುತ್ತಿರುವೆನು. ಇದಕ್ಕೆ ನಮ್ಮೆಲ್ಲರ ಪ್ರೋತ್ಸಾಹವೂ ಇದೆ. ಇಂದು ಮದುವೆಯ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಪರಿವಾರದೊಂದಿಗೆ ನನ್ನ ಮಾತೃಶ್ರೀಯವರ ಪಾದ ಪೂಜೆ ಮಾಡಿರುವೆನು. ಎಳೆಯ ಪ್ರಾಯದಲ್ಲೇ ನಾನು ತಂದೆಯನ್ನು ಅಗಲಿದ್ದು ಬಾರೀ ಕಷ್ಟದಿಂದ ತಾಯಿ ನಮ್ಮನ್ನು ಸಾಕಿದ್ದಾರೆ. ಆದುದರಿಂದ ಯಾವ ಪಾದ ಪೂಜೆಯು ನನಗೆ ಕಡೀಮೆ. ನನ್ನ ಬೆಳವಣಿಗೆಗೆ ಕಾರಣಕರ್ತರಾದ ನನ್ನ ಮಾವನವರನ್ನು ಯಾವತ್ತೂ ಮರೆಯುವಂತಿಲ್ಲ. ಶ್ರೀದೇವಿ ಯಕ್ಷ ಕಲಾ ನಿಲಯದಲ್ಲಿ ಅನೇಕ ಮಕ್ಕಳಿಗೆ ವಿವಿಧ ಕಲೆಗಳನ್ನು ಕಲಿಯುವ ಅವಕಾಶ ನೀಡುತ್ತಿದ್ದೇವೆ. ಇದಕ್ಕೆ ವಸಾಯಿ ಪರಿಸರದ ತುಳು ಕನ್ನಡಿಗರ ಪ್ರೋತ್ಸಾಹ ನನಗಿದೆ. ವಸಾಯಿ ತಾಲೂಕಿನಲ್ಲಿ ಯಕ್ಷಗಾನ್ನ ಮೂರು ಸಂಸ್ಥೆಯನ್ನು ನಡೆಸಲು ಇಲ್ಲಿನ ಮಕ್ಕಳ ಪೋಷಕರ ಸಹಾಯವೂ ನಮಗಿದೆ ಎಂದು ನುಡಿದರು.

Sri Devi Yaksha Kala Nilaya ಗೌರವ ಅತಿಥಿಯಾಗಿ ಆಗಮಿಸಿದ , ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿ ಯವರು ಮಾತನಾಡುತ್ತಾ ಕಷ್ಟದಲ್ಲಿ ಸಿಲುಕಿದ ಸ್ಥಳೀಯರನ್ನು ಕೋರೋನಾ ಕಾಲದಲ್ಲಿ ರಕ್ಷಿಸಿದ ಶಶಿಧರ ಶೆಟ್ಟಿಯವರು ಕೇವಲ ಬಂಟ ಸಮುದಾಯಕ್ಕೆ ಮಾತ್ರ ಮೀಸಲಾಗಿರದೆ ಎಲ್ಲಾ ಸಮುದಾಯದವರಿಗೆ ಬೇಕಾದ ವ್ಯಕ್ತಿಯಾಗಿದ್ದಾರೆ. ದಾಂಪತ್ಯ ಜೀವನದ 25 ನೇ ವರ್ಷಾಚರಣೆಯು ಸಂಭ್ರಮದಿಂದ ನಡೆದಿದೆ. ತುಳುನಾಡಿನ ಈ ಶ್ರೀಮಂತ ಕಲೆಯು ಇಲ್ಲಿನ ಮಕ್ಕಳಿಗೆ ಕಲಿಸುತ್ತಿರುವ ಅವರ ಶಿಕ್ಷಕ ಶಿಕ್ಷಕಿಯರಿಗೆ ಅಭಿನಂದನೆಗಳು. ಈ ಕಲೆಯನ್ನು ಇಲ್ಲಿ ಉಳಿಸಿ ಬೆಳೆಸಿ ಇಲ್ಲಿ ತುಳುನಾಡಿನ ಕಂಪು ಬೀರಿದ ಶಶಿಧರ ಶೆಟ್ಟಿಯವರಿಗೆ ಅಭಿನಂದನೆಗಳು ಎಂದರು.

ಇನ್ನೋರ್ವ ಅತಿಥಿ ಚಂದ್ರಹಾಸ ಗುರುಸ್ವಾಮಿ ಇವರು ಮಾತನಾಡಿ ಹೇಳಿದ ಕೆಲಸವನ್ನು ತಪ್ಪದೇ ಮಾಡಿ ತೋರಿಸುತ್ತಿರುವ ವಿಶೇಷ ವ್ಯಕ್ತಿತ್ವ ಶಶಿಧರ ಶೆಟ್ಟಿಯವರದ್ದು. ನಿಸ್ವಾರ್ಥ ಸೇವೆಯೊಂದಿಗೆ ಇವರು ಸಮಾಜಸೇವೆಯನ್ನು ಮಾಡುತ್ತಿದ್ದಾರೆ. ಇವರಿಗೆ ಸಮಾಜ ಸೇವೆ ಮಾಡಲು ದೇವರು ಇನ್ನೂ ಶಕ್ತಿಯನ್ನು ಕರುಣಿಸಲಿ. ತಾಯಿಯ ಅಶ್ರೀರ್ವಾದ ದಿಂದ ಇವರು ಇನ್ನೂ ಶಕ್ತಿಯುತವಾಗಲಿ ಎಂದರು.

ಗೌರವ ಅತಿಥಿಯಾಗಿ ಆಗಮಿಸಿದೆ ಲೇಖಕಿ, ಸಾಹಿತಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಇವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಸನ್ಮಾನ ಸ್ವೀಕರಿಸಿದ ಇಬ್ಬರಿಗೂ ಅಭಿನಂದನೆ ಸಲ್ಲಿಸಿದರು. ಶಶಿಯಣ್ಣ ಹಾಗೂ ಶಶಿಕಲಾ ಇಬ್ಬರಿಗೂ ಮದುವೆಯ 25ನೇ ವಾರ್ಷಿಕೋತ್ಸಕ್ಕೆ ಅಭಿನಂದನೆ ಸಲ್ಲಿಸಿದರು. ಇಂದು ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಶ್ರೀದೇವಿ ಯಕ್ಷ ಕಲಾ ನಿಲಯ ದಲ್ಲಿ ಅನೇಕ ಕಲಾ ಕುಸುಮಗಳು ಅರಳಿದ್ದು ಈ ಮಕ್ಕಳ ಗೆಜ್ಜೆ ದ್ವನಿಯು ನಾಡಿನಾದ್ಯಂತ ಮೊಳಗಲಿ ಎಂದರು. ಶ್ರೀದೇವಿ ಯಕ್ಷ ಕಲಾ ನಿಲಯದ ಹೆಚ್ಚಿನ ಮಕ್ಕಳ ಮಾತೃಬಾಷೆ ತುಳುವಾಗಿದ್ದರೂ ಕನ್ನಡ ಬಾಷೆಯಲ್ಲಿ ಯವು್ದೇ ತಪ್ಪು ಇಲ್ಲದೆ ಮಾತುಗಾರಿಕೆಯಿಂದ ಮೆರೆದಿದ್ದಾರೆ. ಇವರ ಎಲ್ಲಾ ಗುರುಗಳಿಗೆ ಅಭಿನಂದನೆಗಳು. ಇಲ್ಲಿ ನಮ್ಮ ನಾಡಿನ ಕಲೆಯನ್ನು ಬೆಳಗಿಸುವಂತಹ ಸುಂದರ ಅವಕಾಶ ಸಿಗುತ್ತದೆ ಎಂದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ವಸಯಿ ವಿರಾರ್ ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಉಮೇಶ್. ಡಿ. ನಾಯ್ಕ್ ಮಾತನಾಡಿ ಇವತ್ತು ಎರಡು ಕಾರ್ಯಕ್ರಮಗಳನ್ನು ಜೊತೆಯಾಗಿ ಮಾಡುದರ ಬದಲು ಬೇರೆ ಬೇರೆಯಾಗಿ ಮಾಡುತ್ತಿದ್ದಲ್ಲಿ ನನಗೆ ಮತ್ತೊಮ್ಮೆ ಕಾರ್ಯಕ್ರಮಕ್ಕೆ ಬರುವ ಅವಕಾಶವಿತ್ತು. ಮುಂದೆ ಇವರ 50ನೇ ವರ್ಷದ ಕಾರ್ಯಕ್ರಮಕ್ಕೆ ನಾನು ಬರಲಿರುವೆನು. ನನ್ನನ್ನು ಕರೆದು ಇಲ್ಲಿ ಗೌರವಿಸಿದಕ್ಕೆ ಮುಖ್ಯವಾಗಿ ಶಶಿಧರ ಶೆಟ್ಟಿ ದಂಪತಿಗೆ ಕೃತಜ್ನತೆಗಳು ಹಾಗೂ ಅಭಿನಂದನೆಗಳು ಎಂದರು.

ಕಾರ್ಯಕ್ರಮದಲ್ಲಿ ಬಂಟರ ಸಂಘ ಮುಂಬಯಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಬಂಟರ ಸಂಘ ಮುಂಬಯಿಯ ವಿವಿಧ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳೂ ಹಾಗೂ ಸದಸ್ಯರು, ಸ್ಥಳೀಯ ತುಳು ಕನ್ನಡಿಗರ ಜಾತೀಯ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಶಶಿಧರ ಕೆ. ಶೆಟ್ಟಿ ಇನ್ನಂಜೆ, ಪತಿ ಶಶಿಕಲಾ, ಪುತ್ರಿ ಸೃಷ್ಟಿ ಮತ್ತು ಅವರ ಸಹೋದರಿ ತಾಯಿ ಶಾರದಾ ಶೆಟ್ಟಿಯವರ ಪಾದಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಯಕ್ಷಗಾನದ ಎಲ್ಲ ಗುರುಗಳನ್ನು ಗೌರವಿಸಲಾಯಿತು. ಕಟೀಲು ಯಕ್ಷ ಕಲಾ ವೇದಿಕೆ ವಸಯಿ ಇದರ ಅಧ್ಯಕ್ಷರದ ದೇವೇಂದ್ರ ಬುನ್ನನ್ ಹಾಗೂ ಜೀವಧಾನಿ ಯಕ್ಷ ಕಲಾ ವೇದಿಕೆ ವಸಯಿ ಇದರ ಅಧ್ಯಕ್ಷರಾದ ಮಂಜುನಾಥ ಶೆಟ್ಟಿ ಕೊಡ್ಲಾಡಿ ಇವರನ್ನು ಸನ್ಮಾನಿಸಲಾಯಿತು. ಶ್ರೀ ದೇವಿ ಯಕ್ಷ ಕಲಾ ನಿಲಯ “ನಾಲಾಸೋಪಾರ ವಿರಾರ್ ಇದರ ಬಾಲ ಕಲಾವಿದರಾದ ಸೃಷ್ಟಿ ಶಶಿಧರ ಶೆಟ್ಟಿ, ಸಮೀಕ್ಷಾ ಸುಭಾಷ್ ಶೆಟ್ಟಿ, ಶ್ರದ್ದಾ ಶೆಟ್ಟಿ, ಕಿಶನ್ ಪೂಜಾರಿ ಇವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಲೀಲಾವತಿ ಆಳ್ವ ಅವರ ಮಾರ್ಗದರ್ಶನದಲ್ಲಿ ಮಕ್ಕಳ ಭಜನೆ ನಂತರ ಸಂಸ್ಥೆಯ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಬಾಲ ಕಲಾವಿದರಿಂದ “ಶ್ರೀದೇವಿ ಲಲಿತತೋಪಖ್ಯಾನ” ಕನ್ನಡ ಯಕ್ಷಗಾನವನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು. ಸ್ಮಿತಾ ನಾಯರ್ ಅವರ ನೇತೃತ್ವದಲ್ಲಿ ಭರತ ನಾಟ್ಯ ಮಕ್ಕಳಿಂದ ನಾಟ್ಯ ವೈಭವ ಹಾಗೂ ಹಿರಿಯರಿಂದ ಮತ್ತು ಶಶಿಧರ ಶೆಟ್ಟಿ ದಂಪತಿಯ ಪರಿವಾರದ ಮಕ್ಕಳಿಂದ ಯಶ್ವಸ್ವೀ ನೃತ್ಯ ಪ್ರದರ್ಶನವಿತ್ತು.

ವೇದಿಕೆಯಲ್ಲಿ ಅತ್ತಿಥಿಗಳಲ್ಲದೆ ಶಶಿಕಲಾ ಶಶಿಧರ ಶೆಟ್ಟಿ, ಶ್ರೀದೇವಿ ಯಕ್ಷ ಕಲಾ ನಿಲಯ ದ ಗೌ. ಅಧ್ಯಕ್ಷರಾದ ಶ್ರೀನಿವಾಸ ನಾಯ್ಡು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶ್ರೀದೇವಿ ಯಕ್ಷ ಕಲಾ ನಿಲಯ ದ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರು ಮತ್ತು ವಿಜಯ ಪಿ. ಶೆಟ್ಟಿ ಉತ್ತಮವಾಗಿ ನೆರವೇರಿಸಿದರು. ಕೊನೇಗೆ ಪ್ರವೀಣ್ ಶೆಟ್ಟಿ ಕಣಂಜಾರು ದನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಕೋಶಾಧಿಕಾರಿ ಲ. ಕೃಷ್ಣಯ್ಯ ಹೆಗ್ಡೆ, ಜಗನ್ನಾಥ್ ಡಿ. ಶೆಟ್ಟಿ, ಸುಪ್ರಿತಾ ಶೆಟ್ಟಿ, ಬಾಬಾ ಅರಸ್, ಸುಭಾಷ್ ಜೆ ಶೆಟ್ಟಿ, ಪರಿಸರದ ತುಳು ಕನ್ನಡ ಸಂಘಟನೆಗಳ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರುಗಳು, ಮಹಿಳೆಯರು ಹಾಗೂ ಬಾಲ ಕಲಾವಿದರುಗಳ ಪಾಲಕರು ಸಹಕರಿಸಿದರು.

ಗಣ್ಯರ ನುಡಿ
ಇಲ್ಲಿ ಎರಡು ಪ್ರಮುಖ ಕಾರ್ಯಕ್ರಮಗಳು ಉತ್ತಮವಾಗಿ ನಡೆಯುತ್ತಿದ್ದು, ಶಶಿಧರ ಶೆಟ್ಟಿ ದಂಪತಿಯು ಜೀವನದಲ್ಲಿ 25 ವರ್ಷಗಳ ಕಾಲ ಜೊತೆಯಾಗಿ ಸುಖ ಕಷ್ಟಗಳಲ್ಲಿ ಬಾಗಿಯಾಗಿ ಸಮಾಜಕ್ಕೆ ಆದರ್ಶವಾಗಿರುವುದು ಅಬಿನಂದನೀಯ. ಶಶಿಧರ ಶೆಟ್ಟಿಯವರು ತನ್ನ ಸಂಸ್ಥೆಯ ಮಕ್ಕಳಿಗಾಗಿಯೇ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವುದು ಅಭಿನಂದನೀಯ. ಶಶಿಧರ ಶೆಟ್ಟಿಯವರು ಇಲ್ಲಿನ ತುಳು ಕನ್ನಡಿಗರ ಎಲ್ಲಾ ಸಂಘಟನೆಗಳಲ್ಲಿ ಸಕ್ರಿಯವಾಗಿ ಬಾಗವಹಿಸಿ ತಾನು ಸಂಪಾದಿಸಿದಲ್ಲಿ ಹೆಚ್ಚಿನ ಪಾಲನ್ನು ಸಮಾಜಕ್ಕೆ ನೀಡಿತ್ತಿದ್ದಾರೆ. ಎಲ್ಲರ ಯಸ್ಸಸ್ಸಿನ ಹಿಂದೆ ಬಾಳ ಸಂಗಾತಿ ಹಾಗೂ ತಾಯಿ ತಂದೆಯಂದಿರ ಕೊಡುಗೆ ಅಪಾರ. 25ನೇ ವೈವಾಹಿಕ ಜೀವನದ ಸಂದರ್ಭದಲ್ಲಿ ತಾಯಿಯ ಪಾದ ಪೂಜೆ ಮಾಡಿ ಅವರ ಆಶೀರ್ವಾದ ಪಡೆಯುತ್ತಿರುವುದು ಮುಂದಿನ ಪೀಳಿಗೆಗೆ ಮಾದರಿಯಾಗಲಿ. ಇದು ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಾಗಿರದೆ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯಕ್ರಮವಾಗಿದೆ.
-ಐಕಳ ಹರೀಶ್ ಶೆಟ್ಟಿ , ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರು (ಮುಖ್ಯ ಅತಿಥಿ)

ಶಶಿಧರ ಶೆಟ್ಟಿ ಯವರದ್ದು ದೊಡ್ಡ ಮನಸ್ಸು. ತನಗೆ ನೀಡಿದ ಎ ಜವಾಬ್ಧಾರಿಯನ್ನು ಸರಿಯಾಗಿ ನಿರ್ವಹಿಸುತ್ತಿದ್ದರೆ. ಬಂಟರ ಸಂಘ ಮುಂಬಯಿಯ ಬೋರಿವಲಿ ಶಿಕ್ಷಣ ಸಂಸ್ಥೆಯ ಯೋಜನೆಗೆ ಇವರು ಉತ್ತಮ ದೇಣಿಗೆಯನ್ನು ಇಂದು ಘೋಷಿಸಿದ್ದಾರೆ. ಇಂದು ದಾಂಪತ್ಯ ಜೀವನದ ಬೆಳ್ಳಿ ಹಬ್ಬವನ್ನು ಅರ್ಥಪೂರ್ಣ ವಾಗಿ ಆಚರಿಸುತ್ತಿರುವ ಶಶಿಧರ ಶೆಟ್ಟಿ ದಂಪತಿಗೆ ಬಂಟರ ಸಂಘ ಮುಂಬಯಿಯ ಪರವಾಗಿ ಅಬಿನಂದನೆಗಳು.
– ಚಂದ್ರಹಾಸ ಶೆಟ್ಟಿ,
ಅಧ್ಯಕ್ಷರು, ಬಂಟರ ಸಂಘ ಮುಂಬಯಿ (ಗೌರವ ಅತಿಥಿ)

ಶ್ರೀದೇವಿ ಯಕ್ಷ ಕಲಾ ನಿಲಯ ಮತ್ತು ಶಶಿಧರ ಶೆಟ್ಟಿ ದಂಪತಿಯ ವೈವಾಹಿಕ ಜೀವನದ ಬೆಳ್ಳಿ ಹಬ್ಬ ಅರ್ಥಪೂರ್ಣ ಕಾರ್ಯಕ್ರಮ. ವೈಯಕ್ತಿಕ ಕಾರ್ಯಕ್ರಮಕ್ಕೆ ಇಷ್ಟು ದೊಡ್ಡ ಮಟ್ಟದಲ್ಲಿ ಜನ ಸೇರಿಸುವುದೆಂದರೆ ಇದು ಜನಸಾಮಾನ್ಯರಿಗೆ ಶಶಿಧರ ಶೆಟ್ಟಿಯವರಲ್ಲಿನ ಪ್ರೀತಿಯನ್ನು ತೋರಿಸುತ್ತಿದೆ. ಯಕ್ಷಗಾನದ ಈ ಸಂಸ್ಥೆಯ ಮೂಲಕ ನಾಡಿನ ಕಲೆ, ಬಾಷೆ ಹಾಗೂ ಸಂಸ್ಕೃತಿಯನ್ನು ಈ ನೆಲದಲ್ಲಿ ಉಳಿಸಿ ಬೆಳೆಸುವ ಕಾರ್ಯವನ್ನು ಶಶಿಧರ ಶೆಟ್ಟಿಯವರು ಮಾಡುತ್ತಿರುವರು. ಶಶಿಧರ ಶೆಟ್ಟಿಯವರು ಅವರು ಒಪ್ಪಿಕೊಂಡ ಯಾವುದೇ ಕೆಲಸವನ್ನು, ಅದು ನಗರ ಪಾಲಿಕೆಯದ್ದೂ ಆಗಿರಬಹುದು ಮಾಡಿ ತೋರಿಸುತ್ತಾ ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಅಂತಹ ಉತ್ತಮ ಸಮಂಧವನ್ನು ಇವರು ಇಲ್ಲಿ ಬೆಳೆಸಿದ್ದಾರೆ.
– ಕರ್ನಿರೆ ವಿಶ್ವನಾಥ ಶೆಟ್ಟಿ,
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷರಾದ (ಗೌರವ ಅತಿಥಿ)

ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English