ಲಾಡ್ಜ್‌ನಲ್ಲಿದ್ದ 19 ವರ್ಷದ ಯುವತಿ ನಾಪತ್ತೆ

6:50 PM, Wednesday, April 6th, 2022
Share
1 Star2 Stars3 Stars4 Stars5 Stars
(No Ratings Yet)
Loading...

Prema ಮಂಗಳೂರು :  ಲಾಡ್ಜ್‌ನಲ್ಲಿದ್ದ ತುಮಕೂರಿನ 19 ವರ್ಷದ ಯುವತಿಯೊಬ್ಬಳು ಮಂಗಳೂರಿನಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಕಾಣೆಯಾದ ಬಾಲಕಿಯನ್ನು ತುಮಕೂರು ಜಿಲ್ಲೆ ಸಿರಾ ತಾಲೂಕಿನ ಕೆಂಚಪ್ಪನ ಹಳ್ಳಿಯ ಕೆ ವಡ್ಡರಹಳ್ಳಿಯ ನಿವಾಸಿ ಪ್ರೇಮಾ ಎಂದು ಗುರುತಿಸಲಾಗಿದೆ.

ಪ್ರೇಮಾ ಕಳೆದ ಭಾನುವಾರ ಚಿಕ್ಕಮ್ಮ ಲಕ್ಷ್ಮಿ ಅವರೊಂದಿಗೆ ಮಂಗಳೂರಿಗೆ ಬಂದಿದ್ದಳು.  ಏಪ್ರಿಲ್ 4ರ ಸೋಮವಾರ ಬೆಳಗ್ಗೆ 7.15ಕ್ಕೆ ಟೀ ತರಲು ಹೋದ ಯುವತಿ ಮಧ್ಯಾಹ್ನದ ನಂತರವೂ ವಾಪಸ್ ಬಂದಿಲ್ಲ. ಪ್ರೇಮಾ ತನ್ನ ಹೆತ್ತವರನ್ನು ಕಳೆದುಕೊಂಡಿದ್ದರಿಂದ ಅವಳನ್ನು ತನ್ನ ಚಿಕ್ಕಮ್ಮನವರು ನೋಡಿಕೊಳುತ್ತಿದ್ದು, ಅವಳಿಗೆ ಓದು ಬರಹ ಗೊತ್ತಿಲ್ಲ. ಅವಳು ಕೆಂಪು ಬಣ್ಣದ ಚೂಡಿದಾರ್ ಧರಿಸಿದ್ದಾಳೆ ಎಂದು ತಿಳಿಸಿದ್ದಾರೆ.

ನಾನು ಮತ್ತು ನನ್ನ ಪತಿ ಭಾಗಶಃ ಅಂಧತ್ವದಿಂದ ಬಳಲುತ್ತಿರುವುದರಿಂದ ಜೀವನೋಪಾಯಕ್ಕಾಗಿ ಭಿಕ್ಷೆ ಬೇಡುತ್ತೇವೆ ಎಂದು ಯುವತಿಯ ಚಿಕ್ಕಮ್ಮ ಲಕ್ಷ್ಮಿ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಅವರು ನಗರದ ಸ್ಟೇಟ್ ಬ್ಯಾಂಕ್ ಬಳಿಯ ರೀಗಲ್ ಪ್ಯಾಲೇಸ್ ಲಾಡ್ಜ್ ನಲ್ಲಿ ವಾಸವಾಗಿದ್ದಾರೆ. ದಂಪತಿ ಭಿಕ್ಷಾಟನೆಗೆ ತೆರಳುತ್ತಿದ್ದಾಗ ಬಾಲಕಿ ಲಾಡ್ಜ್‌ನಲ್ಲಿಯೇ ಇರುತ್ತಿದ್ದಳು ಎಂದು ಹೇಳಿದ್ದಾರೆ.

ಯುವತಿಯು ಕಪ್ಪು ಮೈಬಣ್ಣ, 4.5 ಅಡಿ ಎತ್ತರ ಹಾಗೂ ಬಲಗೈ ಮಧ್ಯದ ಬೆರಳನ್ನು ಕಳೆದುಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English