ಮಲ್ಪೆ ಬೀಚ್ ನ ಸಮುದ್ರದಲ್ಲಿ ನಡೆದಾಡಲು ತೇಲುವ ಸೇತುವೆ ಸಿದ್ದ

8:06 PM, Saturday, May 7th, 2022
Share
1 Star2 Stars3 Stars4 Stars5 Stars
(5 rating, 1 votes)
Loading...

ಉಡುಪಿ : ಮಲ್ಪೆ ಬೀಚ್ ನ ಸಮುದ್ರದಲ್ಲಿ ನಿರ್ಮಾಣಗೊಂಡ ತೇಲುವ ಸೇತುವೆಯನ್ನು ಉಡುಪಿ ಶಾಸಕ ರಘುಪತಿ ಭಟ್ ಉದ್ಘಾಟಿಸಿದ್ದಾರೆ.

ರಾಜ್ಯದಲ್ಲಿಯೇ ಪ್ರಥಮವಾಗಿ ತೇಲುವ ಸೇತುವೆಯನ್ನು ಮಲ್ಪೆ ಬೀಚ್​ನಲ್ಲಿ ನಿರ್ಮಿಸಲಾಗಿದೆ, ಇದರಿಂದ ಅಲೆಗಳ ಮೇಲೆ ನಡೆಯಲು ಸಾಧ್ಯವಾಗಿದೆ. ಪ್ರತಿ ಪ್ರವಾಸಿಗರಿಗೆ 15 ನಿಮಿಷಗಳ ಕಾಲ ಸೇತುವೆಯ ಮೇಲೆ ಇರಲು ಅವಕಾಶ ನೀಡಲಾಗುತ್ತದೆ.

ಮಲ್ಪೆ ಬೀಚ್ ನ ಸಮುದ್ರದಲ್ಲಿ ನಿರ್ಮಿಸಲಾಗಿರೋ ಈ ತೇಲುವ ಸೇತುವೆಯು 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲ ಹೊಂದಿದೆ. ಹೆಚ್ಚಿನ ಸಾಂದ್ರತೆಯ ಫೋಂಟೋನ್ಸ್ ಬ್ಲಾಕ್ ಗಳಿಂದ ಇದನ್ನು ಮಾಡಲಾಗಿದೆ.

ಇದರಲ್ಲಿ ಒಂದು ಬಾರಿಗೆ ನೂರು ಜನರು ಸಾಗಬಹುದು. ಸೇತುವೆಯ ಕೊನೆಯಲ್ಲಿ ಸಮುದ್ರಕ್ಕೆ ಚಾಚಿರುವ 12 ಮೀಟರ್ ಉದ್ದ 7.5 ಮೀಟರ್ ಅಗಲದ ವೇದಿಕೆ ಇದೆ ಇದರಲ್ಲಿ 15 ನಿಮಿಷ ಕಾಲ ಕಳೆಯಲು ಅವಕಾಶ ಕಲ್ಪಿಸಲಾಗಿದೆ.

ಒಂದೇ ಬಾರಿಗೆ 100 ಮಂದಿ ಪ್ರವಾಸಿಗರಿಗೆ ಸೇತುವೆಯ ಮೇಲೆ ನಡೆಯಲು ಅವಕಾಶ ನೀಡಲಾಗುವುದು ಮತ್ತು ಪ್ರವಾಸಿಗರಿಗೆ ಭದ್ರತೆ ಒದಗಿಸಲು 10 ಜೀವರಕ್ಷಕರನ್ನು ನಿಯೋಜಿಸಲಾಗುವುದು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಈ ಸೇತುವೆ ಪ್ರವಾಸಿಗರ ಪಾದದ ಕೆಳಗೆ ಸಮುದ್ರದ ಚಲನೆಯ ವಿಶಿಷ್ಟ ಅನುಭವವನ್ನು ನೀಡುತ್ತದೆ. ಹನುಮಾನ್ ವಿಟ್ಟೋಬ ಭಜನಾ ಮಂಡಳಿಯ ತಂಡವು ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ ಮತ್ತು ಪ್ರವಾಸಿಗರ ಭದ್ರತೆಗೆ ಆದ್ಯತೆ ನೀಡಲಾಗಿದೆ” ಎಂದು ಅವರು ತಿಳಿಸಿದ್ದಾರೆ.

ಸೇಂಟ್ ಮೇರಿಸ್ ದ್ವೀಪದಲ್ಲಿ ಇತ್ತೀಚಿನ ದುರಂತಗಳ ನಂತರ, ಜಿಲ್ಲಾಧಿಕಾರಿ ಎಂ ಕೂರ್ಮಾ ರಾವ್ ಮತ್ತು ಇತರ ಅಧಿಕಾರಿಗಳು ಸಭೆ ನಡೆಸಿ ಸೇತುವೆಯ ಭದ್ರತೆ ಪರಿಶೀಲಿಸಿದರು. ಯಾವುದೇ ದುರಂತಗಳನ್ನು ತಪ್ಪಿಸಲು, ಸರ್ಕಾರವು ಎರಡು ಜೆಟ್ ಸ್ಕೀಗಳನ್ನು ಖರೀದಿಸಿ ಸೇಂಟ್ ಮೇರಿಸ್ ದ್ವೀಪ ಮತ್ತು ಮಲ್ಪೆ ಬೀಚ್ನಲ್ಲಿ ತಲಾ ಒಂದನ್ನು ಇರಿಸಲಾಗಿದೆ.ನ80 ಲಕ್ಷ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿದ್ದು, ಬೆಳಗ್ಗೆ 9ರಿಂದ ಸಂಜೆ 6ರವರೆಗೆ ತೆರೆದಿರುತ್ತದೆ.

ಐದು ವರ್ಷ ಮೇಲ್ಪಟ್ಟವರು 100 ರೂಪಾಯಿ ಪಾವತಿಸಿ 15 ನಿಮಿಷಗಳ ಕಾಲ ಸಮುದ್ರದ ಮೇಲೆ ನಡೆಯಬಹುದು. ಸೇತುವೆಯ ಬಳಿ ದೋಣಿ ಯಾವಾಗಲೂ ಇರುತ್ತದೆ ಮತ್ತು 30 ಲೈಫ್​ ಬಾಯ್ ರಿಂಗ್​ಗಳು ಸೇತುವೆಯ ಮೇಲೆ ಇರುತ್ತವೆ ಎಂದು ಸುದೇಶ್ ತಿಳಿಸಿದ್ದಾರೆ.

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English