ಗುರುಪುರದ ಪ್ರದೇಶದ ಜಮೀನಿನಲ್ಲಿ ಬೆಂಕಿ, ಗೇಲ್ ಕಂಪೆನಿ ಗ್ಯಾಸ್ ಪೈಪ್‌ಲೈನ್ ಗೆ ಹಾನಿ

11:28 AM, Monday, May 9th, 2022
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಗುರುಪುರದ ದೋಣಿಂಜೆ ಪ್ರದೇಶದ ಹಡೀಲು ಜಮೀನಿನಲ್ಲಿ ರವಿವಾರ ಯಾರೋ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಒಣಹುಲ್ಲಿನ ಸಹಿತ ಹಲವು ತಾಳೆ, ಈಚಲು, ಮಾವು ಹಾಗೂ ಹಲಸಿನ ಮರಗಳು ಸುಟ್ಟು ಕರಕಲಾಗಿವೆ.

ಮಧ್ಯಾಹ್ನ ಕಾಣಿಸಿಕೊಂಡ ಈ ಬೆಂಕಿಯು ಸಂಜೆಯಾಗುತ್ತಲೇ ಕುಕ್ಕುದಕಟ್ಟೆ ಭಾಗದತ್ತ ವ್ಯಾಪಿಸಿದೆ, ಈ ಪ್ರದೇಶದಲ್ಲಿ ಗೇಲ್ ಕಂಪೆನಿಯವರು ಅಳವಡಿಸಿದ್ದ ಗ್ಯಾಸ್ ಪೈಪ್‌ಲೈನ್ ಸಂಪರ್ಕದ ಸೆನ್ಸಾರ್‌ಗೆ ಹಾನಿಯುಂಟಾಗಿದೆ. ಮಾಹಿತಿ ತಿಳಿದ ಕಂಪೆನಿಯವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಅಗ್ನಿಶಾಮಕ ದಳದವರು ಕಂಪೆನಿಯ ಉಪಕರಣಗಳಿಗೆ ಹಾನಿಯಾಗದಂತೆ ಒಂದು ಕಡೆಯಿಂದ ಬೆಂಕಿ ನಂದಿಸಿದರೂ, ಮತ್ತೊಂದು ಕಡೆಯಲ್ಲಿ ವ್ಯಾಪಕವಾಗಿ ಹರಡಿಕೊಂಡಿತ್ತು.

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English