ಸಮುದ್ರ ಪಾಲಾದ ಮಲ್ಪೆ ಬೀಚ್ ನ ತೇಲುವ ಬ್ರಿಡ್ಜ್

11:50 AM, Monday, May 9th, 2022
Share
1 Star2 Stars3 Stars4 Stars5 Stars
(No Ratings Yet)
Loading...

ಮಲ್ಪೆ : ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಅಳವಡಿಸಲಾಗಿದ್ದ ತೇಲುವ ಸೇತುವೆ(ಫ್ಲೋಟಿಂಗ್‌ ಬ್ರಿಡ್ಜ್‌) ಉದ್ಘಾಟನೆಯಾದ ಮೂರೇ ದಿನಕ್ಕೆ ಸಮುದ್ರ ಪಾಲಾಗಿದೆ.

ಸುಮಾರು 80 ಲಕ್ಷ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿದ್ದು.ಆದರೆ ಉದ್ಘಾಟನೆಯಾದ ಮೂರೇ ದಿನಕ್ಕೆ ಬ್ರಿಡ್ಜ್ ಭಾಗ ಚದುರಿ ಹೋಗಿ ಸಮುದ್ರಪಾಲಾಗಿದೆ.

ಭಾನುವಾರ ಬೆಳಗ್ಗೆಯಿಂದಲೇ ಕಡಲು ಪ್ರಕ್ಷುಬ್ಧವಾಗಿದ್ದು, ಅಲೆಗಳ ರಭಸ ಹೆಚ್ಚಿತ್ತು, ಅನುಭವಿಸಲು ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿದ್ದರೂ ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಜನರ ಸುರಕ್ಷತೆ ದೃಷ್ಟಿಯಿಂದ ಸೇತುವೆ ಮೇಲೆ ನಡೆದಾಡಲು ಅವಕಾಶ ನೀಡಿರಲಿಲ್ಲ.

ಸುಮಾರು 100 ಮೀ. ಉದ್ದ, 3.50 ಮೀ. ಅಗಲವಿದ್ದಈ ಸೇತುವೆಯನ್ನು ಹೆಚ್ಚಿನ ಸಾಂದ್ರತೆಯ ಫೋಂಟೋನ್ಸ್ ಬ್ಲಾಕ್ ಗಳಿಂದ ಇದನ್ನು ಮಾಡಲಾಗಿತ್ತು. ಆದರೆ ಅಲೆಗಳ ಭೀಕರ ಹೊಡೆತಕ್ಕೆ ಸಿಲುಕಿ ತೀವ್ರವಾಗಿ ಹಾನಿಯಾಗಿದ್ದು, ಸೇತುವೆ ಬಿಡಿಭಾಗಗಳು ಸಮುದ್ರ ಪಾಲಾಗಿದೆ.ಕೇರಳದ ಬೇಪೋರ್ ಬೀಚ್ ಹೊರತುಪಡಿಸಿದರೆ ದೇಶದ ಬೇರೆಲ್ಲೂ ಈ ರೀತಿಯ ತೇಲುವ ಸೇತುವೆ ಇರಲಿಲ್ಲ

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English