ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ – ಕರಾವಳಿ ಕರ್ನಾಟಕದ ಕೈಗಾರೀಕರಣದ ಬಗ್ಗೆ ಸಂವಾದ

5:40 PM, Thursday, May 12th, 2022
Share
1 Star2 Stars3 Stars4 Stars5 Stars
(No Ratings Yet)
Loading...

ಮುಂಬಯಿ : ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಾಲೀನ್ಯ ರಹಿತ ಸರ್ವತೋಮುಖ ಅಭಿವೃದ್ಧಿಗೆ ಕಳೆದ 22 ವರ್ಷಗಳಿಂದ ಹೋರಾಟ ನಡೆಸುತ್ತಾ ಯಶಸ್ವಿಯೊಂದಿಗೆ ಸಾಧನೆಯನ್ನು ಮಾಡುತ್ತಾ ಜಿಲ್ಲೆಗಳನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯುತ್ತಿರುವ ಮುಂಬಯಿಯ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ ಯ ವತಿಯಿಂದ ಮಾ. 7 ರಂದು ಕರಾವಳಿ ಕರ್ನಾಟಕದ ಕೈಗಾರೀಕರಣದ ಬಗ್ಗೆ ಸಂವಾದ ಕಾರ್ಯಕ್ರಮವು ಕುರ್ಲಾ ಪೂರ್ವದ ಬಂಟರ ಭವನದ ಸಭಾಗೃಹದಲ್ಲಿ ಮುಂಬಯಿಯ ಹಾಗೂ ನಾಡಿನ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.

ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ ಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಅಂದು ಸಂಜೆ ನಡೆದ ಸಮಾರಂಭವನ್ನು ಉತ್ತರ ಮುಂಬಯಿಯ ಸಂಸದರಾದ ಗೋಪಾಲ ಶೆಟ್ಟಿಯವರು ದೀಪ ಬೆಳಗಿಸಿ ಮಾತನಾಡುತ್ತಾ ನಮ್ಮ ದೇಶವು ಈಗದು ಉತ್ತಮ ಬದಲಾವಣೆಯತ್ತ ಸಾಗುತ್ತದೆ. ವಿದೇಶಿಯರು ಹಾಗೂ ವಿದೇಶದಲ್ಲಿ ನೆಲೆಸಿರುವ ಭಾರತೀಯರು ಮತ್ತು ಕರಾವಳಿಯ ತುಳು ಕನ್ನಡಿಗರು ನಮ್ಮ ದೇಶದಲ್ಲಿ ಹೂಡಿಕೆಯನ್ನು ಮಾಡಲು ಬಯಸುತ್ತಿದ್ದಾರೆ. ಜಯಕೃಷ್ಣ ಶೆಟ್ಟಿ ಯವ ರ ನೇತೃತ್ವದಲ್ಲಿ ನಡೆದಿರುವಂತಹ ಇಂತಹ ಸಂವಾದಗಳು ಹೆಚ್ಚಿನ ಮಟ್ಟದಲ್ಲಿ ನಡೆದಲ್ಲಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದಂತಾಗುವುದು. ನಮ್ಮ ಸರಕಾರವು ಕೈಗಾರೀಕರಣಕ್ಕೆ ಪ್ರೋತ್ಸಾಹವನ್ನು ನೀಡುತ್ತಿದೆ. ಇದೀಗ ನಮ್ಮ ದೇಶದಲ್ಲಿ ಹೊರದೇಶದಿಂದ ಆಮದು ಕಡಿಮೆಯಾಗುತ್ತಿದ್ದು ನಮ್ಮ ದೇಶದಿಂದ ಹೊರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಗ್ರಿಗಳು ರಫ್ತು ಆಗುತ್ತದೆ. ಕೈಗಾರೀಕರಣಕ್ಕೆ ನಮ್ಮ ದೇಶದಲ್ಲಿ ಇದು ಸರಿಯಾದ ಸಮಯವಾಗಿದ್ದು ಈ ಸಂದರ್ಭವನ್ನು ನಾವು ಉಪಯೋಗಿಸಿದ್ದಲ್ಲಿ ನಮ್ಮ ದೇಶದ ವಿದ್ಯಾವಂತ ಯುವಜನಾಂಗವು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಹಾಗೂ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವುದನ್ನು ಹತೋಟಿಗೆ ತರಬಹುದು. ನಾವು ನಮ್ಮ ದೇಶದಲ್ಲಿ ಕೈಗಾರಿಕರಣ ವನ್ನು ಬಲಪಡಿಸಬೇಕಾಗಿದೆ ಸಮಿತಿಯ ಇಂತಹ ಪ್ರಯತ್ನಕ್ಕೆ ನಮ್ಮ ಬೆಂಬಲವೂ ಸದಾ ಇದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಜಿಲ್ಲೆಯ ಅಭಿವೃದ್ಧಿಗೆ ಪಣತೊಟ್ಟಿರುವ ನಮ್ಮ ಸಮಿತಿ ಯು ಯಾವುದೇ ಜಾತಿ ಮತವನ್ನು ಹೊಂದಿಕೊಂಡಿಲ್ಲ ನಾವು ಪರಿಸರವಾದಿಗಳು ಮುಂಬಯಿಯ ಯಲ್ಲಿ ಇರುವ ಎಲ್ಲ ಜಾತಿಯ ಸಂಘಟನೆಗಳು ನಮ್ಮ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗಾಗಿ ನಮ್ಮ ಸಮಿತಿಯ ಮೂಲಕ ಕಂಕಣಬದ್ಧವಾಗಿದೆ. ನಾಗಾರ್ಜುನ ಯೋಜನೆಯು ಬಹಳ ಸಂದಿಗ್ಧ ಪರಿಸ್ಥಿತಿಯನ್ನು ನಿರ್ಮಿಸಿದ್ದು ಜಯ ಸುವರ್ಣರು ಇದ್ದಾಗ ಬಿಲ್ಲವ ಭವನದಲ್ಲಿ ಸಭೆ ಸೇರಿ ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ ಮತ್ತು ನಾಗಾರ್ಜುನ ಮಧ್ಯೆ ಟೆಕ್ನಾಲಾಜಿಕಲ್ ಅಂಡ್ ಎನ್ವರ್ಮೆಂಟ್ ಅಗ್ರಿಮೆಂಟ್ ಮಾಡಿದ್ದೆವು. ವಿವಿಧ ಸಮುದಾಯವನ್ನು ಒಂದೆಡೆ ಸೇರಿಸಿ ಒಂದೇ ವೇದಿಕೆಯ ಮೇಲೆ ತರುವುದು ಸುಲಭದ ಕೆಲಸವಲ್ಲ. ನಮ್ಮ ಸಮಾಜ ಮತ್ತು ಸಮಾಜ ಬಾಂಧವರನ್ನು ಪ್ರೀತಿಸುವುದು ನಮ್ಮ ಕರ್ತವ್ಯ ಆದರೆ ಇತರ ಸಮಾಜ ಮತ್ತು ಸಮಾಜ ಬಾಂಧವರನ್ನು ಪ್ರೀತಿಸುವುದು ನಮ್ಮ ಆದ್ಯ ಕರ್ತವ್ಯ. ಎಲ್ಲ ಸಂದಿಗ್ಧ ಪರಿಸ್ಥಿತಿಯನ್ನು ದಾಟಿ ನಮ್ಮ ಸಮಿತಿಯು ಪರಿಸರಕ್ಕೆ ಹಾನಿಯಾಗದೆ ಯಾವುದೇ ಕೈಗಾರಿಕಾ ಉದ್ಯಮಗಳು ಕರಾವಳಿ ಜಿಲ್ಲೆಗಳನ್ನು ಸ್ಥಾಪನೆಗೊ ವುದಾದರೆ ನಮ್ಮ ಬೆಂಬಲವಿದೆ ಜಿಲ್ಲೆಯಅಭಿವೃದ್ಧಿಗೊಳಿಸಲು ಸಮಿತಿ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದೆ ಅದಕ್ಕೆ ಸರಕಾರ ಕೂಡ ಸ್ಪಂದಿಸುತ್ತಿದೆ. ಪರಿಸರ ಮತ್ತು ನಮ್ಮ ಜನರಿಗೆ ಅನ್ಯಾಯವಾದಾಗ ನಿರಂತರವಾಗಿ ಹೋರಾಡುತ್ತಿದೆ ಎಂದರು.

ಕೈಗಾರಿಕಾ ಉದ್ಯಮಿ ವಿಶ್ವಾತ್ ಕೆಮಿಕಲ್ಸ್ ಲಿ. ನ ಕಾರ್ಯಾಧ್ಯಕ್ಷ ಬಿ. ವಿವೇಕ್ ಶೆಟ್ಟಿ : ದೇವರ ನಾಡು ಎಂದೇ ಕರೆಯಲ್ಪಡುವ ಕೇರಳ ಕಳೆದ ಇಪ್ಪತ್ತು ವರ್ಷಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಪ್ರವಾಸ ಕೇಂದ್ರವಾಗಿ ಖ್ಯಾತಿ ಪಡೆದಿದೆ. ಆದರೆ ತಲಪಾಡಿ ಯಿಂದ ಕಾರವಾರದ ತನಕದ ನಮ್ಮ ಜಿಲ್ಲೆಗಳಲ್ಲಿ ಅದೆಷ್ಟು ಪ್ರವಾಸಿ ಗರನ್ನು ಆಕರ್ಷಿಸುವ ಸ್ಥಳಗಳಿದ್ದರೂ ಸರಕಾರವು ಅದನ್ನು ಒಂದು ಉತ್ತಮ ಅಂತರಾಷ್ಟ್ರೀಯ ಪ್ರವಾಸ ಕೇಂದ್ರವಾಗಿ ಪರಿವರ್ತಿಸದೆ ಇರುವುದು ದುಃಖದ ಸಂಗತಿ ಇದೀಗ ಸಮಯ ಮೀರಿದೆ ಸುಮಾರು 20 ವರ್ಷಗಳಿಂದ ಎಂ.ಆರ್.ಆರ್.ಪಿ. ಎಲ್ ಕಂಪನಿಯು ಮಂಗಳೂರಿನಲ್ಲಿ ಸ್ಥಾಪನೆಯಾಗಿದ್ದು ಅದರ ನಂತರ ಅದಕ್ಕೆ ಸಂಬಂಧಪಟ್ಟಂತೆ ಅನೇಕ ಉದ್ದಿಮೆಗಳು ಸ್ಥಾಪನೆ ಗೊಂಡವು. ನಮ್ಮ ಜಿಲ್ಲೆಗಳಲ್ಲಿ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರಕ್ಕಾಗಿ ಪ್ರತಿವರ್ಷ ಐನೂರರಿಂದ ಆರುನೂರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತೇವೆ. ಇದರಿಂದ ಯಾವುದೇ ಹಾನಿ ಇಲ್ಲ. ಆದರೆ ಇದರಿಂದ ಸ್ವಲ್ಪ ಅಂಶವನ್ನಾದರೂ ಶಿಕ್ಷಣಕ್ಕೆ ಹಾಗೂ ಆರೋಗ್ಯಕ್ಕೆ ವಿನಿಯೋಗದಲ್ಲಿ ಅದು ಇನ್ನೂ ಪ್ರಯೋಜನವಾದೀತು. ನಮ್ಮದು ಬಹಳ ಸುಂದರವಾದ ಕರಾವಳಿ. ಶಾರದೆ ಮತ್ತು ಸರಸ್ವತಿ ನಮ್ಮ ಕರಾವಳಿಯಲ್ಲಿ ನೆಲೆಯೂರಿದ್ದಾರೆ. ದೇಶದ ಇತರೆಡೆಯಿಂದ ಶಿಕ್ಷಣಕ್ಕಾಗಿ ಹಾಗೂ ಉದ್ಯೋಗಕ್ಕಾಗಿ ಜನರು ಇಲ್ಲಿಗೆ ಬರುತ್ತಾರೆ. ನಮಗೆ ಕೈಗಾರಿಕೆಗಳನ್ನು ರಕ್ಷಿಸಬಹುದು ಅದರೊಂದಿಗೆ ಪರಿಸರವನ್ನು ರಕ್ಷಿಸಬಹುದು. ಎಲ್ಲದಕ್ಕೂ ಸರ್ಕಾರದ ಬೆಂಬಲ ಕೂಡ ಇದಕ್ಕೆ ಅಗತ್ಯ.

ಇಂಡಿಯನ್ ಬಂಟ್‌ ಛೇಂಬರ್ ಕಾಮರ್ಸ್ ಇಂಡಸ್ಟ್ರೀಸ್‌ನ ಕಾರ್ಯಾಧ್ಯಕ್ಷ ಕೆ.ಸಿ ಶೆಟ್ಟಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ರೀತಿಯ ಕೈಗಾರಿಕೆಗಳು ಪ್ರಾರಂಭಿಸಬಹುದು ಮುಖ್ಯವಾಗಿ ಅದಕ್ಕೆ ಮೂಲಭೂತ ಸೌಕರ್ಯದ ಅಗತ್ಯವಿದೆ. ಈ ಬಗ್ಗೆ ನಾವು ನಮ್ಮ ಎಲ್ಲಾ ಚೇಂಬರ್ ಆಫ್ ಕಾಮರ್ಸ್ ಸೇರಿ ಮುಖ್ಯಮಂತ್ರಿಗಳನ್ನು ಹಾಗೂ ಅವರ ಟೀಮನ್ನು ಸಂಪರ್ಕಿಸಿ ಮಾತನಾಡುವುದರ ಮೂಲಕ ನಮಗೆ ಈ ಕೆಲಸವನ್ನು ಮುಂದುವರಿಸಲು ಸಾಧ್ಯ ಪರಿಸರ ಪ್ರೇಮಿ ನಮ್ಮೊಂದ ಸಹಕಾರವನ್ನು ನೀಡಬೇಕು.

ಮುಂಬಯಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ : ನಾನು ಮುಂಬೈಯಲ್ಲಿ ಹೋಟೆಲು ಉದ್ಯಮವನ್ನು ನಡೆಸುತ್ತ ಬಂದಿದ್ದರು ಕೂಡ ನನ್ನ ಊರಿನ ಅಭಿಮಾನದಿಂದ ಕಟ್ಟಡ ನಿರ್ಮಾಣ ಮಾಡುವ ಉದ್ಯಮವನ್ನು ನಡೆಸಿದೆ ಆದರೆ ಸರಕಾರದ ಕೆಲವೊಂದು ನಿಯಮಗಳು ತೊಂದರೆಗಳನ್ನು ನೀಡಿದೆ. ಸರಕಾರ ಜಿಲ್ಲೆಯಲ್ಲಿ ಉದ್ಯಮವನ್ನು ನಡೆಸಿ ಎಂದು ಕರೆಕೊಡುತ್ತದೆ ಆದರೆ ಅದಕ್ಕೆ ಸ್ಪಂದಿಸುವುದಿಲ್ಲ. ಮತ್ತು ನಮ್ಮೂರಿನ ಜನ ಹೊರಗಿನಿಂದ ಬರುವ ಉದ್ಯಮಿಗಳಿಗೆ ತೊಂದರೆಯನ್ನೇ ಹೆಚ್ಚು ಕೊಡುವುದು ಹೊರತು ಅವರನ್ನು ಪ್ರೋತ್ಸಾಹಿಸಿದ್ದು ಕಡಿಮೆ.

ಉಡುಪಿ ಛೇಂಬರ್ ಕಾಮರ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಅಂಡಾರ್ ದೇವಿಪ್ರಸಾದ್ ಶೆಟ್ಟಿ : ಕೈಗಾರಿಕೋದ್ಯಮದಿಂದ ಅನೇಕರಿಗೆ ಉದ್ಯೋಗ ಸಿಗುತ್ತದೆ ಮಾತ್ರವಲ್ಲದೆ ಅನೇಕ ಸಂಸಾರಗಳಿಗೆ ಅಧಾರವಾಗುತ್ತದೆ. ವಿಶಾಲವಾದ ಕರಾವಳಿಯನ್ನು ಹೊಂದಿದ ಸುಮಾರು 32- 33 ಲಕ್ಷ ಜನಸಂಖ್ಯೆಯನ್ನು ಹೊಂದಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯನ್ನು ನೋಡಿದಾಗ ಇಲ್ಲಿನ ನಾಲ್ಕು ಪಟ್ಟು ಜನ ಮುಂಬಯಿಯಲ್ಲಿ ಉದ್ಯೋಗದಲ್ಲಿರಬಹುದು. ಕೇವಲ 10% ಜನರು ಮಾತ್ರ ಇಲ್ಲಿ ಉದ್ಯೋಗ ನಿರತರಾಗಿದ್ದಾರೆ. ಮತ್ತೆಲ್ಲಾ ಜನ ಉದ್ಯೋಗಪತಿ ಗಳಾಗಿದ್ದಾರೆ ನಮ್ಮ ಜಿಲ್ಲೆಯಲ್ಲಿ ಸರಕಾರದ ನೀತಿ ನಿಯಮಗಳಿಂದಾಗಿ ಈ ಪ್ರದೇಶದಲ್ಲಿ ಕೈಗಾರಿಕೋದ್ಯಮಗಳು ಅಭಿವೃದ್ದಿಯಾಗದೇ ಇರುವುದು ವಿಷಾದನೀಯ. ಪರಿಸರ ನಮ್ಮ ಕರ್ತವ್ಯ, ಪರಿಸರವನ್ನು ಕಾಪಾಡಿದರೆ ಮಾತ್ರ ಮುಂದಿನ ಜನಾಂಗಕ್ಕೆ ಪ್ರಯೋಜನಕಾರಿಯಾಗುವುದು, ಕೈಗಾರಿಕೆಗಳಿಂದ ಅನೇಕರಿಗೆ ಉದ್ಯೋಗಳು ಸಿಗುದರೊಂದಿಗೆ ಅನೇಕ ಕುಟುಂಬಕ್ಕೆ ಆಧಾರವಾಗುತ್ತದೆ. ಎಲ್ಲಿ ಕೈಗಾರಿಕೋದ್ಯಮ ನಡೆಸುವವರಿಗೆ ನಮ್ಮ ಚೇಂಬರ್ ಆಫ್ ಕಾಮರ್ಸ್ ಸಹಕಾರ ನೀಡುತ್ತದೆ.

ದುಬಾಯಿಯ ಕೈಗಾರಿಕೋದ್ಯಮಿ ರ ಡಾ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ : ಸುಮಾರು 70- 80 ವರ್ಷಗಳ ಹಿಂದೆ ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಅಷ್ಟು ಉದ್ಯಮಗಳು ಇರಲಿಲ್ಲ ಹೆಚ್ಚಾಗಿ ಕೃಷಿಯನ್ನು ಮಾಡುತ್ತಿದೆ ನಮ್ಮವರು ಹೆಚ್ಚಿನವರು ಉದ್ಯೋಗ ಉದ್ದಿಮೆಗಾಗಿ ಮುಂಬಯಿ ಬೆಂಗಳೂರು ಹುಬ್ಬಳ್ಳಿ ಪುನಾ ಮುಂತಾ ತಡೆ ಬರಿಗೈಯಲ್ಲಿ ಹೋಗಿ ನೆಲೆಸಿದ್ದರು ಪರಿಶ್ರಮ ಸಾಧನೆ ಮೂಲಕ ಯಶಸ್ವಿ.ಕೊಂಡಿದ್ದಾರೆ. ನಮ್ಮ ಜಿಲ್ಲೆಯ ಜನ ಹಣದ ಕೊರತೆಯಿಂದ ಬಡವನಲ್ಲ ಹೊರತು ಮಹಾತ್ವಕಾಂಕ್ಷೆ ಹಾಗೂ ಮುಂದಿನ ಯೋಜನೆ ಯನ್ನು ರೂಪಿಸುವ ಕೊರತೆಯಿಂದ ಬಡವರಾಗಿದ್ದಾರೆ ಆದರೆ ಜಯಕೃಷ್ಣ ಪರಿಸರಪ್ರೇಮಿ ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಮತ್ತು ಅಭಿವೃದ್ಧಿಯ ಕಾರ್ಯಗಳು ನಡೆಸುವುದಕ್ಕಾಗಿ ತೂರಾಟ ನಡೆಸಿದ್ದರಿಂದ ಇದೀಗ ಜಿಲ್ಲೆ ಅಭಿವೃದ್ಧಿಯನ್ನು ಗೊಂಡಿದೆ. ಹಲವಾರು ಉದ್ಯಮಗಳು ನಮ್ಮ ಊರಿನಲ್ಲಿ ಮುಖಮಾಡಿದ. ಕರಕೂಡ ಹಲವಾರು ಯೋಜನೆಗಳನ್ನು ರೂಪಿಸಿದೆ ಇದು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿದೆ.

ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಕಾರ್ಯಾಧ್ಯಕ್ಷ ಎನ್, ಟಿ. ಪೂಜಾರಿ : ಮುಂಬೈಯಿಂದ ನಾವು ಕಷ್ಟಪಟ್ಟು ದುಡಿದು ಸಂಪಾದಿಸಿ ದಂತಹ ಹಣವನ್ನು ಊರಿನಲ್ಲಿ ಉದ್ಯಮಕ್ಕೆ ವಿನಿಯೋಗಿಸಿ ಅಲ್ಲಿ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡುತ್ತೇವೆ. ಆದರೆ ನಮ್ಮ ಸರ್ಕಾರದಿಂದ ಅಥವಾ ಸರಕಾರಕ್ಕೆ ಸಂಬಂಧಪಟ್ಟ ಯಾವುದೇ ಆರ್ಥಿಕ ಸಂಸ್ಥೆಯಿಂದ ನಮಗೆ ನಮ್ಮ ಉದ್ಯಮಕ್ಕೆ ಸರಿಯಾದ ಸಹಾಯ ಹಾಗೂ ಪ್ರೋತ್ಸಾಹ ದೊರಕದೆ ಇರುವುದು ವಿಷಾದನೀಯ. ಆದರೂ ಕೂಡ ನಾನು ಖಾಸಗಿ ಬ್ಯಾಂಕುಗಳ ಸಹಾಯದಿಂದ ಅಲ್ಲಿ ಉದ್ದಿಮೆಯನ್ನು ಪ್ರಾರಂಭಿಸಿದ್ದೇನೆ. ಸರಕಾರ ಉದ್ಯಮಿಗಳಿಗೆ ಸಾಕಷ್ಟು ಬೆಂಬಲ ನೀಡಿದಲ್ಲಿ ನಮ್ಮ ಕರಾವಳಿ ಅಭಿವೃದ್ಧಿ ಆಗುವುದರಲ್ಲಿ ಸಂದೇಹವಿಲ್ಲ.

ಬಿಲ್ಲವರ ಅಸೋಸಿಯೇಶನ್‌ನ ಮುಂಬಯಿ ಅಧ್ಯಕ್ಷ ಹರೀಶ್ ಜಿ. ಅಮೀನ್ : ನಾನು ಮುಂಬೈಯಲ್ಲಿ ಹುಟ್ಟಿ ಬೆಳೆದಿದ್ದು ಇಲ್ಲಿರುವ ಇತರ ಗಣ್ಯರಿ ಗಿಂತ ನನಗೆ ನಮ್ಮ ಜಿಲ್ಲೆಗಳಲ್ಲಿ ಪ್ರೀತಿ ಕಡಿಮೆ ಇರಲೂಬಹುದು ನಾನು ಎಳೆಯ ಪ್ರಾಯದಲ್ಲಿ ಉದ್ಯಮವನ್ನು ಪ್ರಾರಂಭಿಸಿದ್ದೇನೆ. ಉದ್ಯಮ ಪ್ರಾರಂಭಿಸುವುದು ಸುಲಭದ ಕಾರ್ಯವಲ್ಲ ಸರಕಾರದ ಕೆಲವು ವಿಚಾರದಲ್ಲಿ ಪಾಲಿಸಲೇ ಬೇಕಾಗುತ್ತದೆ. ಜಯಶ್ರೀಕೃಷ್ಣ ಪರಿಸರಪ್ರೇಮಿ ಯು ನಮ್ಮ ಜಿಲ್ಲೆಗಳ ಅಭಿವೃದ್ಧಿ ಬಗ್ಗೆ ನಡೆದಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ.

ಕರ್ನಾಟಕ ಸ್ಟೇಟ್ ಹ್ಯಾಂಡಿಕ್ರಾಫ್ಟ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿ. ನ. ಕಾರ್ಯಾಧ್ಯಕ್ಷ ಡಾ| ಬೇಲೂರು ರಾಘವೇಂದ್ರ ಶೆಟ್ಟಿ : ಇಂದು ನಡೆದ ವಿಚಾರಸಂಕಿರಣಗಳ ಅರ್ಥಪೂರ್ಣವಾಗಿದೆ ಕರ್ನಾಟಕದಲ್ಲಿ ಉದ್ಯಮವನ್ನು ನಡೆಸುವ ಜನರಿಗೆ ಬೆಂಬಲ ನೀಡಬೇಕೆನ್ನುವ ವಿಚಾರ ಇಲ್ಲಿ ಬಾಳಷ್ಟು ಉದ್ದಿಮೆಗಳು ತಿಳಿಸಿದ್ದಾರೆ ಅವರಿಗೆ. ಸಹಕಾರ ನೀಡುವ ನಿಟ್ಟಿನಲ್ಲಿ ಇಲ್ಲಿಯ ವಿಚಾರಗಳನ್ನು ಮತ್ತು ಉದ್ಯಮಿಗಳ ಸಮಸ್ಯೆಗಳನ್ನು ಸರಕಾರಕ್ಕೆ ತಿಳಿಸುವ ಕೆಲಸಗಳನ್ನು ಮಾಡುತ್ತೇವೆ .

ದಿಕ್ಸೂಚಿ ಭಾಷಣ ಮಾಡಿದ ಮಾಜಿಎಂ ಎಲ್ ಸಿ. ಬಿಜೆಪಿ ನಾಯಕ ಕ್ಯಾ| ಗಣೇಶ್ ಅವರು ದಿಕ್ಸೂಚಿ ಭಾಷಣ ಮಾಡಿದರು.

ಉದ್ಯಮಿ ಆನಂದ ಎಂ. ಶೆಟ್ಟಿ, ತೋನ್ಸೆ , ಅರುಣ್ ಭುಟ್ಕ ಮಾಜಿ ನಿರ್ದೇಶ – ಟೊಯೊ ಇಂಜಿನಿಯರಿಂಗ್ ಲಿಮಿಟೆಡ್, ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ರವಿ ಎಸ್. ದೇವಾಡಿಗ, ಸಮಿತಿಯ ಕೋಶಾಧಿಕಾರಿ ತುಳಸಿದಾಸ್ ಎಲ್. ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

ಸಮಿತಿಯ ಮಾಜಿ ಅಧ್ಯಕ್ಷರುಗಳಾದ ನ್ಯಾ. ಸುಭಾಷ್ ಶೆಟ್ಟಿ. ವಿಶ್ವನಾಥ ಮಾಡ, ಹರೀಶ್ ಕುಮಾರ್ ಶೆಟ್ಟಿ ಉಪಾಧ್ಯಕ್ಷರುಗಳಾದ ಪಿ ಧನಂಜಯ ಶೆಟ್ಟಿ, ನಿತ್ಯಾನಂದ ಡಿ., ಕೋಟ್ಯಾನ್, ಸಿಎ ಐ.ಆರ್. ಶೆಟ್ಟಿ , ಡಾ. ಆರ್. ಕೆ. ಶೆಟ್ಟಿ, ಹ್ಯಾರಿ ಸಿಕ್ವೇರಾ, ಬಿ. ಮುನಿರಾಜ್, ಗೌರವ ಜೊತೆ ಕೋಶಾಧಿಕಾರಿ ಸದಾನಂದ ಆಚಾರ್ಯ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. ಪ್ರಭಾಕರ ಶೆಟ್ಟಿ ಬೊಳ, ಎಂ. ಎನ್. ಕರ್ಕೇರ, ದಯಾಸಾಗರ ಚೌಟ, ಶ್ಯಾಮ್ ಎನ್. ಶೆಟ್ಟಿ, ಕರುಣಾಕರ ಹೆಜಮಾಡಿ, ಡಾ. ಸುರೇಂದ್ರ ಕುಮಾರ್ ಹೆಗ್ಡೆ, ಡಾ. ತೋನ್ಸೆ ವಿಜಯಕುಮಾರ್ ಶೆಟ್ಟಿ, ರಮಾನಂದ ರಾವ್, ರಾಮಚಂದ್ರ ಗಾಣಿಗ, ಉತ್ತಮ್ ಶೆಟ್ಟಿಗಾರ್, ಚಿತ್ರಾಪು ಕೆ. ಎಂ. ಕೋಟ್ಯಾನ್, ರಾಕೇಶ್ ಭಂಡಾರಿ, ಜಯಪ್ರಕಾಶ್ ಹೆಗ್ಡೆ , ನ್ಯಾ. ಶಶಿಧರ ಕಾಪು ಮತ್ತು ಸಿ.ಎಸ್.ಗಣೇಶ್ ಎಸ್. ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉಪಾಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಮತ್ತು ಡಾ. ಸುರೇಂದ್ರ ಕುಮಾರ್ ಹೆಗಡೆ ನಿರೂಪಿಸಿದರು.

ಸಭೆಯಲ್ಲಿ ವಿವಿಧ ಜಾತಿಯ ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳು,ಪರಿಸರ ಪ್ರೇಮಿ ಸಮಿತಿಯಿಂದ ಹಿತೈಷಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಚಿತ್ರ : ದಿನೇಶ್ ಕುಲಾಲ್

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English