- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಓಝೋನ್ ಪದರ ಸಂರಕ್ಷಿಸುವ ಭರದಲ್ಲಿ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣರಾಗಿದ್ದೇವೆ – ಡಾ. ಸಿದ್ಧರಾಜು ಎಂ.ಎನ್

[1]

ಮಂಗಳೂರು : ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಇಲ್ಲಿಯ ತೃತೀಯ ವರ್ಷದ ಜೀವ ವಿಜ್ಞಾನ ವಿದ್ಯಾರ್ಥಿಗಳು ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ಅಂತರಾಷ್ಟ್ರೀಯ ಓಝೋನ್ ಪದರ ಸಂರಕ್ಷಣಾ ದಿನವನ್ನು ಆಚರಿಸಿದರು.

ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಸಿದ್ದರಾಜು M N ಅವರು ಮಾಂಟ್ರಿಯಲ್ ಒಪ್ಪಂದ, ಕಿಗಲೀ ಒಪ್ಪಂದ ಹಾಗು CFC, HCFC ಗಳ ಉಪಯೋಗದಿಂದಾಗುವ ಓಜೋನ್ ಪದರ ಸವಕಳಿ ಮತ್ತು ತಾಪಮಾನ ಏರಿಕೆ ಕುರಿತಾಗಿ ಸವಿಸ್ತಾರವಾಗಿ ಮಾಹಿತಿ ನೀಡಿ, CFC ಗಳ ಉತ್ಪಾದನೆ ಮತ್ತು ಬಳಸುವಿಕೆಯನ್ನು ನಿರ್ಬಂಧಿಸಿದ ನಂತರ ಅದರ ಬದಲಾಗಿ ಉಪಯೋಗಿಸುತ್ತಿರುವ ಹಲವು ರಾಸಾಯನಿಕ ಸಂಯುಕ್ತಗಳು ತಾಪಮಾನ ಏರಿಕೆಗೆ ಕಾರಣವಾಗುತ್ತಿವೆ ಎಂದು ತಿಳಿಸಿದರು.

ಇದೆ ರ್ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಲೇಖನ್, ವನೀಶ್, ಸೃಜನ್, ಮತ್ತು ಅಕ್ಷಯ್ ರವರು ಪ್ರಥಮ ವಿಜ್ಞಾನ ವಿದ್ಯಾರ್ಥಿಗಳಿಗೆ ಓಜೋನ್ ಸಂಬಂಧಿತ ಮೂಕಾಭಿನಯ, ಒಗಟುಗಳು ಮತ್ತು ತಾರ್ಕಿಕ ಪ್ರಶ್ನಾವಳಿ ಚಟುವಟಿಕೆಗಳನ್ನು ನಡೆಸಿ ಓಜೋನ್ ದಿನವನ್ನು ಸಂಭ್ರಮದಿಂದ ಆಚರಿಸಿದರು.

ಕಾರ್ಯಕ್ರಮವು ತೃತೀಯ ವಿಜ್ಞಾನ ವಿದ್ಯಾರ್ಥಿನಿ ಕು. ದೇವಕಿ ಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಕು. ಸ್ವಾತಿ ನಾಯಕ್ ಸ್ವಾಗತಿಸಿದರೆ, ಕು. ಖುಷಿ ಇವರು ವಂದಿಸಿದರು.