ಮಂಗಳೂರು : ನೆರೆಯ ಕೇರಳದಲ್ಲಿ 5 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬಂದ ಟೊಮೇಟೊ ಜ್ವರದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ವಿಶೇಷ ನಿಗಾ ಇರಿಸಲು ಆರೋಗ್ಯ ಇಲಾಖೆ ಸೂಚಿಸಿದೆ.
ಈ ಕಾಯಿಲೆಯು ಸಾಮಾನ್ಯವಾಗಿ ಚರ್ಮದ ತುರಿಕೆ, ಮೈಯಲ್ಲಿ ಕೆಂಪಾಗುವುದು, ತೀವ್ರಜ್ವರ, ಮೈ-ಕೈ ನೋವು, ಕೀಲು ನೋವು, ಆಯಾಸ ಮೊದಲಾದ ಲಕ್ಷಣಗಳಿರುತ್ತದೆ.
“ಕೋವಿಡ್‌ಗೂ ಈ ಕಾಯಿಲೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಮಕ್ಕಳ ಮೈಯಲ್ಲಿ ಯಾವುದೇ ರೀತಿಯ ಗುಳ್ಳೆಗಳು ಕಂಡುಬಂದಲ್ಲಿ ವೈದ್ಯರ ಭೇಟಿಯಾಗಬೇಕು. ಸದ್ಯಕ್ಕೆ ದ.ಕ. ಜಿಲ್ಲೆಯಲ್ಲಿ ಈ ರೀತಿಯ ಗುಣಲಕ್ಷಣ ಇರುವ ಮಕ್ಕಳ ಮಾಹಿತಿ ಇಲ್ಲ.
ಕುತ್ತಾರು ಮೂಲದ ಎರಡೂವರೆ ವರ್ಷದ ಮಗುವಿಗೆ ಮೂರು ವಾರದ ಹಿಂದೆ ಜ್ವರ ಸಹಿತ ಕಾಲಿನಡಿ, ಮೊಣಕಾಲು, ಮುಖ, ಕೈಯಲ್ಲಿ ಟೊಮೇಟೊ ಬಣ್ಣದ ಗುಳ್ಳೆಗಳು ಮೂಡಿದ್ದವು. ತತ್‌ಕ್ಷಣ ವೈದ್ಯರನ್ನು ಭೇಟಿಯಾಗಿದ್ದರು. ಸೂಕ್ತ ಚಿಕಿತ್ಸೆಯ ಬಳಿಕ ಗುಣಮುಖವಾಗಿದೆ. ಈ ಗುಣಲಕ್ಷಣ ಹೊಂದಿದ ರೋಗಿಗಳು ಈ ಹಿಂದೆಯೂ ಚಿಕಿತ್ಸೆ ಪಡೆದಿದ್ದರು’ ಎನ್ನುತ್ತಾರೆ.
Click this button or press Ctrl+G to toggle between Kannada and English