ಸಾಲ ಮರು ಪಾವತಿಸಿದರೂ, ಕಂತು ಬಾಕಿಯಿದೆ ಎಂದು ವಾಹನ ಜಪ್ತಿ ಮಾಡಿ ಮಾರಾಟ ಮಾಡಿದ ಯೂನಿಯನ್ ಬ್ಯಾಂಕಿಗೆ ದಂಡ

1:50 PM, Sunday, May 15th, 2022
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ವ್ಯಕ್ತಿಯೊಬ್ಬರು ಬ್ಯಾಂಕ್‌ನಿಂದ ವಾಹನ ಸಾಲ ಪಡೆದು ಸರಿಯಾಗಿ ಸಾಲದ ಕಂತು ಮರುಪಾವತಿ ಮಾಡಿದ್ದರೂ ಖಾತೆಯನ್ನು ಎನ್‌ಪಿಎ ಎಂದು ಘೊಷಿಸಿ, ವಾಹನವನ್ನೂ ಮಾರಾಟ ಮಾಡಿದ ಬ್ಯಾಂಕ್‌ನ ಕ್ರಮವನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ವಾಣಿಜ್ಯ ನ್ಯಾಯಾಲಯ ಕಾನೂನಿಗೆ ವಿರುದ್ಧ ಎಂದು ಅಭಿಪ್ರಾಯಪಟ್ಟು, ದಂಡ ವಿಧಿಸಿದೆ.

ನ್ಯಾಯಾಲಯ ಬ್ಯಾಂಕ್‌ ಶಾಖೆಯು ದಾನೇಶ್‌ ಅವರಿಗೆ ನಷ್ಟ ಪರಿಹಾರವಾಗಿ 1 ಲಕ್ಷ ರೂ. ಮೊತ್ತಕ್ಕೆ ಶೇ. 10 ಬಡ್ಡಿ ಸೇರಿಸಿ ನೀಡುವಂತೆ ತೀರ್ಪು ನೀಡಿದ್ದಾರೆ.

ಕಾರ್ಪೋರೆಶ‌ನ್‌ ಬ್ಯಾಂಕ್‌ ಕಾವೂರು ಶಾಖೆಯಿಂದ ಎಂ.ಎಸ್‌. ದಾನೇಶ್‌ ಸಾಲ ಪಡೆದು ವಾಹನ ಖರೀದಿಸಿದ್ದರು. ಇವರ ವಿರುದ್ಧ ಬ್ಯಾಂಕ್‌ ಈಗ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ವಾಣಿಜ್ಯ ನ್ಯಾಯಾಲಯದಲ್ಲಿ ದಾವೆ ಸಂಖ್ಯೆ 289/2020ನ್ನು ಸಾಲ ಮರುಪಾವತಿಯ ಆದೇಶಕ್ಕಾಗಿ ಹೂಡಿದ್ದು ಸಾಲವನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿಸಿಲ್ಲ ಎಂದು ವಾದಿಸಿ ವಾಹನವನ್ನು ಮುಟ್ಟುಗೋಲು ಹಾಕಿ ಮಾರಾಟ ಮಾಡಿದ್ದರು.

ಎರಡೂ ಪಕ್ಷಗಾರರ ಸಾಕ್ಷ್ಯಾಧಾರ ಗಮನಿಸಿದ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ, ಸಾಲಗಾರ ದಾನೇಶ್‌ ಅವರು ಸಕಾಲಕ್ಕೆ ಸಾಲ ಮರುಪಾವತಿ ಮಾಡುತ್ತಿದ್ದರು. ಅಲ್ಲದೆ ಉಳಿತಾಯ ಖಾತೆಯಿಂದ ಸಾಲದ ಖಾತೆಗೆ ಹಣವನ್ನು ವರ್ಗಾಯಿಸುವಂತೆ ವಿನಂತಿಸಿದ್ದರೂ ಬ್ಯಾಂಕ್‌ ಕರ್ತವ್ಯ ಮರೆತು ಅವರ ಸಾಲದ ಖಾತೆಯನ್ನು ಎನ್‌ಪಿಎ ಎಂದು ಘೊಷಿಸಿ, ವಾಹನ ಮುಟ್ಟುಗೋಲು ಹಾಕಿರುವುದು ಕಾನೂನಿಗೆ ವಿರುದ್ಧ ಎಂದು ಅಭಿಪ್ರಾಯಪಟ್ಟರು. ಪ್ರತಿವಾದಿಯ ಪರವಾಗಿ ವಕೀಲ ಕೆ.ಎಸ್‌. ನಂಬಿಯಾರ್‌ ಹಾಗೂ ವಿವೇಕ್‌ ನಂಬಿಯಾರ್‌ ವಾದಿಸಿದ್ದರು.

ಇದೆ ರೀತಿ ಕೆಲವು ಕೋಪರೇಟಿವ್ ಬ್ಯಾಂಕು ಗಳು ಎನ್‌ಪಿಎ ಎಂದು ಹೇಳಿ ಸಾಲಗಾರ ರ ಮಾನ ತೆಗೆದು ಸ್ಥಳೀಯ ಪಂಚಾಯತುಗಳಲ್ಲಿಯೂ ನೋಟೀಸು ಅಂಟಿಸಿ ಪತ್ರಿಕೆಗಳಲ್ಲಿ ಹಾಕಿ ಮಾನ ತೆಗೆಯುತ್ತಿರುವುದು ಇತ್ತೀಚಿಗೆ ನಡೆಯುತ್ತಿದೆ.

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English