ಹಾವಿನ ಮೊಟ್ಟೆಗೆ ಕಾವು ಕೊಡಲು 54 ದಿನ ರಾಷ್ಟ್ರೀಯ ಹೆದ್ದಾರಿ ಕೆಲಸ ನಿಲ್ಲಿಸಿದ ಇಲಾಖೆ

9:40 PM, Tuesday, May 17th, 2022
Share
1 Star2 Stars3 Stars4 Stars5 Stars
(No Ratings Yet)
Loading...

ಕುಂಬಳೆ : ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಹೊಣೆ ಹೊತ್ತಿರುವ ಉರಾಳುಂಗಲ್ ಸೊಸೈಟಿ ಅರಣ್ಯ ಇಲಾಖೆ ಅಧಿಕಾರಿಗಳು ಹಾವು ಮೊಟ್ಟೆ ಇಡುವ ತನಕ ಕಾಮಗಾರಿಯನ್ನು ಸ್ಥಗಿತಗೊಳಿಸಿತ್ತು.

ಸೋಮವಾರ 24 ಮೊಟ್ಟೆಗಳು ಒಡೆದಿವೆ. ಹದಿನೈದು ಹಾವಿನ ಮರಿಗಳನ್ನು ಕಾಡಿಗೆ ಕಳುಹಿಸಲಾಗಿದೆ. ಉಳಿದ ಒಂಬತ್ತು ಮರಿಗಳನ್ನು ಶೀಘ್ರದಲ್ಲೇ ಅರಣ್ಯಕ್ಕೆ ಬಿಡಲಾಗುವುದು ಎಂದು ಉರಗಜ್ಞ ಅಮೀನ್ ತಿಳಿಸಿದ್ದಾರೆ. ಹೆದ್ದಾರಿ ಕಾಮಗಾರಿ ಪುನರಾರಂಭಗೊಂಡಿದೆ.

ತಲಪಾಡಿ ಕಾಸರಗೋಡು ರಸ್ತೆ ಕಾಮಗಾರಿ ವೇಳೆ ಹಾವನ್ನು ಗಮನಿಸಿ, ಸ್ಥಳಾಂತರಿಸಲು ಯತ್ನಿಸುತ್ತಿರುವಾಗ ಮೊಟ್ಟೆಗಳಿಗೆ ಕಾವು ನೀಡುತ್ತಿರುವ ಅಂಶ ಗಮನಕ್ಕೆ ಬಂತು. ನಂತರ ವನ್ಯಜೀವಿ ಇಲಾಖೆ ಸಂಶೋಧನಾ ಮುಖ್ಯಸ್ಥ ಮವೀಶ್ ಕುಮಾರ್, ಈ ಸಂದರ್ಭ ಹಾವಿನ ಸ್ಥಳಾಂತರ ಸರಿಯಲ್ಲ ಎಂದು ಸಲಹೆ ನೀಡಿದರು. ಮೊಟ್ಟೆ ಒಡೆಯಲು 27 ಸೆಂ.ನಿಂದ 31 ಸೆಂ.ತಾಪಮಾನ ಬೇಕು. ತಾಯಿ ಹಾವಿನ ಕಾವು ಮೊಟ್ಟಿಗಳಿಗೆ ಸಿಗಬೇಕು. ಮೊಟ್ಟೆ ಒಡೆದು ಮರಿಗಳು ಹೊರಬರಲು 54ನೇ ದಿನ ಬೇಕು. ಬಳಿಕ ಹಾವನ್ನು ಸ್ಥಳಾಂತರಿಸಬಹುದು ಎಂದು ಅವರು ತಿಳಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English