- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕುಂಟಿಕಾನ ದ ಬಳಿ ಪಾರ್ಕ್ ಮಾಡಲಾಗಿದ್ದ ಟೆಂಪೋ ಟ್ರಾವೆಲರ್ ಕಳ್ಳತನ, ಮೂವರ ಬಂಧನ

[1]

ಮಂಗಳೂರು: ಮಂಗಳೂರಿನ ಕುಂಟಿಕಾನ ಫ್ಲೈಓವರ್ ಬಳಿ ಪಾರ್ಕ್ ಮಾಡಿದ್ದ ಟೆಂಪೋ ಟ್ರಾವೆಲರ್ ವಾಹನವನ್ನು ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಬೆಳಗಾವಿಯಲ್ಲಿ ಪತ್ತೆ ಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಹೊರ ರಾಜ್ಯದ ನಿವಾಸಿಗಳಾದ ಅರೀಫ್ ಉಲ್ಲಾಖಾನ್ ಯಾನೆ ಅರೀಫ್, ಅಮಿತ್ ಬಾಹುಬಲಿ ಪಂಚೋಡಿ ಯಾನೆ ಬೇಬಿ ಮತ್ತು ಸುರೇಂದ್ರ ಕುಮಾರ್ ಬಂಧಿತ ಆರೋಪಿಗಳು.

ಟೆಂಪೋ ಟ್ರಾವೆಲರ್ ಸೆ. 14 ರಂದು ರಾತ್ರಿ ಕಳವಾಗಿದ್ದು ಸುಮಾರಾಕ್ 15 ಲಕ್ಷ ರೂ. ಮೌಲ್ಯದ್ದಾಗಿತ್ತು ಈ ಬಗ್ಗೆ ಉರ್ವ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸೆ. 14 ರಂದು ರಾತ್ರಿ 8:30ಕ್ಕೆ ಈ ವಾಹನವನ್ನು ಕುಂಟಿಕಾನ ಫ್ಲೈಓವರ್ ಬಳಿ ಪಾರ್ಕ್ ಮಾಡಲಾಗಿದ್ದು, ಮರುದಿನ ಬೆಳಗ್ಗೆ ನೋಡಿದಾಗ ಟೆಂಪೋ ಕಳವಾಗಿತ್ತು.

ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್‌ ಅವರ ನಿರ್ದೇಶನದ ಮೇರೆಗೆ ಉರ್ವ ಪೊಲೀಸ್‌ ಠಾಣೆಯ ಇನ್ಸ್‌ ಪೆಕ್ಟರ್‌ ಭಾರತಿ ಜಿ. ನೇತೃತ್ವದಲ್ಲಿ ರಚಿಸಲಾದ ಸಬ್‌ ಇನ್ಸ್ ಪೆಕ್ಟರ್‌ ಗಳಾದ ಹರೀಶ್ ಎಚ್‌.ವಿ., ವಿನಯ್ ಕುಮಾರ್ ಮತ್ತು ಉಲ್ಲಾಸ್ ಮಹಾಲೆ ನೇತೃತ್ವದ ವಿಶೇಷ ಪೊಲೀಸ್‌ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.