- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಿವಾಹಿತ ಮಹಿಳೆಯೋರ್ವರ ಶವ ಬಾವಿಯಲ್ಲಿ ಪತ್ತೆ

[1]

ಉಜಿರೆ : ವಿವಾಹಿತ ಮಹಿಳೆಯೋರ್ವರ ಶವ ಬಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಘಟನೆ ಉಜಿರೆ ಬೆಳಾಲುವಿನ ಮಾಚಾರು ಸಮೀಪ ಕೆಂಪನೊಟ್ಟುವಿನಲ್ಲಿ ವರದಿಯಾಗಿದೆ.

ಮಾಚಾರು ನಿವಾಸಿ ಸುಧಾಕರವರ ಪತ್ನಿ ಶಶಿಕಲಾ (27 ) ಮೃತ ಮಹಿಳೆ.

ಇದು ಆಕಸ್ಮಿಕ ಘಟನೆಯೇ, ಅಥವಾ ಕೊಲೆಯೇ ಎಂಬ ಬಗ್ಗೆ ಧರ್ಮಸ್ಥಳ ಠಾಣಾ ಪೊಲೀಸರು ಹಾಗೂ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಮೃತರಿಗೆ 6 ವರ್ಷದ ಹೆಣ್ಣು ಮಗಳು ಇದ್ದಾಳೆ.