- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಗರದ 5 ಮಂದಿ ಬಿಲ್ಡರ್ ಗಳಿಗೆ ಮೂರು ವರ್ಷ ಜೈಲು ವಾಸ, ಒಂದು ಲಕ್ಷ ದಂಡ

[1]

ಮಂಗಳೂರು : ಅಪರೂಪದ ಪ್ರಕರಣ ಒಂದರಲ್ಲಿ ಮಂಗಳೂರು ಗ್ರಾಹಕ ನ್ಯಾಯಾಲಯವು ಗ್ರಾಹಕರ ಪರವಾಗಿ ನೀಡಿದ್ದ ಆದೇಶವನ್ನು ಪಾಲಿಸದೆ ಉಲ್ಲಂಘನೆ ಮಾಡಿದ್ದ ಕಾರಣಕ್ಕೆ ಮಂಗಳೂರು ನಗರದ ಐದು ಮಂದಿ ಬಿಲ್ಡರ್ ಗಳಿಗೆ ಮೂರು ವರ್ಷದ ಕಾರಾಗ್ರಹ ವಾಸದ ಸಜೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವನ್ನು ನೀಡುವಂತೆ ಆದ್ದೇಶಿಸಿದೆ.

ಮಂಗಳೂರು ರಾಮ್ ಭವನದಲ್ಲಿ ಕಾರ್ಯಾ ಚ ರಿ ಸುತ್ತಿರುವ ನಗರದ ಮಾರಿಯನ್ infra structures ನ ಪಾಲುದಾರಾರಾಗಿರುವ ಉಜ್ವಲ ಡಿಸೋಜ ಮತ್ತು ನವೀನ್ cardoza ಹಾಗೂ ಅವರೊಂದಿಗೆ development ಗೆ ಪಾಲುದಾರಾರಾಗಿರುವ ವಿಲಿಯಂ ಸಾಲ್ದಾನ್ಹ, ಗಾಯತ್ರಿ, ಮತ್ತು Lucy ಸಾಲ್ದಾನ್ಹ ಇವರುಗಳೇ ಶಿಕ್ಷೆಗೆ ಒಳಗಾದ ಆರೋಪಿಗಳಾಗಿರುತ್ತಾರೆ.

ಹಿನ್ನೆಲೆ
ಆರೋಪಿಗಳು 2013 ರಲ್ಲಿ ಮಂಗಳೂರಿನ ಗುಜ್ಜರೆ ಕೆರೆ ಎಂಬಲ್ಲಿ ಬಹುಮಹಡಿ ವಾಸೋಪಯೋಗಿ ಕಟ್ಟಡ ಕಟ್ಟಿ ಮಾರಾಟ ಮಾಡುತ್ತಿದ್ದರು. ಈ ಸಂದರ್ಭ ಮಂಗಳೂರಿನ Dr ಲವೀನಾ ಇವರು ಸದರಿ ಆರೋಪಿಗಳನ್ನ ಭೇಟಿ ಮಾಡಿ ಒಂದು ಫ್ಲಾಟ್ ಅನ್ನು ಅದರಲ್ಲಿಯ car parking ಸಹಿತ ರೂಪಾಯಿ 40 ಕ್ಕೆ ಖರೀದಿಸಲು ಒಪ್ಪಂದ ಮಾಡಿ ಹಣ ನೀಡಿದ್ದರು. ಹಣ ಪಡೆದ ಬಳಿಕ ಮಾರಾಟ ಪತ್ರ ವನ್ನು ಲವೀನಾ ಇವರಿಗೆ ಬರೆದು ಕೊಟ್ಟಿದ್ದರು. ಆದರೆ ಮಾರಾಟ ಪತ್ರದಲ್ಲಿ ತಿಳಿಸಿರುವಂತೆ ಆರೋಪಿಗಳು car parking ನೀಡಿರಲಿಲ್ಲ. ಆರೋಪಿಗಳನ್ನು ಭೇಟಿ ಮಾಡಿ car parking ಒದಗಿಸುವತೆ ವಿನಂತಿಸಿದಾಗ, ಆರೋಪಿಗಳು ನಿರಾಕರಿಸಿದರು. ಆ ಕಾರಣದಿಂದ ಲವೀನಾ ರವರು ನೋಟಿಸ್ ನೀಡಿದರು. ಆರೋಪಿಗಳು ಬಗ್ಗಲಿಲ್ಲ.

ಕೊನೆಗೆ ಲವೀನಾ ಇವರು 2014 ರಲ್ಲಿ ಮಂಗಳೂರಿನ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ಆರೋಪಿಗಳು ತನ್ನಿಂದ ಹಣ ಪಡೆದ ಹೊರತಾಗಿಯೂ ತನಗೆ ಫ್ಲಾಟ್ ನಲ್ಲಿ car parking ಒದಗಿಸಿಲ್ಲ ಮತ್ತು car parking ಒದಗಿಸುವಂತೆ ನಿರ್ದೇಶನ ನೀಡುವಂತೆ ದೂರು ಸಲ್ಲಿಸಿದರು.
ಗ್ರಾಹಕ ನ್ಯಾಯಾಲಯ ಲವೀನಾ ರವರ ದೂರನ್ನು ವಿಚಾರಣೆಗೆ ತೆಗೆದುಕೊಂಡು ದಿನಾಂಕ 24-06-2017 ರಲ್ಲಿ ಅಂತಿಮ ತೀರ್ಪುನ್ನು ಪ್ರಕಟಿಸಿ ಆರೋಪಿಗಳು ಸೇವಾ ನ್ಯೂನ್ಯತೆ ಮಾಡಿದ್ದಾರೆ, ಅವರು ದೂರುದಾರರಿಗೆ car parking ಮತ್ತು 50,000/ ಪರಿಹಾರ ಹಾಗೂ 10000/ ಪ್ರಕರಣದ ಬಾಬಾತ್ತು ಖರ್ಚನ್ನು ನೀಡುವಂತೆ ಆದೇಶಿತ್ತು.

ಈ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಆದರೆ ರಾಜ್ಯ ನ್ಯಾಯಾಲಯ ದಿನಾಂಕ ಆರೋಪಿಗಳ ಮನವಿಯನ್ನು ತಿರಸ್ಕರಿಸಿ ಗ್ರಾಹಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿ ದಿತ್ತು ಇದರ ಹೊರತಾಗಿಯೂ ಆರೋಪಿಗಳು ದೂರುದಾರರಿಗೆ car parking ಕೊಡಲಿಲ್ಲ.ಹೀಗಾಗಿ ದೂರುದಾರರು ಮರಳಿ ಗ್ರಾಹಕ ನ್ಯಾಯಾಲಯಕ್ಕೆ ಸೆಪ್ಟೆಂಬರ್ 2022 ಕ್ಕೆ ಗ್ರಾಹಕ ನ್ಯಾಯಾಲಯಕ್ಕೆ ಮೊರೆ ಹೋಗಿ ಆರೋಪಿಗಳು ತನಗೆ car parking ನೀಡದೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಹಿಸಿದ್ದಾರೆ. ಆರೋಪಿಗಳು ನ್ಯಾಯಾಲಯದ ಆದೇಶದಂತೆ car parking ನೀಡದ ಕರಣ ಅವರಿಗೆ ಗ್ರಾಹಕ ರಕ್ಷಣಾ ಕಾಯ್ದೆ 2019 ರ ಅನ್ವಯ ಮೂರು ವರ್ಷ ಶಿಕ್ಷೆ ಮತ್ತು ಒಂದು ಲಕ್ಷ ದಂಡ ವನ್ನು ವಿಧಿಸ ಬೇಕಾಗಿ ವಿನಂತಿಸಿಸಿದ್ದರು.

ದೂರು ದಾರರ ಮನವಿಯನ್ನು ಸ್ವೀಕರಿಸಿದ ನ್ಯಾಯಾಲಯ, ಆರೋಪಿಗಳು ತನ್ನ ಆದೇಶವನ್ನು ಪಾಲನೆ ಮಾಡಿಲ್ಲ ಎಂದು ಮನಗಂಡು ಆರೋಪಿಗಳಿಗೆ ತನ್ನ ಆದೇಶ ಪಾಲನೆ ಮಾಡದ ಕಾರಣಕ್ಕಾಗಿ ಮೂರು ವರ್ಷ ಕಾರಾಗ್ರಹ ಸಜೆ ಮಾತೃ ತಲಾ ಒಂದುಲಕ್ಷದಂತೆ ದಂಡ ವನ್ನು ಪಾವತಿಸುವಂತೆ ಆದ್ದೇಶಿಸಿದೆ.