ಮಂಗಳೂರು: ಸೌಹಾರ್ದ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎ. ಸುರೇಶ್ ರೈ ಅವರಿಗೆ “ಸಹಕಾರ ರತ್ನ” ಪ್ರಶಸ್ತಿಯನ್ನು ವಿಜಯಪುರದಲ್ಲಿ ಪ್ರದಾನ ಮಾಡಲಾಯಿತು.
70ನೇ ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯಮಟ್ಟದ ಸಮಾರಂಭದಲ್ಲಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಶ್ರೀ ಎ.ಸುರೇಶ್ ರೈಯವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಸಂಕಲ್ಪದAತೆ ಗ್ರಾಮವಿಕಾಸದಿಂದ ರಾಷ್ಟçವಿಕಾಸ ಎಂಬ ಪರಿಕಲ್ಪನೆಯಿಂದ ಸಂಸ್ಕಾರ-ಸಹಕಾರ-ಸಂಘಟನೆ-ಸಮೃದ್ಧಿ ಎಂಬ ಧ್ಯೇಯವಾಕ್ಯದೊಂದಿಗೆ ೨೦೦೧ರಲ್ಲಿ ಕಾರ್ಯಪ್ರವೃತ್ತಗೊಂಡ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಮೂಲಕ ರಚನೆಗೊಂಡ ಸ್ವಸಹಾಯ ಗುಂಪುಗಳ ಆರ್ಥಿಕ ನಿರ್ವಹಣೆಗಾಗಿ 2011ರಲ್ಲಿ ಆರಂಭಗೊAಡ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘವು ವಿಶೇಷ ಸಾಧನೆಯನ್ನು ಮಾಡಿದೆ.
ಪೂಜ್ಯ ಶ್ರೀಗುರುಗಳ ಆಶೀರ್ವಾದ, ಸಾಧ್ವೀ ಶ್ರೀ ಶ್ರೀ ಮಾತಾನಂದಮಯೀಯವರ ಮಾರ್ಗದರ್ಶನದಿಂದ ಸಹಕಾರಿಯ ಅಧ್ಯಕ್ಷ ಶ್ರೀ ಎ. ಸುರೇಶ್ ರೈಯವರು, ಸಹಕಾರಿಯು ಪ್ರಾರಂಭಗೊಂಡು13 ವರ್ಷಗಳಲ್ಲಿ19 ಶಾಖೆಗಳ ಮೂಲಕ ಸಹಕಾರಿಯ ಸದಸ್ಯರ ಹಾಗೂ ಸಮಾಜದ ಜನರ ಕಲ್ಯಾಣಕ್ಕಾಗಿ, ಸಹಕಾರಿ ರಂಗದ ಮೂಲಕ ದೇಶದ ಆರ್ಥಿಕ ಅಬಿವೃದ್ಧಿಗಾಗಿ ಜಾರಿಗೆ ತಂದಿರುವ ಯೋಜನೆಗಳು ಅತ್ಯಂತ ಯಶಸ್ವಿಯಾಗಿ ಜಾರಿಯಲ್ಲಿದೆ. ಸುಮಾರು 80,000ಕ್ಕಿಂತಲೂ ಮಿಕ್ಕಿದ ಕುಟುಂಬಗಳು ಸಂಘದ ಸೇವೆಯ ಫಲಾನುಭವಿಗಳಾಗಿರುತ್ತಾರೆ. ಸ್ವ-ಸಹಾಯ ಗುಂಪಿನಲ್ಲಿ ಸುಮಾರು 80%ಗಿಂತಲೂ ಮಹಿಳೆಯರೇ ಹಾಗೂ ಸಹಕಾರಿ ಮತ್ತು ಯೋಜನೆಯಲ್ಲಿ ಶೇಕಡಾ 98ರಷ್ಟು ಮಹಿಳಾ ಸಿಬ್ಬಂದಿಗಳು ಇರುವುದರಿಂದ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಸ್ವ-ಸಹಾಯ ಗುಂಪಿನ ಸದಸ್ಯರಿಗೆ ಮರಣ ಸಾಂತ್ವನ ನಿಧಿ ಒದಗಿಸುವ ಮೂಲಕ ಕಷ್ಟದ ಸಮಯದಲ್ಲಿ ಸ್ವಂದಿಸುವ ಯೋಜನೆ ರೂಪಿಸಿದ್ದಾರೆ.
ರಾಸಾಯನಿಕಮುಕ್ತ ಕೃಷಿ ಮತ್ತು ಸಮಗ್ರ ಸುಸ್ಥಿರ ಸಾವಯವ ಕೃಷಿ ಅಭಿವೃದ್ಧಿ ಆಗಬೇಕು ಎನ್ನುವ ನಿಟ್ಟಿನಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ರೈತರು ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿಯೊಂದಿಗೆ ರೈತರು ಸ್ವಾವಲಂಬಿಗಳಾಗಬೇಕು ಎನ್ನುವ ಉದ್ದೇಶದಿಂದ ರೈತರ ತೋಟದಲ್ಲಿ “ಕೃಷಿ ಕೌಶಲ್ಯ ಅಭಿವೃದ್ಧಿ ತರಬೇತಿ” ತೋಟದಲ್ಲಿ ಪಾಠ ಎನ್ನುವ ವಿನೂತನ ಕಾರ್ಯಕ್ರಮವನ್ನು ಖ್ಯಾತ ಕೃಷಿ ವಿಜ್ಞಾನಿಗಳ ಮೂಲಕ ನಡೆಸಿ ರೈತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಸುರೇಶ್ ರೈಗಳು ಜಿಲ್ಲೆಯ ಸೌಹಾರ್ದ ಸಹಕಾರಿಗಳನ್ನು ಒಗ್ಗೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಲಯನ್ಸ್ ಸಂಸ್ಥೆಯಲ್ಲಿ ಸಕ್ರೀಯರಾಗಿರುವ ಇವರು ಪ್ರಸ್ತುತ ಕ್ಯಾಬಿಟ್ ಮೆಂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದಲ್ಲಿ ಸಕ್ರೀಯರಾಗಿದ್ದು, ಬಂಟ್ಸ್ ಹಾಸ್ಟೆಲ್‌ನ ವಿದ್ಯಾರ್ಥಿ ಭವನದ ಕನ್ವಿನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಕರ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾಗಿ, ಜಯಾಂಬಿಕಾ ಚಿಟ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿ ಕಾರ್ಯನಿವಹಿಸುತ್ತಿದ್ದಾರೆ. ತರ್ಜನಿ ಇನ್ಸುರೆನ್ಸ್ ಬ್ರೋಕರೇಜ್ ಕಂಪೆನಿಯ ನಿರ್ದೇಶಕರಾಗಿ, ದಿವ್ಯಜ್ಯೋತಿ ಎಂಟರ್ ಪ್ರೈಸಸ್‌ನ ಮಾಲಕರಾಗಿ ಜಿಲ್ಲೆಯ ಯಶಸ್ವಿ ಉದ್ಯಮಿಯಾಗಿದ್ದಾರೆ.
Click this button or press Ctrl+G to toggle between Kannada and English