ನಮೋ ಮೊಯಾರ್ ಗ್ಲೋಬಲ್ ಫೌಂಡೇಶನ್ ನಿಂದ ಶಾಲಾ ಮಕ್ಕಳಿಗೆ ಕಿಟ್ ವಿತರಣೆ

4:10 PM, Wednesday, June 29th, 2022
Share
1 Star2 Stars3 Stars4 Stars5 Stars
(No Ratings Yet)
Loading...

ಮುಂಬಯಿ : ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಸಂದರ್ಭದಲ್ಲಿ, ಜೂನ್ 12 ಮತ್ತು 17 ರಂದು ನಮೋ ಮೊಯಾರ್ ಗ್ಲೋಬಲ್ ಫೌಂಡೇಶನ್ ನ ಸದಸ್ಯರು 140 ಕ್ಕೂ ಅಧಿಕ ನಿರ್ಗತಿಕ ಮಕ್ಕಳಿಗೆ ಶಾಲಾ ಕಿಟ್‌ಗಳನ್ನು ಮೀರಾ ರೋಡ್ ಮತ್ತು ನಾಲಾಸೋಪರ ಪ್ರದೇಶದಲ್ಲಿ ವಿತರಿಸಿದರು. ಶಾಲೆ ಪ್ರಾರಂಭವಾಗುವುದರಿಂದ ಈ ಮಕ್ಕಳಿಗೆ ಮೂಲಭೂತ ಶಾಲಾ ಕಿಟ್‌ಗಳ ಅಗತ್ಯವಿತ್ತು.

ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಶಾಲಾ ಕಿಟ್‌ಗಳನ್ನು ವಿತರಿಸುವ ಉತ್ತಮ ಕಾರ್ಯವನ್ನು ನಡೆಸಿದ್ದೇವೆ ಎಂದು ತಿಳಿಸಲು ನಾವು ಸಂತೋಷಪಡುತ್ತೇವೆ ಎಂದು ನಮೋ ಮೊಯಾರ್ ಗ್ಲೋಬಲ್ ಫೌಂಡೇಶನ್ ನ ಅಧ್ಯಕ್ಷ ರವಿ ಉಚ್ಚಿಲ್ ತಿಳಿಸಿದರು. ಕಾರ್ಯದರ್ಶಿ ರಾದೇಶ್ ಉಚ್ಚಿಲ್ ಅವರು ಶಿಕ್ಷಣದ ಪ್ರಾಮುಖ್ಯತೆಯನ್ನು ವಿವರಿಸಿದರು. ಉಪಾಧ್ಯಕ್ಷರಾದ ಶ್ವೇತಾ ಉಚ್ಚಿಲ್ ಮಕ್ಕಳ ಮಕ್ಕಳೊಂದಿಗೆ ಸಂವಾದವನ್ನು ನಡೆಸಿದರು. ಮಕ್ಕಳು ತಮ್ಮ ಗುರಿ ಮತ್ತು ಕನಸುಗಳನ್ನು ಹಂಚಿಕೊಂಡರು. ಸಮಾಜ ಸೇವಕ ಶೈಲೇಶ್ ಗುಪ್ತಾ ರವರು ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ನಿಂದ ಇಂತಹ ಉತ್ತಮ ಕಾರ್ಯಗಳು ಇನ್ನೂ ಅಧಿಕ ಸಂಖ್ಯೆಯಲ್ಲಿ ನೆರವೇರಲಿ ಎಂದು ಶುಭಹಾರೈಸಿದರು.

ಡಾ.ರಾಧಾಕೃಷ್ಣನ್ ಹೇಳುವಂತೆ “ಮಾನವ ಹಕ್ಕಿಯಂತೆ ಹಾರಾಡುವುದನ್ನು ಮತ್ತು ಮೀನಿನಂತೆ ಈಜುವುದನ್ನು ಕಲಿತ. ಆದರೆ, ಮಾನವನಾಗಿ ಬಾಳುವುದನ್ನು ಮಾತ್ರ ಕಲಿಯಲಿಲ್ಲ!”. ಅಂದರೆ, ಮಾನವನಾಗಿ ಬಾಳಲು ಇರಬೇಕಾದ ಮಾನವೀಯ ಮೌಲ್ಯಗಳು ಮಕ್ಕಳಲ್ಲಿ ಕ್ಷೀಣಿಸುತ್ತಿದ್ದು, ಆತಂಕಕಾರಿ ಹಾಗೂ ವಿಷಾದನೀಯ ಸಂಗತಿ. ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ಮೌಲ್ಯ ಆಧಾರಿತ ಶಿಕ್ಷಣ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ಅಲ್ಲದೆ ತನ್ನದೇ ಆದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ಎಲ್ಲಾ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವ ಗುರಿ ಹೊಂದಿದೆ.

ಅಧ್ಯಕ್ಷ ರವಿ ಉಚ್ಚಿಲ್, ಗೌರವ ಕಾರ್ಯದರ್ಶಿ ಶ್ರೀ ರಾಧೇಶ್ ಉಚ್ಚಿಲ್, ಜೊತೆ ಕಾರ್ಯದರ್ಶಿ ಸುಷ್ಮಾ ಕುಂಬ್ಳೆ ,ಜೊತೆ ಕೋಶಾಧಿಕಾರಿ ಧನ್ಯಶ್ರೀ ಐಲ್, ರೂಪ ಉಚ್ಚಿಲ್, ಉಪಾಧ್ಯಕ್ಷರಾದ ಕುಮಾರ್ ಐಲ್ ಮತ್ತು ಶ್ವೇತಾ ಉಚ್ಚಿಲ್, ಸದಸ್ಯರಾದ ಮೀರಾ ಶೆಟ್ಟಿ, ನೀತಾ ಉಚ್ಚಿಲ್, ವಿನೋದ್ ಕುಂಬ್ಳೆ ಹಾಗೂ ಸಮಾಜ ಸೇವಕ ಶೈಲೇಶ್ ಗುಪ್ತ ಅವರು ಉಪಸ್ಥಿತರಿದ್ದರು.

ಎಲ್ಲ ಮಕ್ಕಳು ಸಂತೋಷದಿಂದ ಕಿಟ್ ಗಳನ್ನು ಸ್ವೀಕರಿಸಿದರು. ಸದಸ್ಯರು ಅಲ್ಲಿದ್ದ ಎಲ್ಲಾ ಮಕ್ಕಳಿಗೆ ಬಿಸ್ಕತ್ತು ಪ್ಯಾಕೆಟ್‌ಗಳನ್ನು ವಿತರಿಸಿದರು. ನಮೋ ಮೊಯಾರ್ ಗ್ಲೋಬಲ್ ಫೌಂಡೇಶನ್‌ನ ಎಲ್ಲಾ ಸದಸ್ಯರಿಗೆ ಪೋಷಕರು ಧನ್ಯವಾದ ಅರ್ಪಿಸಲಾಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English