ಸಾಫ್ಟ್ ವೇರ್ ಇಂಜಿನಿಯರ್ ಯುವತಿಯ ಶವ ಬಾವಿಯಲ್ಲಿ ಪತ್ತೆ

1:12 PM, Friday, July 1st, 2022
Share
1 Star2 Stars3 Stars4 Stars5 Stars
(No Ratings Yet)
Loading...

ಕಾಪು : ಸಾಫ್ಟ್ ವೇರ್ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ಯುವತಿಯೊಬ್ಬಳು ಮನೆಯ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಯುವತಿ ಯನ್ನು ಮಡುಂಬು ಗೋಪಾಲ್ ಶೆಟ್ಟಿ ಅವರ ಪುತ್ರಿ ಶರ್ಮಿಳಾ (22) ಎಂದು ಗುರುತಿಸಲಾಗಿದ್ದು. ಗುರುವಾರ ಬೆಳಗ್ಗೆ ಬೆಂಗಳೂರಿನಿಂದ ಊರಿಗೆ ಬಂದ್ದ ಶರ್ಮಿಳಾ ಮನೆ ಸಮೀಪದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಮಡುಂಬು ಕೊಲ್ಲಂಗಾಲ್ ಹೌಸ್ ನಿವಾಸಿ ಗೋಪಾಲ ಶೆಟ್ಟಿಯವರ ಪುತ್ರಿ ಶರ್ಮಿಳಾ(22)ರವರು ಕಳೆದ ಸುಮಾರು 8 ತಿಂಗಳಿನಿಂದ ಬೆಂಗಳೂರಿನಲ್ಲಿ ಸಾಫ್ಟ್ ವೇರ್‌ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಆಕೆ ಸುಮಾರು ಒಂದು ವಾರದಿಂದ ಮಾನಸಿಕ ಖಿನ್ನತೆಗೆ ಒಳಗಾಗಿರುವ ವಿಚಾರ ಆಕೆಯ ಸಹದ್ಯೋಗಿಗಳಿಂದ ಶರ್ಮಿಳಾ ಅಣ್ಣ ವಿಕೇಶ್ ಶೆಟ್ಟಿ ರವರಿಗೆ ತಿಳಿದು ಬಂದಿತ್ತು. ಸುಮಾರು 3 ದಿನಗಳಿಂದ ಆಕೆ ತಾನು ವಾಸವಿದ್ದ ಪಿಜಿಯಿಂದ ಯಾರಿಗೂ ಹೇಳದೇ ಕುಣಿಗಲ್‌ಗೆ ಹೋಗಿದ್ದಳು. ಈ ವಿಚಾರವನ್ನು ವಿಕೇಶ್ ಗೆ ಆಕೆಯ ಸ್ನೇಹಿತರು ತಿಳಿಸಿದ್ದು ಈ ಬಗ್ಗೆ ವಿಕೇಶ್ ಶೆಟ್ಟಿ ರವರು ವಾಪಾಸು ಬೆಂಗಳೂರಿನ ಪಿಜಿಗೆ ಹೊಗುವಂತೆ ಶರ್ಮಿಳಾಗೆ ಪೋನ್ ಕರೆ ಮಾಡಿ ತಿಳಿಸಿದ್ದಾರೆ.

ಜೂನ್ ೨೮ರಂದು ಶರ್ಮಿಳಾಳು ವಿಕೇಶ್ ಶೆಟ್ಟಿ ರವರಿಗೆ ಕರೆಮಾಡಿ ತಾನು ಒಂದು ತಿಂಗಳ ಅವಧಿಗೆ ಮನೆಗೆ ಬಂದು ಹೋಗುತ್ತೇನೆಂದು ತಿಳಿಸಿದ್ದು ಅದರಂತೆ ದಿನಾಂಕ 30ರಂದು ಬೆಳಿಗ್ಗೆ 7:45ಕ್ಕೆ ಮನೆಗೆ ಬಂದಿದ್ದು ತನ್ನ ಲಗೇಜನ್ನು ಮನೆಯ ಒಳಗೆ ಇಟ್ಟು ಶೌಚಾಲಯಕ್ಕೆ ಹೋಗುತ್ತೇನೆಂದು ಹೇಳಿ ಹೋದವಳು ತುಂಬಾ ಹೊತ್ತಾದರೂ ವಾಪಾಸು ಬಾರದೇ ಇದ್ದ ಕಾರಣ ವಿಕೇಶ್ ಶೆಟ್ಟಿ ರವರು ನೆರೆಕರೆಯ ನಿವಾಸಿಗಳೊಂದಿಗೆ ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಿದ್ದಾರೆ. ಎಲ್ಲಿಯೂ ಪತ್ತೆಯಾಗದ ಕಾರಣ ಮನೆಯ ಪಕ್ಕದ ಬಾವಿಯಲ್ಲಿ ಬಿದ್ದಿರಬಹುದು ಎಂದು ಅನುಮಾನಗೊಂಡು ಹುಡುಕಿದಾಗ ಶರ್ಮಿಳಾ ದೇಹವು ಮೇಲೆ ಬಂದಿದ್ದು ಆಕೆಯು ಮೃತಪಟ್ಟಿರುವುದಾಗಿ ಕಂಡು ಬಂತು.

ಶರ್ಮಿಳಾಳು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English