ದನಗಳನ್ನು ಕಳ್ಳತನ ಮಾಡಿ ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಅಡ್ಡೆಗೆ ಪೊಲೀಸ್ ದಾಳಿ – ಇಬ್ಬರ ಬಂಧನ

1:57 PM, Saturday, July 2nd, 2022
Share
1 Star2 Stars3 Stars4 Stars5 Stars
(4 rating, 1 votes)
Loading...

ಬಂಟ್ವಾಳ : ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್‌ಐ.ಅವಿನಾಶ್ ನೇತ್ರತ್ವದ ತಂಡ ದಾಳಿ ನಡೆಸಿ ಕಳ್ಳತನ ಮಾಡಿದ ದನಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿ ತಂದೆ ಮಗ ಇಬ್ಬರು ಆರೋಪಿಗಳನ್ನು ಬಂದಿಸಿ, ಸ್ಥಳದಲ್ಲಿದ್ದ ಮೌಲ್ಯದ ಮಾಂಸವನ್ನು ವಶಕ್ಕೆ ಪಡೆದ ಘಟನೆ ಜುಲೈ 1 ರ ಶುಕ್ರವಾರ ಮುಂಜಾನೆ ನಡೆದಿದೆ.

ಗೋಳ್ತಮಜಲು ನಿವಾಸಿಗಳಾದ ಮಹಮ್ಮದ್ ಮತ್ತು ಸಾಧಿಕ್ ಬಂಧಿತ ಆರೋಪಿಗಳು.

ಗೋಳ್ತಮಜಲು ಮಹಮ್ಮದ್ ಎಂಬವರ ಮನೆಯಲ್ಲಿ ದನಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಬಗ್ಗೆ ಸ್ಥಳೀಯ ರಿಂದ ಮಾಹಿತಿ ಲಭ್ಯವಾಗಿತ್ತು.

ಕದ್ದು ತಂದ ದನಗಳನ್ನು ಇವರ ಮನೆಯಲ್ಲಿ ವಧೆ ಮಾಡಲಾಗುತ್ತಿತ್ತು, ಅ ಬಳಿಕ ಮಾಂಸ ಮಾಡಿ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ಪೋಲಿಸರಿಗೆ ಲಭ್ಯವಾಗಿತ್ತು ಈ ಹಿನ್ನೆಲೆಯಲ್ಲಿ ಎಸ್ ‌ಐ.ಅವಿನಾಶ್ ನೇತ್ರತ್ವದ ನಗರ ಠಾಣಾ ಪೋಲೀಸರ ತಂಡ ಮುಂಜಾವಿನ ವೇಳೆ ದಾಳಿ ನಡೆಸಿ, ಮಾಂಸ ಸಹಿತ ಆರೋಪಿಗಳು ಪರಾರಿಯಾಗದಂತೆ ಬಂಧಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English