- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಸತಿ ರಹಿತ ಬಡಕುಟುಂಬಗಳಿಗೆ ಮನೆ ನಿರ್ಮಿಸಲು ಸಹಾಯಧನ

[1]

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ ಸ್ವಂತ ಜಾಗ ಹೊಂದಿರುವ ವಸತಿ ರಹಿತ ಅರ್ಹ ಮಹಿಳಾ ಫಲಾನುಭವಿಗಳಿಗೆ 700 ಚದರ ಅಡಿ ಮಿತಿಯೊಳಗಿರುವ ಮನೆ ನಿರ್ಮಿಸಿಕೊಳ್ಳಲು ಸಾಮಾನ್ಯವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಸತಿ ರಹಿತ ಬಡ ಕುಟುಂಬಗಳಿಗೆ 2021-22ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ ರೂ.1,20,000/- ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಸತಿ ರಹಿತ ಬಡ ಕುಟುಂಬಗಳಿಗೆ ವಸತಿ ಕಲ್ಪಿಸಲು 2021-22ನೇ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿ ರೂ.2,00,000/- ಸಹಾಯಧನ ದೊರೆಯಲಿದೆ.

ಹೊಸದಾಗಿ ಮನೆ ನಿರ್ಮಿಸಿಕೊಳ್ಳುವ ಕುಟುಂಬವು ಫಲಾನುಭವಿಯ ಅಥವಾ ಗಂಡನ ಹೆಸರಿನಲ್ಲಿ ಸ್ವಂತ ನಿವೇಶನ ಹೊಂದಿರಬೇಕು ಮತ್ತು ಸೂಕ್ತ ಭೂದಾಖಲೆಗಳನ್ನು ಹೊಂದಿರಬೇಕು.

ಅರ್ಜಿ ನಮೂನೆಯೊಂದಿಗೆ ಅರ್ಜಿದಾರರ ಫೋಟೋ , ಆಧಾರ್ ಕಾರ್ಡ್ (ಕುಟುಂಬದ ಎಲ್ಲಾ ಸದಸ್ಯರ), ಜಾತಿ ಆದಾಯ ಪ್ರಮಾಣ ಪತ್ರ (ಆದಾಯ ಮಿತಿ 2 ಲಕ್ಷ), ನಿವೇಶನ ಸಂಬಂಧಿಸಿದ ದಾಖಲೆಗಳು (ಆರ್.ಟಿ.ಸಿ ಖಾತಾ ನಕಲು, ನಿವೇಶನ ನಕ್ಷೆ), ಕಟ್ಟಡ ಪರವಾನಿಗೆ, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ರಾಷ್ಟ್ರೀಯ ಬ್ಯಾಂಕ್‍ನಲ್ಲಿರುವ ಖಾತೆಯ ಪ್ರತಿ, ಅಫಿದಾವಿತ್ (ಫಲಾನುಭವಿಯ ಹೆಸರಿನಲ್ಲಿ ಈಗಾಗಲೇ ಪಕ್ಕಾ ಮನೆ ಇಲ್ಲವೆಂದು) ಪ್ರತಿಯನ್ನು ನಗರ ಬಡತನ ನಿರ್ಮೂಲನ ಕೋಶ, ಮಂಗಳೂರು ಮಹಾನಗರ ಪಾಲಿಕೆ, ಲಾಲ್‍ಭಾಗ್ ಕಚೇರಿಗೆ ಇದೇ ಡಿಸೆಂಬರ್ 20ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.