- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು – ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಓಡಾಟಕ್ಕೆ ಚಾಲನೆ

[1]

ಮಂಗಳೂರು : ಮಂಗಳೂರು – ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಓಡಾಟಕ್ಕೆ ಮಂಗಳವಾರ ಬೆಳಿಗ್ಗೆ ಪ್ರಾಯೋಗಿಕ ಓಡಾಟಕ್ಕೆ ಚಾಲನೆ ನೀಡಲಾಯಿತು.

ಮಂಗಳೂರು ಸೆಂಟ್ರಲ್ ನಿಂದ ಬೆಳಿಗ್ಗೆ 8.30 ಕ್ಕೆ ಹೊರಟ ಈ ರೈಲು ಮಧ್ಯಾಹ್ನ 1:05 ಕ್ಕೆ ಮಡಗಾಂವ್ ತಲುಪಲಿದೆ.

ಉಡುಪಿ ಮತ್ತು ಕಾರವಾರದಲ್ಲಿ ಈ ರೈಲಿಗೆ ನಿಲುಗಡೆ ಇರುತ್ತದೆ. ಸಂಜೆ 6:10 ಕ್ಕೆ ಮಡಗಾಂವ್ ನಿಂದ ಹೊರಟು ರಾತ್ರಿ‌ 10.45 ಕ್ಕೆ ರೈಲು ಮಂಗಳೂರು‌ ಸೆಂಟ್ರಲ್ ತಲುಪಲಿದೆ.

ಮಂಗಳವಾರ ಬೆಳಗ್ಗೆ 8:30 ಕ್ಕೆ ಮಂಗಳೂರು ಸೆಂಟ್ರಲ್ ರೈಲು‌ ನಿಲ್ದಾಣದಿಂದ‌ ಪ್ರಾಯೋಗಿಕ ಓಡಾಟ ಆರಂಭಿಸುವ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು.