ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ವಿದೇಶಿ ಮೂಲದ ವ್ಯಕ್ತಿಯೊಬ್ಬರು ರಾತ್ರಿ ಶ್ರೀಕೃಷ್ಣನ ಶಯನೋತ್ಸವದ ವೇಳೆ ಕೊಳಲು ನುಡಿಸಿ ಸೇವೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.
ಶ್ರೀಕೃಷ್ಣ ಮಠದಲ್ಲಿ ರಾತ್ರಿ ಪಲ್ಲಕ್ಕಿಯಲ್ಲಿ ಕೃಷ್ಣನನ್ನಿಟ್ಟು ಕೊಳಲು ನುಡಿಸುತ್ತಾ ಕೊನೆಯ ಪ್ರದಕ್ಷಿಣೆ ಹಾಕಿ ನಂತರ ಯತಿಗಳು ಕೃಷ್ಣನನ್ನು ಶಯನೋತ್ಸವಕ್ಕೆ ಕೊಂಡೊಯ್ಯುವ ವೇಳೆ ಕೊಳಲು ನುಡಿಸಿ ಗಮನ ಸೆಳೆದಿದ್ದಾರೆ.
ಮ್ಯಾಥ್ಯೂ ಎಂಬ ಹೆಸರಿನ ಈ ವ್ಯಕ್ತಿ ಸದ್ಯ ತನ್ನ ಹೆಸರನ್ನು ಮಾಧವ ಎಂದು ಬದಲಾಯಿಸಿಕೊಂಡಿದ್ದಾರೆ. ಇವರು ಬೆಳ್ತಂಗಡಿಯ ಹರಿದಾಸ ಡೋಗ್ರ ಎಂಬುವರ ಬಳಿ ಆಸಕ್ತಿಯಿಂದ ಕೊಳಲು ಅಭ್ಯಾಸ ಮಾಡಿ ತಾನು ಕಲಿತಿದ್ದನ್ನು ವೇಣುನಾದಪ್ರಿಯ ಕೃಷ್ಣನಿಗೆ ಅರ್ಪಿಸಿ ಕೃತಾರ್ಥರಾಗಿದ್ದಾರೆ.
Click this button or press Ctrl+G to toggle between Kannada and English