- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಒಂದೇ ಸ್ಥಳದಲ್ಲಿ 18 ಗುಳಿಗ ದೈವಗಳ ಅಬ್ಬರದ ನರ್ತನ, ತುಳುನಾಡಿನ ಇತಿಹಾಸದಲ್ಲೇ ಮೊದಲು

[1]

ಮಂಗಳೂರು: ಒಂದೇ ಬಾರಿ 18 ಗುಳಿಗ ದೈವದ ಗಗ್ಗರ ಸೇವೆ ವೇಣೂರು ಸಮೀಪದ ಬರ್ಕಜೆ ನವ ಗುಳಿಗ ಕ್ಷೇತ್ರದಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಬರ್ಕಜೆ ಎಂಬಲ್ಲಿ ಈ ಬಾರಿ 18 ಗುಳಿಗನ ಅಬ್ಬರದ ನರ್ತನ ಸೇವೆಗೆ ಭಕ್ತರು ಸಾಕ್ಷಿಯಾದರು.

ಬರ್ಕಜೆ ದುರ್ಗಾಪರಮೇಶ್ವರಿ ಮತ್ತು ನವ ಗುಳಿಗ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಒಂಬತ್ತು ಗುಳಿಗ ದೈವದ ನರ್ತನ ಸೇವೆ ನಡೆಯುತ್ತಿತ್ತು.‌ ಆದರೆ ಈ ಬಾರಿ ಸಂಪ್ರದಾಯದಂತೆ ಒಂಬತ್ತು ಹಾಗೂ ಸೇವೆಯಾಗಿ 9. ಹೀಗೆ ಒಟ್ಟು 18 ಗುಳಿಗ ದೈವದ ನರ್ತನ ಸೇವೆ ನಡೆದು ಇದು ತುಳುನಾಡಿನ ದೈವಾರಾದನೆಯ ಇತಿಹಾಸದಲ್ಲೇ ಮೊದಲು ಎನ್ನಲಾಗಿದೆ.

ದೈವದ ಈ ವಿಶೇಷ ಗಗ್ಗರ ಸೇವೆಯನ್ನು ನೋಡಲು ಮುಂಬೈ ಬೆಂಗಳೂರು ಸೇರಿದಂತೆ ಕರಾವಳಿಯ ಸಾವಿರಾರು ದೈವಾರಾಕರು ಸೇರಿದ್ದರು.