ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರಂಜಾನ್​ ಹಬ್ಬ ಆಚರಣೆ

9:11 PM, Wednesday, April 10th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಸ್ಲಿಮರು ರಂಜಾನ್​ ಹಬ್ಬವನ್ನು ಬುಧವಾರ ಆಚರಿಸಿದರು.

ಮಂಗಳವಾರ ಚಂದ್ರ ದರ್ಶನವಾದ ಹಿನ್ನಲೆ ಮಂಗಳೂರು ಕೇಂದ್ರ ಜುಮ್ಮಾ ಮಸೀದಿ ಬಂದರು ದಕ್ಷಿಣಕನ್ನಡ ಜಿಲ್ಲಾ ಖಾಝಿಯವರಾದ ತ್ವಾಕ ಅಹಮದ್ ಮುಸ್ಲಿಯಾರ್​ ಅವರು ಬುಧವಾರ ಘೋಷಿಸಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರಂಜಾನ್​ ಆಚರಿಸಿದ್ದಾರೆ.

ಮುಸ್ಲಿಮರು ಇಂದು ಬೆಳಗ್ಗೆ ಮಸೀದಿಗೆ ತೆರಳಿ ನಮಾಜ್ ಸಲ್ಲಿಸಿದರು. ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಸ್ಪೀಕರ್​ ಯು.ಟಿ. ಖಾದರ್ ಅವರು ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಮಸೀದಿಯಲ್ಲಿ ನಡೆದ ನಮಾಜ್​ನಲ್ಲಿ ಪಾಲ್ಗೊಂಡರು.

ರಂಜಾನ್​ ಹಿನ್ನೆಲೆ ಇಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ. ನಿಗದಿತ ಪರೀಕ್ಷೆಗಳು ಬಿಟ್ಟು, ಉಳಿದಂತೆ ಸರಕಾರಿ ಕಚೇರಿಗಳು ಮುಚ್ಚಿರುತ್ತವೆ. ವಿಧಾನ ಸಭೆ ಸ್ಪೀಕರ್​ ಯು.ಟಿ. ಖಾದರ್​ ಅವರ ಮನವಿಯಂತೆ ಸರಕಾರದ ಅಧೀನ ಕಾರ್ಯದರ್ಶಿ ವಿಜಯ ಕುಮಾರ್ ಎಚ್.ಬಿ. ಆದೇಶ ಹೊರಡಿಸಿದ್ದಾರೆ.

ಈದ್​ ಉಲ್ ಫಿತರ್​, ಯುಗಾದಿ, ಈಸ್ಟರ್ ಹಬ್ಬದ‌ ಸಂದೇಶಗಳು ಕೂಡ ಶಾಂತಿ ಸಹಬಾಳ್ವೆಯ ಸಂದೇಶ ನೀಡುತ್ತದೆ. ಸ್ಪೀಕರ್ ಯು.ಟಿ. ಖಾದರ್, ಈ ಸಂಧರ್ಭ ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English