ಅಭಿನಯ ಮಂಟಪ ಮುಂಬಯಿ , 40ನೇ ವಾರ್ಷಿಕೋತ್ಸವ, ನೃತ್ಯ ವೈಭವ “ಪಂಜುರ್ಲಿ” ತುಳು ನಾಟಕ ಪ್ರದರ್ಶನ

12:58 PM, Tuesday, August 16th, 2022
Share
1 Star2 Stars3 Stars4 Stars5 Stars
(No Ratings Yet)
Loading...
ಅಭಿನಯ ಮಂಟಪ ಮುಂಬಯಿ


ಮುಂಬಯಿ : ಅಭಿನಯ ಮಂಟಪ ಮುಂಬಯಿ ಇಂದು ನಾಲ್ಕು ದಶಗಳನ್ನು ಯಶಸ್ವಿಯಾಗಿ ಪೂರೈಸುತ್ತಿದ್ದು ಅಭಿನಯ ಮಂಟಪದ ಎಲ್ಲಾ ಕಲಾವಿದರ ಒಗ್ಗಟ್ಟು, ಕಲಾಭಿಮಾನಿಗಳ ಪ್ರೋತ್ಸಾಹ ಹಾಗೂ ದಾನಿಗಳೆಲ್ಲರ ಸಹಕಾರ. ಈ ಸಂದರ್ಭದಲ್ಲಿ ನಮ್ಮನ್ನಗಲಿದ ನಮ್ಮಎಲ್ಲಾ ಕಲಾವಿದರನ್ನು ನೆನಪಿಸಿರುವುದು ನಮ್ಮ ಆದ್ಯ ಕರ್ತವ್ಯ. ಇವರೆಲ್ಲರ ಸಹಾಯದಿಂದ ನಾವು ಇಂದು 40ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಕರ್ನಾಟಕ ಸಂಘ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಭಿನಯ ಮಂಟಪ ಮುಂಬಯಿಯ ಅಧ್ಯಕ್ಷರಾದ ಬಾಲಕೃಷ್ಣ ಡಿ ಶೆಟ್ಟಿ ಮೂಡಬಿದ್ರೆ ನುಡಿದರು

ಆ. 14ರಂದು ಸಂತಾಕ್ರೂಸ್ ಪೂರ್ವ ಬಿಲ್ಲವ ಭವನದ ನಾರಾಯಣ ಗುರು ಸಭಾಗ್ರಹದಲ್ಲಿ ನಡೆದ ಅಭಿನಯ ಮಂಟಪದ 40ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ ಮಾತನಾಡುತ್ತಾ ನಮ್ಮ ದೇಶ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಒಂದು ದಿವಸಕ್ಕೆ ಮೊದಲು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಭಿನಯ ಮಂಟಪವು ತನ್ನ 40ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದು ಅಭಿನಂದನೀಯ. ಮಹಾನಗರದಲ್ಲಿ ನ ಹೆಚ್ಚಿನ ಕಲಾವಿದರಿಗೆ ಆವಕಾಶವನ್ನು ನೀಡಿದ ಅಭಿನಯ ಮಂಟಪವು ಇಂದು ನಾಲ್ಕು ದಶಗಳನ್ನು ಪೂರೈಸುತ್ತಿದೆ. ಅಭಿನಯ ಮಂಟಪವು ತುಳು ಜಾನಪದ ಐತಿಹಾಸಿಕ ನಾಟಕವನ್ನು ಇಂದು ಪ್ರದರ್ಶಿಸುತ್ತಿದ್ದು ಪ್ರೇಕ್ಷಕರು ಅಧಿಕ ಸಂಖ್ಯೆಯಲ್ಲಿ ಇರುವುದು ಅಭಿಮಾನದ ಸಂಗತಿಯಾಗಿದೆ ಎನ್ನುತ್ತಾ ಅಭಿನಯ ಮಂಟಪದ ಮುಂದಿನ ಎಲ್ಲಾ ಚಟುವಟಿಕೆಗಳಿಗೆ ಶುಭ ಕೋರಿದರು.

ಇನ್ನೋರ್ವ ಮುಖ್ಯ ಅತಿಥಿ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ದೇವಸ್ಥಾನ ನೆರುಳ್ ಇದರ ಮಾಜಿ ಅಧ್ಯಕ್ಷರಾದ ಸಂಜೀವ ಎನ್ ಶೆಟ್ಟಿ ಮಾತನಾಡುತ್ತಾ ಕಲಾಭಿಮಾನಿಗಳ ಪ್ರೋತ್ಸಾಹವೇ ಕಲಾವಿದರಿಗೆ ಪ್ರೋತ್ಸಾಹ. ನಾಲ್ಕು ದಶಕಗಳಿಂದ ಕಲಾಭಿಮಾನಿಗಳು ನೀಡುವ ಪ್ರೋತ್ಸಾಹ ಈ ಸಂಘಟನೆಯನ್ನು ಎತ್ತರಕ್ಕೆ ಬೆಳಿಸಿದ್ದು ಹಿಂದಿನಂತೆ ಇನ್ನು ಮುಂದೆಯೂ ಅಭಿನಯ ಮಂಟಪದ ಎಲ್ಲ ಕಲಾವಿದರಿಗೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ಮುಖ್ಯ ಅತಿಥಿ ಜೀವನ ಬಿಲ್ಡ್ ಕನ್ ಪ್ರೈವೇಟ್ ಲಿಮಿಟೆಡ್ ನವಿ ಮುಂಬೈ ಇದರ ಎಂ ಡಿಸೋಜಾ ಗಿಲ್ಬರ್ಟ್ ಎಸ್ ಡಿಸೋಜಾ ಅವರು ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಾ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಸಾಯಿಕೇರ್ ಲಾಜಿಸ್ಟಿಕ್ಸ್ ಮುಂಬಯಿಯ ಸಿ ಎಮ್ ಡಿ ಸುರೇಂದ್ರ ಎ. ಪೂಜಾರಿ ಮಾತನಾಡುತ್ತಾ ಕಲಾಭಿಮಾನಿಗಳು ಬಹಳ ಹೊತ್ತು ಶಿಸ್ತಿನಿಂದ ಇದ್ದು ಕಾರ್ಯಕ್ರಮಕ್ಕೆ ಸಹಕರಿಸುತ್ತಿದ್ದು, ಪ್ರೇಕ್ಷಕರ ಪ್ರೋತ್ಸಾಹ ನಮಗೆ ಸ್ಪೂರ್ತಿ ತಂದಿದೆ. ಇಂದು ಉತ್ತಮವಾದ ತುಳು ನಾಟಕದ ಪ್ರದರ್ಶನವಾಗಲಿದ್ದು ಎಲ್ಲರೂ ಅದನ್ನು ವೀಕ್ಷಿಸಿ ಸಹಕರಿಸಬೇಕು ಎಂದರು.

ಡೊಂಬಿವಲಿ ಜಗದಂಬಾ ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ರಾಜೇಶ್ ಸಿ. ಕೋಟ್ಯಾನ್ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡುತ್ತಾ ಅಭಿನಯ ಮಂಟಪವು ನಾಟಕ ರಂಗ ಮಾತ್ರವಲ್ಲದೆ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದು ಮುಂದಿನ ಎಲ್ಲಾ ಕಾರ್ಯಕ್ಕೆ ಶುಭ ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿ ಕರ್ನಾಟಕ ಸಂಘ ನಾಲಾಸೋಪಾರ ಇದರ ಅಧ್ಯಕ್ಷರಾದ ಸದಾಶಿವ ಕರ್ಕೇರ ಮಾತನಾಡುತ್ತಾ ನೂರು ವರ್ಷಕ್ಕೆ ಮೊದಲೇ ಉದರ ಪೋಷಣೆಯೊಂದಿಗೆ ನಮ್ಮ ಹಿರಿಯರು ಅಲ್ಲಲ್ಲಿ ಒಟ್ಟಾಗಿ ಸಂಘಟನೆಯನ್ನು ಸ್ಥಾಪಿಸಿದ್ದು ಇಂದಿನವರು ನಮ್ಮ ಸಂಘಟನೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದು ಮುಂದಿನ ಯುವ ಪೀಳಿಗೆಯು ಹಿರಿಯರ ಸಂಘಟನೆಗಳನ್ನು ಮುಂದುವರಿಸಬೇಕು. ರಂಗಭೂಮಿ ಕೇವಲ ಮನೋರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಯುವ ಪೀಳಿಗೆಯು ನಮ್ಮ ಕಲೆ, ಬಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕ್ರೀಯಾಶೀಲರಾಗಬೇಕೆಂದರು.

ಕಂಠದಾನ ಕಲಾವಿದರಾದ ಜಯಶೀಲ ಸುವರ್ಣ ಇವರು ಮಾತನಾಡಿ ಒಂದು ಸಂಘಟನೆ ಮಾಡುವುದು ಸುಲಭವಾದರೂ ಅದು 40 ವರ್ಷ ಯಶಸ್ವಿಯಾಗಿ ಬಾಳುವುದು ಸುಲಭದ ಕೆಲಸವಲ್ಲ ಎನ್ನುತ್ತಾ ನನ್ನಿಂದಾಗುವ ಸಹಾಯವನ್ನು ನಾನು ಮಾಡುವೆನು ಎನ್ನುತ್ತಾ ಸಮಾರಂಭಕ್ಕೆ ಶುಭ ಕೋರಿದರು.

ಮೇಲಿನ ಗಣ್ಯರಲ್ಲದೆ ಮುಖ್ಯ ಅತಿಥಿಗಳಾಗಿ ಭಾರತ್ ಬ್ಯಾಂಕ್ ನ ನಿರ್ದೇಶಕರಾದ ಸೂರ್ಯಕಾಂತ್ ಜಯ ಸುವರ್ಣ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಮಾಜಿ ಅಧ್ಯಕ್ಷರಾದ ಕೃಷ್ಣಕುಮಾರ್ ಎಲ್ ಬಂಗೇರ, ನಿವೃತ್ತ ಬ್ಯಾಂಕ್ ಅಧಿಕಾರಿ ರಘುನಾಥ ಕುಂದರ್, ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾದ ಅಧಿಕಾರಿ ಮನೋಜ್ ಎಸ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು. ನಾಟಕ ನಿರ್ದೇಶಕ ಬರಹಗಾರರಾದ ದಿ. ಶ್ರೀನಾಥ್ ಮೂಲ್ಕಿ ಯವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ದೀರ್ಘಕಾಲದಿಂದ ಸಂಸ್ಥೆಯಲ್ಲಿ ಕ್ರೀಯಾಶೀಲರಾಗಿರುವ ಹೆಸರಾಂತ ನಟ ಸಂಸ್ಥೆಯ ಉಪ ಕಾರ್ಯಾಧ್ಯಕ್ಷ ಅನಿಲ್ ಕುಮಾರ್ ಸಸಿಹಿತ್ತ್ಲು ಇವರನ್ನು ಗೌರವಿಸಲಾಯಿತು.

ಅಲ್ಲದೆ ರಂಗಭೂಮಿಗೆ ಕೊಡುಗೆಯಿತ್ತ ಧನಂಜಯ ಮೂಳೂರು, ಮುರಳಿ ಶೆಟ್ಟಿ, ರಮೇಶ್ ಶಿವಪುರ್, ರೂಪಾ ಭಟ್, ಮನೋಹರ್ ಶೆಟ್ಟಿ ನಂದಳಿಕೆ, ಪ್ರಕಾಶ್ ಪಣಿಯೂರು, ರೋಹಿತ್ ಶೆಟ್ಟಿ, ನೇಹಾ ಸರಪಾಡಿ, ಗಗನ್ ಸುವರ್ಣ, ನವೀನ್ ಶೆಟ್ಟಿ ಇನ್ನಬಾಳಿಕೆ, ನರೇಶ ಕುಳಾಯಿ, ಸುನಿಲ್ ಪೂಜಾರಿ ಮೊದಲಾದವರನ್ನು ಗೌರವಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸದಸ್ಯರಿಂದ ಮತ್ತು ವಿವಿಧ ಸಂಘ ಸಂಸ್ಥೆಗಳ ಕಲಾವಿಧರಿಂದ ನೃತ್ಯ ವೈಭವ ಹಾಗೂ ಅಭಿನಯ ಮಂಟಪದ ಕಲಾವಿದರಿದ “ಪಂಜುರ್ಲಿ” ತುಳು ನಾಟಕ ಪ್ರದರ್ಶನವಿತ್ತು.

ಸಾನ್ವಿ ಜಗಧೀಶ ರೈ ಯವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮವು ಆರಂಭಗೊಂಡಿತು. ಅಭಿನಯ ಮಂಟಪದ ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಕೆ. ಕಾಪು ಅವರು ಕಾರ್ಯಚಟುವಟಿಕೆಗಳ ಮಾಹಿತಿಯಿತ್ತರು. ಉಪಾಧ್ಯಕ್ಷರಾದ ಅನಿಲ್ ಕುಮಾರ್ ಸಸಿಹಿತ್ತ್ಲು ಅವರು ಎಲ್ಲರನ್ನು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಸಚಿನ ಪೂಜಾರಿ ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರೆ ಪ್ರತಿಮಾ ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರ್ವಹಿಸಿದರು.

ಕಾರ್ಯಕ್ರಮಗಳ ಯಶಸ್ಸಿಗೆ ಕಾರ್ಯಾಧ್ಯಕ್ಷರಾದ ರಾಜ್ ಕುಮಾರ್ ಕಾರ್ನಾಡ್, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷರಾದ ಅಶೋಕ್ ಕುಮಾರ್ ಕಾರ್ನಾಡ್, ಉಪಾಧ್ಯಕ್ಷರಾದ ಸುರೇಶ್ ಜಿ. ಕರ್ಕೇರ, ಕೋಶಾಧಿಕಾರಿ ಪಿ. ಬಿ. ಚಂದ್ರಹಾಸ್ ಕಾರ್ಯಕಾರಿ ಸಮಿತಿಯ ಇತರ ಸದಸ್ಯರು, ಮಹಿಳಾ ವಿಭಾಗ ಮತ್ತು ಮಕ್ಕಳ ವಿಭಾಗದ ಎಲ್ಲಾ ಸದಸ್ಯರು ಸಹಕರಿಸಿದರು.

ವರದಿ : ಈಶ್ವರ ಎಂ. ಐಲ್

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English