ಮೆಗಾ ಮೀಡಿಯಾ ನ್ಯೂಸ್ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಮೆಗಾ ಮಿಡಿಯಾ ಪತ್ರಿಕೋದ್ಯಮ ಪ್ರಶಸ್ತಿ, ಸಾಧಕರಿಗೆ ಸನ್ಮಾನ ಸಾಂಸ್ಕೃತಿಕ ಹಬ್ಬ-2013 ಸಂಭ್ರಮದ ಆಚರಣೆ

2:32 PM, Saturday, January 19th, 2013
Share
1 Star2 Stars3 Stars4 Stars5 Stars
(No Ratings Yet)
Loading...

Mega Media "Cultural Festival 2013"ಮಂಗಳೂರು : ಜಗತ್ತು ತೀವ್ರಗತಿಯಲ್ಲಿ ಬದಲಾಗುತ್ತಿದೆ. ಈ ಬದಲಾವಣೆಯನ್ನು ಸ್ವೀಕರಿಸಿ ಉತ್ತಮ ವಿಚಾರಗಳನ್ನು ಪಾಲಿಸಿಕೊಂಡು ಬಂದಾಗ ಮಾತ್ರ ಅಭಿವೃದ್ಧಿ ಎನ್ನುವ ಮಂತ್ರ ಪಠಿಸಲು ಸಮಾಜದಲ್ಲಿ ಸಾಧ್ಯವಾಗುತ್ತದೆ ಎಂದು ಕರಾವಳಿ ಸಮೂಹ ಕಾಲೇಜು ಇದರ ಅಧ್ಯಕ್ಷ ಗಣೇಶ್ ರಾವ್ ಹೇಳಿದರು.

ಅವರು ಶುಕ್ರವಾರ ಮಂಗಳೂರಿನ ಪುರಭವನದಲ್ಲಿ ನಡೆದ ಮೆಗಾ ಮೀಡಿಯಾ ನ್ಯೂಸ್ ಇದರ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಹಬ್ಬ-2013ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

Mega Media "Cultural Festival 2013"ಈ ಸಂದರ್ಭದಲ್ಲಿ ಮೆಗಾ ಮೀಡಿಯಾ ವಿಶೇಷ ಸಂಚಿಕೆಯನ್ನು ಕರ್ನಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ಮಹಾಬಲೇಶ್ವರ ರಾವ್ ಬಿಡುಗಡೆ ಮಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ಮಾಧ್ಯಮಗಳು ಸಮಾಜವನ್ನು ತಿದ್ದಿ ಒಳ್ಳೆಯ ವಿಚಾರಗಳನ್ನು ಕೊಟ್ಟಾಗ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.

Mega Media "Cultural Festival 2013"ಈ ಸಂದರ್ಭ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ ಪಾಲೇಮಾರ್, ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಖ್ಯಾತ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ, ತೆಲಿಕೆದ ಬೊಳ್ಳಿ ಸಿನಿಮಾ ನಟ ಅರ್ಜುನ್ ಕಾಪಿಕಾಡ್, ಮೆಗಾ ಮಿಡಿಯಾದ ಆಡಳಿತ ನಿರ್ದೇಶಕ ಶಿವಪ್ರಸಾದ್, ನಿರ್ದೇಶಕಿ ಸರಿತ ಎಸ್ ಉಪಸ್ಥಿತರಿದ್ದರು.

Mega Media "Cultural Festival 2013"ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗೋವಿಂದ ಗುರುಸ್ವಾಮಿ, ಸಂಗೀತ ನಿರ್ದೇಶಕ ಆದಿತ್ಯ ನಾರಾಯಣ್, ಛಾಯಾಗ್ರಾಹಕ ಸತೀಶ್ ಇರಾ, ರವಿ ನಾರಾಯಣ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಮೆಗಾ ಮಿಡಿಯಾ ಪತ್ರಿಕೋದ್ಯಮ ಪ್ರಶಸ್ತಿಯನ್ನು ವಿಜಯ ಕರ್ನಾಟಕದ ವರದಿಗಾರ ಸ್ಟೀವನ್ ರೇಗೊ ಅವರಿಗೆ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಮೈಮ್ ರಾಮದಾಸ್ ಅವರ ಪದತಾಳ ಹಾಡುಗಳು ಮನರಂಜಿಸಿತು. ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಹಾಗೂ ತುಳು ರಂಗಭೂಮಿ ಕಲಾವಿದ ಆನಂದ್ ಬೋಳಾರ್ ಅವರ ನಗೆಹಬ್ಬ ನೆರೆದ ಸಭಿಕರನ್ನು ಮನರಂಜಿಸಿತು. ಶಾರದಾ ಕಲಾ ಆರ್ಟ್ಸ್ ಅವರಿಂದ `ಎಡ್ಡೆಡುಪ್ಪುಗ’ ತುಳು ಹಾಸ್ಯ ನಾಟಕದಲ್ಲೂ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಪಾತ್ರ ನಿರ್ವಹಿಸಿ ತುಳು ಪ್ರಿಯರಿಗೆ ಮುದ ನೀಡಿದರು. ಮೆಗಾ ಮಿಡಿಯಾ ನಿರ್ದೇಶಕ ಶಿವಪ್ರಸಾದ್ ಮೆಗಾ ಮಿಡಿಯಾ ಬೆಳೆದು ಬಂದ ದಾರಿಯನ್ನು ಸ್ಮರಿಸಿಕೊಂಡು ಅತಿಥಿಗಳನ್ನು ಸ್ವಾಗತಿಸಿದರು. ನಿರ್ದೇಶಕಿ ಸರಿತ ಎಸ್ ವಂದಿಸಿದರು. ಕೆ.ವಿ. ರಮಣ್ ಕಾರ್ಯಕ್ರಮ ನಿರ್ವಹಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English