ಮಂಜೇಶ್ವರ : ಮಂಜೇಶ್ವರ ತಾಲೂಕಿನ ಕುರುಡುಪದವಿನಲ್ಲಿ ನಾಗರ ಹಾವು ಕಡಿತಕ್ಕೊಳಗಾಗಿ ಮೃತಪಟ್ಟ ಮಹಿಳೆಯ ಅಂತ್ಯ ಅಂತ್ಯಸಂಸ್ಕಾರ ಕ್ಕೆಂದು ಇಟ್ಟ ನೀರನ್ನು ಕುಡಿದು ಮನೆಯವರಲ್ಲಿ ಅಚ್ಚರಿ ಮೂಡಿಸಿದೆ.
ಕುರುಡುಪದವಿನ ಪೈವಳಿಕೆ ಎಂಬಲ್ಲಿ ಜುಲೈ 4 ರಂದು ರಾತ್ರಿ 64 ವಯಸ್ಸಿನ ಚೋಮು ಎಂಬವರು ಹಾವುಕಡಿತಕ್ಕೊಳಗಾಗಿ ಮೃತಪಟ್ಟಿದ್ದರು. ಆಶ್ಚರ್ಯವೆಂದರೆ ಮರುದಿನ ಅವರ ಅಂತ್ಯಸಂಸ್ಕಾರದ ವಿಧಿಗೆ ಇಟ್ಟ ನೀರುನ್ನು ಕುಡಿಯುವ ಮೂಲಕ ಕಾಣಿಸಿಕೊಂಡು ಕಣ್ಮರೆಯಾಗಿದೆ.
ಮಹಿಳೆಯ ಸಾವಿಗೆ ಕಾರಣವಾದ ನಾಗರ ಹಾವು ಮರುದಿನವೂ ಬಂದು ನೀರುಕುಡಿದಿರುವುದರ ಬಗ್ಗೆ ಮನೆಯವರಿಗೆ ಪ್ರಶ್ನಾರ್ಥಕವಾಗಿದೆ.
ಅಂತ್ಯಸಂಸ್ಕಾರದ ವಿಧಿ ಕಳೆದ ಮೇಲೆ ಮನೆ ಚಾವಡಿಯಲ್ಲಿ ನೀರು ಇಡುವ ಸಂಪ್ರದಾಯ ಇದೆ. ಅದರಂತೆ ಮನೆ ಚಾವಡಿಯಲ್ಲಿ ಬೂದಿ ಹರಡಿ ಅದರ ನಡುವಿನಲ್ಲಿ ಚೊಂಬುವೊಂದರಲ್ಲಿ ನೀರು ಇಡಲಾಗಿತ್ತು. ಮನೆ ಹಿಂಬದಿ ಬಾಗಿಲು ಭದ್ರ ಪಡಿಸಲಾಗಿತ್ತು. ಮುಂಬಾಗಿಲಿನಲ್ಲಿ ನಾಲ್ಕು ಮಂದಿ ಜನ ಮಲಗಿದ್ದರು. ಆದರೂ ನಾಗರ ಹಾವು ಬಂದು ಚೊಂಬಿನಲ್ಲಿದ್ದ ನೀರನ್ನು ಕುಡಿದು ತೆರಳಿದೆಯಂತೆ. ಹಾವು ಬಂದಿರುವುದಕ್ಕೆ ಸಾಕ್ಷಿ ಎಂಬಂತೆ ಬೂದಿ ಮೇಲೆ ಹರಡಿರುವ ಹಾವಿನ ಗುರುತು ಕಾಣಸಿಕ್ಕಿದೆ.
ಚೋಮು ಅವರ ಸಾವಿಗೆ ಕಾರಣವಾದ ನಾಗರ ಹಾವನ್ನು ಹಾವು ಹಿಡಿಯುವವರು ಬಂದು ಹಿಡಿದುಕೊಂಡೊಯ್ದಿದ್ದರು. ಆದರೂ ಮರುದಿನ ನೀರು ಕುಡಿಯಲು ಬಂದಿರುವುದು ದೊಡ್ಡ ಪ್ರಶ್ನೆಯಾಗಿ ಕಾಡಿದೆ.
Click this button or press Ctrl+G to toggle between Kannada and English