ಮಂಗಳೂರು : ಜನ ಸಾಮಾನ್ಯರಿಗೆ ಕಾಯಿಲೆಗಳ ಬಗೆಗಿನ ಮಾಹಿತಿ ಹಾಗೂ ವೈದ್ಯಕೀಯ ಕ್ಷೇತ್ರದ ಜ್ಞಾನವನ್ನ ಹಂಚುವ ಹಾಗೂ ಅದನ್ನ ಜನ ಸಾಮಾನ್ಯರಿಗೆ ಮುಟ್ಟಿಸುವ ಆರೋಗ್ಯ ಜನಜಾಗೃತಿ ಕೆಲಸ ವೈದ್ಯಕೀಯ ಆರೋಗ್ಯ ಜನ ಜಾಗೃತಿ ಶಿಬಿರಗಳಿಂದ ನಡೆಯಬೇಕು – ಮಂಗಳೂರಿನ ತಜ್ಞ ವೈದ್ಯರುಗಳು ಅಭಿಪ್ರಾಯಪಟ್ಟಿದ್ದಾರೆ.
ಸಮಾಜಮುಖಿ ವೈದ್ಯಕೀಯ ಸೇವೆಗೆ ಡಿ.ದೇವರಾಜ ಅರಸು ರಾಜ್ಯ ಪ್ರಶಸ್ತಿ ಪುರಸ್ಕೃತ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ 25 ನೇ ವರ್ಷದ ಸೇವಾ ಸವಿನೆನಪಿಗಾಗಿ ಜರುಗಿದ ಬೃಹತ್ ಮೂಳೆಯ ಖನಿಜ ಲವಣಾಂಶ ಪತ್ತೆ, ರಕ್ತ ಹೀನತೆ, ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯ ತಪಾಸಣಾ ಶಿಬಿರದಲ್ಲಿ ತಜ್ಞ ಸಂಪನ್ಮೂಲ ವೈದ್ಯರಾಗಿ ಭಾಗವಹಿಸಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ ತಿಮ್ಮಯ್ಯ, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷರಾದ ಡಾ ಜೆಸಿಂತಾ ಡಿಸೋಜಾ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ ರಂಜನ್, ಕೆನರಾ ಆರ್ಥೋಪೆಡಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ ಕೆ ಆರ್ ಕಾಮತ್. ಫಸ್ಟ್ ನ್ಯೂರೋ ಆಸ್ಪತ್ರೆಯ ಡಾ ರಾಜೇಶ್ ಶೆಟ್ಟಿ, ಇಂಡಿಯಾನಾ ಆಸ್ಪತ್ರೆಯ ಡಾ ಯೂಸುಫ್ ಕುಂಬ್ಳೆ, ಮಂಗಳೂರು ಇನ್ಸ್ಟುಟ್ಯೂಟ್ ಆಫ್ ಆಂಕಾಲಿಜಿಯ ಡಾ ಸುರೇಶ್ ರಾವ್, ಜನಪ್ರಿಯ ಆಸ್ಪತ್ರೆಯ ಡಾ ಬಶೀರ್, ಖ್ಯಾತ ಯುರಾಲಜಿಸ್ಟ್ ಡಾ ಸದಾನಂದ ಪೂಜಾರಿ, ಮಾಜಿ ಜಿಲ್ಲಾ ಆರೋಗ್ಯಾಧಿಕಾರಿ ಡಾ ಕಿಶೋರ್ ಈ ಮೇಲಿನಂತೆ ಅಭಿಪ್ರಾಯ ಪಟ್ಟು ತಮ್ಮ ತಮ್ಮ ಕ್ಷೇತ್ರದ ಪರಿಣಿತ ವಿಚಾರಗಳ ಬಗ್ಗೆ ಶಿಬಿರದಲ್ಲಿ ಮಾಹಿತಿ ಕೊಟ್ಟರು.
ಶಿಬಿರದಲ್ಲಿ ಪಡೀಲ್ ಹಾಗೂ ಅಡ್ಯಾರ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಎಲ್ಲಾ ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶ ಆಹಾರ ಕಿಟ್ ವಿತರಿಸಲಾಯಿತು. ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಹಿತೈಷಿಗಳಾದ ಕರ್ನಾಟಕ ಸರಕಾರದ ವೈದ್ಯರ ದಿನಾಚರಣೆಯ ರಾಜ್ಯ ಡಾ ಬಿಸಿ ರಾಯ್ ಪ್ರಶಸ್ತಿ ಪುರಸ್ಕೃತ ಡಾ ಕಿಶೋರ್ ಕುಮಾರ್ ಹಾಗೂ ಡಾ ಸದಾನಂದ ಪೂಜಾರಿ ಯವರನ್ನ ಸನ್ಮಾನಿಸಲಾಯಿತು.ಭಾರತೀಯ ವೈದ್ಯಕೀಯ ಸಂಘ ಮಂಗಳೂರು, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಹಾಗೂ ಡಾ ವಿಜಯ ಅವರು ಬರೆದು ಪ್ರಕಟಿಸಿದ ಕಾಯಿಲೆಗಳ ಬಗ್ಗೆ , ಜೀವನ ಶೈಲಿ ಹಾಗೂ ಆಹಾರಕ್ರಮದ ಬಗ್ಗೆ ಪುಸ್ತಕ ಹಾಗೂ ಮಾಹಿತಿ ಕೈಪಿಡಿಗಳನ್ನು ವಿತರಿಸಲಾಯಿತು. ಸುಮಾರು 200 ಕ್ಕೂ ಅಧಿಕ ಫಲಾನುಭವಿಗಳನ್ನ ಶಿಬಿರದಲ್ಲಿ ತಪಾಸಣೆ ಮಾಡಿ ಮಾಹಿತಿ ಮಾರ್ಗದರ್ಶನ ಚಿಕಿಸ್ತೆ ಹಾಗೂ ಸಾಂತ್ವನ ನೀಡಲಾಯಿತು.
ನಗರದ ಸುಮಾರು 30 ಕ್ಕೂ ಅಧಿಕ ಸಂಘ ಸಂಸ್ಥೆಗಳ ಸಹಯೋಗದಲ್ಲಿಜರುಗಿದ ಈ ಶಿಬಿರದಲ್ಲಿ ಹತ್ತಕ್ಕೂ ಹೆಚ್ಚು ವೈದ್ಯಕೀಯ ಸಂಸ್ಥೆಯ ನುರಿತ ತಪಾಸಣಾ ಶಿಬ್ಬಂದಿಗಳು ಸೇವೆ ಸಲ್ಲಿಸಿದರು. ವೈದ್ಯರ ದಿನಾಚರಣೆ ಹಾಗೂ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಇರುವ ಡಾ ಕುಲಾಲ್ ಹೆಲ್ತ್ ಸೆಂಟರ್ ನ ಪರವಾಗಿ ವಿದ್ಯಾರ್ಥಿಗಳಿಗೆ ಜುಲೈ ತಿಂಗಳಲ್ಲಿ ಉಚಿತ ಬ್ಲಡ್ ಗ್ರೂಪ್ ತಪಾಸಣೆ ಮಾಡಲು ಹಾಗೂ ಮೆಡಿಫೆಸ್ಟ್ ಮತ್ತು ಅಜಿಲ ಸಂಸ್ಥೆಯ ಸಹಯೋಗದಲ್ಲಿ ಬಾರೀ ಕಡಿತ ದರದಲ್ಲಿ ವಿವಿಧ ರಕ್ತ ಪರೀಕ್ಷೆಗಳನ್ನ ಸ್ಥಳದಲ್ಲೇ ಮಾಡಿ ಸಲಹೆ ಸೂಚನೆ ನೀಡಲಾಯಿತು. ಸಂತೋಷ್ ಶೆಟ್ಟಿ, ಸೂರಜ್ ರೈ, ಸುರೇಶ್ ಆಚಾರ್, ನಿಶ್ಚಿತ ಕಿರೋಡಿಯನ್, ಶ್ರೀಮತಿ ಮಮತಾ ಕುಲಾಲ್, ಕುಮಾರಿ ಅನನ್ಯ ಕುಲಾಲ್, ತಿಮ್ಮಪ್ಪ ಕುಲಾಲ್ , ದೇವದಾಸ್ ಶೆಟ್ಟಿ , ವಿಶ್ವನಾಥ್ ಪೂಜಾರಿ ವೀರನಗರ, ಮುಂತಾದವರು ಸಂಯೋಜಿಸಿದ ಕಾರ್ಯಕ್ರಮದಲ್ಲಿ ಶ್ರೀಮತಿ ಪವಿತ್ರ ಪ್ರಾರ್ಥಿಸಿದರು. ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಸ್ಥಾಪಕರಾದ ಡಾ ಅಣ್ಣಯ್ಯ ಕುಲಾಲ್ ಉಲ್ತೂರು ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಸಂಭ್ರಮದ ಕಾರ್ಯಕ್ರಮದ ವಿಡಿಯೋ
Click this button or press Ctrl+G to toggle between Kannada and English