ಬಿಜೆಪಿ ಕಾರ್ಯಕರ್ತ ನಿಗೆ ಕೊಲೆಬೆದರಿಕೆ ಪ್ರಕರಣ, ಎಸ್ ಡಿಪಿಐ ಕಾರ್ಯಕರ್ತ ಬಿಡುಗಡೆ

1:20 PM, Monday, September 12th, 2022
Share
1 Star2 Stars3 Stars4 Stars5 Stars
(No Ratings Yet)
Loading...
ಬಿಜೆಪಿ ಕಾರ್ಯಕರ್ತ

ಸುಳ್ಯ: ಬಿಜೆಪಿ ಕಾರ್ಯಕರ್ತ ನಿಗೆ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಬಂಧಿತನಾಗಿದ್ದ ಎಸ್ ಡಿಪಿಐ ಕಾರ್ಯಕರ್ತ ಸಫ್ರೀದ್ ಎಂಬಾತನನ್ನು ಜಾಮೀನಿನ ಮೇಲೆ ಹೊರಬಂದಿದ್ದಾನೆ.

ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿರುವ ಶಫೀಕ್ ಬೆಳ್ಳಾರೆಯ ಸಹೋದರ ಸಫ್ರೀದ್ ಎಂಬಾತ ಪ್ರಶಾಂತ್ ಪೂಂಜ ಎಂಬವರಿಗೆ, ಜೀವ ಬೆದರಿಕೆ ಒಡ್ಡಿರುವುದಾಗಿ ಶನಿವಾರ ಪೊಲೀಸ್ ದೂರು ನೀಡಲಾಗಿತ್ತು.

ಪೊಲೀಸರು ಬಜ್ಪೆಯಲ್ಲಿ ಆರೋಪಿ ಸಫ್ರೀದ್ ನನ್ನು ಬಂಧಿಸಿದ್ದರು. ರವಿವಾರ ಆತನನ್ನು ಶರತ್ತು ಬದ್ದ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English