ಕ್ರೀಡೆ ಬಹುಮಾನ ಕ್ಕೆ ಮಾತ್ರವಲ್ಲ ಬದುಕಿಗೂ ಬೇಕು: ರವಿ ವೈ, ನಾಯ್ಕ

6:09 PM, Tuesday, September 13th, 2022
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ಕ್ರೀಡೆ ಬಹುಮಾನ ಕ್ಕೆ ಮಾತ್ರವಲ್ಲ ಬದುಕಿಗೂ ಬೇಕು. ದಿನಕ್ಕೆ ಅರ್ಧ ಗಂಟೆಯಷ್ಟು ಹೊತ್ತನ್ನು ಕ್ರೀಡೆಗೆ, ವ್ಯಾಯಾಮಕ್ಕೆ ವಿನಿಯೋಗಿಸಿದರೆ ಆರೋಗ್ಯಕರ ಜೀವನ ಸಾಧ್ಯ, ಎಂದು ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ವೈ, ನಾಯ್ಕ ಅಭಿಪ್ರಾಯಪಟ್ಟರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಕ್ರೀಡಾಂಗಣದಲ್ಲಿ ಮಂಗಳವಾರ ಸ್ನಾತಕೋತ್ತರ ವಿಭಾಗಗಳ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆ ನಾವು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುತ್ತದೆ. ಕಾಲೇಜು ಜೀವನ ಮುಗಿದ ಬಳಿಕವೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಅಗತ್ಯ, ಎಂದರು. ಇದೇ ವೇಳೆ ಅವರು ಕ್ರೀಡಾ ಸಾಧಕರಿಗೆ ಸರ್ಕಾರಿ ನೌಕರಿಯಲ್ಲಿ ಶೇಕಡಾ 2 ರಷ್ಟು ಮೀಸಲಾತಿಯಿದೆ, ಎಂದು ನೆನಪಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲೆ ಡಾ. ಅನಸೂಯ ರೈ, ಸ್ನಾತಕೋತ್ತರ ವಿದ್ಯಾರ್ಥಿಗಳ ಶಿಸ್ತು ಮತ್ತು ಉತ್ಸಾಹವನ್ನು ಶ್ಲಾಘಿಸಿ, ಕ್ರೀಡಾ ವಿಭಾಗ ಹಾಗೂ ಎಲ್ಲಾ ಸ್ನಾತಕೋತ್ತರ ವಿಭಾಗಗಳ ಸಂಯೋಜಕರಿಗೆ ಅಭಿನಂದನೆ ಸಲ್ಲಿಸಿದರು.

ಕಾಲೇಜಿನ ದೈಹಿಕ ನಿರ್ದೇಶಕ ಡಾ. ಕೇಶವಮೂರ್ತಿ, ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಂಯೋಜಕ ಡಾ. ಕುಮಾರಸ್ವಾಮಿ ಎಂ, ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಡಾ. ಲಕ್ಷ್ಮಣ್, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಡಾ. ಯತೀಶ್ ಕುಮಾರ್, ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಡಾ. ರಾಮಕೃಷ್ಣ ಬಿ ಎಂ, ಹಿಂದಿ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ನಾಗರತ್ನ ಎನ್. ರಾವ್, ಕ್ರೀಡಾ ವಿಭಾಗದ ಅಲ್ತಾಫ್ ಮೊದಲಾದವರು ಹಾಜರಿದ್ದರು.

ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಗಮನ ಸೆಳೆಯಿತು. ಕ್ರೀಡಾ ಸಾಧಕರಾದ ಕಾವೇರಮ್ಮ, ಚೈತಾಲಿ, ಪವನ್ ಮತ್ತು ದೀಪಿಕಾ ಕ್ರೀಡಾಜ್ಯೋತಿ ಮುನ್ನಡೆಸುವ ಗೌರವ ಪಡೆದುಕೊಂಡರು. ಪ್ರಜ್ಞಾ ಪಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ತಸ್ರೀಫಾ ಅತಿಥಿಗಳನ್ನು ಸ್ವಾಗತಿಸಿದರು. ನಿಖಿತಾ ಧನ್ಯವಾದ ಸಮರ್ಪಿಸಿದರು. ಮಳೆಯ ನಡುವೆಯೂ ಪುರುಷು ಮತ್ತು ಮಹಿಳಾ ಕ್ರೀಡಾಪಟುಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ನಾತಕೋತ್ತರ ವಿಭಾಗಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English