ಸುಮಾರು 25 ವರ್ಷದ ಹಿಂದೆ ಅಂಬಾಸಿಡರ್ ಕಾರು ಕದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು

9:26 PM, Tuesday, September 13th, 2022
Share
1 Star2 Stars3 Stars4 Stars5 Stars
(No Ratings Yet)
Loading...
ಅಂಬಾಸಿಡರ್ ಕಾರು

ಮಂಗಳೂರು : ಸುಮಾರು 25 ವರ್ಷದ ಹಿಂದೆ ಅಂಬಾಸಿಡರ್ ಕಾರು ಕಳವು ಮಾಡಿದ್ದ ಆರೋಪಿಯನ್ನು ದಸ್ತಗಿರಿ ಮಾಡಿವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ದಕ್ಷಿಣ ಪೊಲೀಸ್ ಠಾಣೆ ಯಲ್ಲಿ ದಿನಾಂಕ 11/11/97 ಅಂಬಸಿಢರ್ ಕಾರು ಕಳವು ಸಂಬಂಧ ಮೊ ಸಂ. 300/1997 ಕಲಂ 379 ipc ದಾಖಲಾಗಿತ್ತು, ಪ್ರಕರಣ ದಲ್ಲಿ ತನಿಖೆ ಯಲ್ಲಿ ಆರೋಪಿ ಅಸ್ಲಾಂ ಅಲಿಯಾಸ್ ಅಸ್ಲಾಂ ಪಾಷ ರವರ ವಿರುದ್ಧ ನ್ಯಾಯಲಯಕ್ಕೆ ದೋಷ ರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಆರೋಪಿ ದಿನಾಂಕ 2000 ರಿಂದ ಗೈರು ಹಾಜರ್ ಆಗಿದ್ದು ದಿನಾಂಕ 7/5/2015 ರಿಂದ ಪ್ರಕರಣ ವು LPC ಪ್ರಕರಣ ಆಗಿದ್ದು ಆರೋಪಿತನ ವಿಳಾಸ ವು ಪೀಣ್ಯ ಬೆಂಗಳೂರು ಆಗಿದ್ದರಿಂದ ಪತ್ತೆ ಆಗಿರಲಿಲ್ಲ.

ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಯ ಸಿಬ್ಬಂದಿ ಪುಟ್ಟರಾಮ 465 ಹಾಗೂ ರವಿಕುಮಾರ್ 3046 ರವರು ಸುಮಾರು 25 ವರ್ಷದ ಪ್ರಕರಣದ ಆರೋಪಿಯ ಮೂಲ ವಿಳಾಸ ಪಿರಿಯಾಪಟ್ಟಣದ ಆರೆನಹಳ್ಳಿಯಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿರುತ್ತಾರೆ,

ಆರೋಪಿಯನ್ನು ಮಾನ್ಯ ನ್ಯಾಯಾಲಯ ಕ್ಕೆ ಹಾಜರೂಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English