ರಸ್ತೆ ಅಪಘಾತದಲ್ಲಿ ದಂತ ವೈದ್ಯೆ ಸಾವು

6:38 PM, Wednesday, September 14th, 2022
Share
1 Star2 Stars3 Stars4 Stars5 Stars
(5 rating, 1 votes)
Loading...
ದಂತ ವೈದ್ಯೆ

ಮಂಗಳೂರು : ದಂತ ವೈದ್ಯೆ ಯೊಬ್ಬರು ಪುಣೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ವರದಿಯಾಗಿದೆ.

ಮೃತರನ್ನು ನಗರದ ವೆಲೆನ್ಸಿಯ ನಿವಾಸಿ ಡಾ.ಜಿಶಾ ಜೋನ್ (27) ಎಂದು ಗುರುತಿಸಲಾಗಿದೆ.

ಡಾ.ಜಿಶಾ ಜೋನ್ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮೃತರು ಪತಿ, ತಂದೆ-ತಾಯಿ, ಸಹೋದರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಮೃತದೇವನ್ನು ಮಂಗಳೂರಿಗೆ ತರಲಾಗಿದ್ದು, ಅಂತಿಮ ದರ್ಶನ ಬುಧವಾರ ಅಪರಾಹ್ನ 2:30ಕ್ಕೆ ಜೆಪ್ಪು ಸೈಂಟ್ ಆ್ಯಂಟೋನಿ ಚರ್ಚ್ ನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English