ದೇವಸ್ಥಾನ ಪರಿಷತ್ ಸ್ಥಾಪಿಸಲು ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ ಸನಾತನ ಸಂಸ್ಥೆ

8:42 PM, Wednesday, September 14th, 2022
Share
1 Star2 Stars3 Stars4 Stars5 Stars
(5 rating, 1 votes)
Loading...
ದೇವಸ್ಥಾನ

ಮಂಗಳೂರು : ದೇವಸ್ಥಾನ ಗಳ ನಿಧಿಯ ಉಪಯೋಗ, ದೇವಸ್ಥಾನದ ಕಾರ್ಯನಿರ್ವಹಣೆ, ದೇವಸ್ಥಾನದ ಪೂಜಾ ಕೈಂಕರ್ಯ ಹಾಗೂ ದೇವಸ್ಥಾನಗಳಿಂದ ಮಾಡಬೇಕಾದ ಧರ್ಮಕಾರ್ಯಗಳ ಬಗ್ಗೆ ರಾಷ್ಟ್ರಾದ್ಯಂತ ದೇವಾಲಯಗಳ ಪರಿಷತ್ ಮಾಡುವ ಉದ್ದೇಶದಿಂದ ದೇವಸ್ಥಾನಗಳ ಮುಖ್ಯಸ್ಥರಿಗಾಗಿ ಶಿಬಿರಗಳ ಆಯೋಜನೆ ಗಳನ್ನು ಮಾಡಲಾಗುತ್ತದೆ. ಈ ನಿಮಿತ್ತ ಇದರ ಚಾಲನೆಯನ್ನು ನೀಡಲು ಮತ್ತು ಮಾರ್ಗದರ್ಶನವನ್ನು ಪಡಿಯಲು ರಾಜ್ಯ ಸಭಾ ಸದಸ್ಯರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾಕ್ಟರ್ ಶ್ರೀ. ಡಿ ವೀರೇಂದ್ರ ಹೆಗ್ಗಡೆಯವರನ್ನು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಗುರುಪ್ರಸಾದ್ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯರಾದಂತಹ ಶ್ರೀ. ಚಂದ್ರ ಮೊಗೇರ, ಸನಾತನ ಸಂಸ್ಥೆಯ ದಕ್ಷಿಣ ಕರ್ನಾಟಕ ಜಿಲ್ಲೆಗಳ ಧರ್ಮ ಪ್ರಸಾರಕರಾದಂತಹ ಸೌ. ಮಂಜುಳ ಗೌಡ ಹಾಗೂ ಇತರ ಸಾಧಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪೂಜನೀಯ ಶ್ರೀ. ವೀರೇಂದ್ರ ಹೆಗಡೆಯವರು, ಧರ್ಮಸ್ಥಳ ಕ್ಷೇತ್ರದ ಟ್ರಸ್ಟಿನ ಮುಖಾಂತರ ಮುದ್ರಣಗೊಂಡ ಕಿರು ಪುಸ್ತಕವನ್ನು ತೋರಿಸಿ ಅವರು ಮಾಡಿದ ಕಾರ್ಯದ ಬಗ್ಗೆ ವಿಶ್ಲೇಷಣೆಯನ್ನು ನೀಡಿದರು, ಹಾಗೂ ನೀವು ಮಾಡುವ ಮಂದಿರ ಪರಿಷತ್ ಕಾರ್ಯಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಹೇಳುತ್ತ ಆಶೀರ್ವಾದವನ್ನು ನೀಡಿದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English