ಬಂಟ್ವಾಳ: ಶಿವಮೊಗ್ಗದಲ್ಲಿ ಸೆರೆ ಸಿಕ್ಕ ಮಂಗಳೂರಿನ ಶಂಕಿತ ಉಗ್ರ ಮಾಝ್ ಅಹ್ಮದ್ ಎಂಬಾತನನ್ನು ತೀರ್ಥಹಳ್ಳಿ ಡಿವೈಎಸ್ಪಿ ಶಾಂತ ವೀರಯ್ಯ ಮತ್ತು ಆಗುಂಬೆ ಎಸೈ ಶಿವಕುಮಾರ್ ನೇತೃತ್ವದ ಪೊಲೀಸರು ಇಲ್ಲಿನ ನಾವೂರು ಗ್ರಾಮದ ಸುಲ್ತಾನ್ ಕಟ್ಟೆ ಎಂಬಲ್ಲಿಗೆ ಬುಧವಾರ ಕರೆ ತಂದು ಸ್ಥಳ ಮಹಜರು ನಡೆಸಿದರು.
ನೇತ್ರಾವತಿ ನದಿ ತೀರದ ಈ ಪ್ರದೇಶದಲ್ಲಿ ಶಂಕಿತ ಉಗ್ರ ಬಾಂಬ್ ಸ್ಪೋಟ ನಡೆಸುವ ಬಗ್ಗೆ ಪ್ರಯೋಗ ನಡೆಸಿದ್ದ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಶ್ವಾನದಳ ಸಹಿತ ಬಂದು ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Click this button or press Ctrl+G to toggle between Kannada and English