ಮಂಗಳೂರು ಶ್ರೀ ಶಾರದೆ ಗೆ 8 ಲಕ್ಷ ರೂ. ಮೌಲ್ಯದ ಚಿನ್ನದ ಜರಿಯ ಸೀರೆ

8:29 PM, Friday, September 23rd, 2022
Share
1 Star2 Stars3 Stars4 Stars5 Stars
(4 rating, 1 votes)
Loading...
ಮಂಗಳೂರು ಶ್ರೀ ಶಾರದೆ

ಮಂಗಳೂರು: ಶ್ರೀ ಶಾರದಾ ಮಹೋತ್ಸವ ಸಮಿತಿ ಮಂಗಳೂರು ಇದರ 100ನೇ ವರ್ಷದ ಶಾರದಾ ಮಹೋತ್ಸವ ಸೆ.25ರಿಂದ ಅ.6ರ ವರೆಗೆ ನಡೆಯಲಿದ್ದು, ಶಾರದೆಗೆ 8 ಲಕ್ಷ ರೂ. ಮೌಲ್ಯದ ಚಿನ್ನದ ಜರಿಯ ಸೀರೆಯನ್ನು ದಾನಿಯೊಬ್ಬರು ನೀಡುತ್ತಿದ್ದಾರೆ.

ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ವಠಾರದಲ್ಲಿ ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ಈ ಬಾರಿ 100ನೇ ವರ್ಷದ ಶಾರದಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ, ಸಿದ್ಧತೆ ಭರದಿಂದ ಸಾಗುತ್ತಿದೆ. ಶತಮಾನೋತ್ಸವ ವಿಶೇಷವಾಗಿ ಮಂಗಳೂರಿನ ದಾನಿಯೊಬ್ಬರು ಶಾರದೆಗೆ 8 ಲಕ್ಷ ರೂ. ಮೌಲ್ಯದ ಚಿನ್ನದ ಜರಿಯ ಸೀರೆ ಕೊಡುಗೆಯಾಗಿ ನೀಡುತ್ತಿದ್ದಾರೆ.

ಈ ಸೀರೆಯನ್ನು ವಾರಣಾಸಿ ಜ್ಞಾನವಾಪಿ ದೇವಾಲಯದ ಬಳಿಯ ಮುಸ್ಲಿಂ ಕುಟುಂಬ ನೇಯ್ದು ಕೊಡುತ್ತಿರುವುದು ವಿಶೇಷ. ಪ್ರಸಿದ್ಧ ಶೆಹನಾಯಿ ವಾದಕ ಉಸ್ತಾದ್​ ಬಿಸ್ಮಿಲ್ಲಾ ಖಾನ್​ ಪರಿವಾರದವರೇ ಈ ಸೀರೆ ಸಿದ್ಧಗೊಳಿಸಿದ್ದಾರೆ. ಹಲವು ವರ್ಷಗಳಿಂದ ಈ ಕುಟುಂಬವೇ ಶಾರದೆಗೆ ಸೀರೆ ನೇಯ್ದುಕೊಡುತ್ತಿದೆ.

ಪ್ರತಿವರ್ಷ ಉತ್ಸವದ ಕೊನೇ ದಿನ ಶಾರದೆಗೆ ಬೆಳ್ಳಿ ಜರಿಯ ರೇಷ್ಮೆ ಸೀರೆ ಉಡಿಸಲಾಗುತ್ತಿತ್ತು. ಈ ಬಾರಿ ಚಿನ್ನದ ಸೀರೆಯುಟ್ಟ ಶಾರದಾ ಮಾತೆಯನ್ನು ಭಕ್ತರು ದರ್ಶನ ಮಾಡಬಹುದು. ಮಂಗಳೂರು ಶ್ರೀ ಶಾರದಾ ಮಹೋತ್ಸವದ ಪ್ರಯುಕ್ತ 12 ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English