ಮಂಗಳೂರು : ದೇಶದಲ್ಲಿ ಇತ್ತೆಚಿನ ದಿನಗಳಲ್ಲಿ ಮಹಿಳೆಯರು ಮತ್ತು ಯುವತಿಯರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯ ದಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಹಿಳೆಯರು ಹಾಗೂ ಯುವತಿಯರು ನಿರಂತರ ಶೋಷಣೆಗೊಳಗಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ಖಂಡಿಸಿ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯಿಂದ ಗುರುವಾರ ಸಂಜೆ ನಗರದಲ್ಲಿ ಮೌನ ಮೆರವಣಿಗೆ ನಡೆಯಲಿದೆ ಎಂದು ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಸದಸ್ಯೆ ಗುಲಾಬಿ ಬಿಳಿಮಲೆ ಅವರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವತಿಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಹೋಂಸ್ಟೇ ದಾಳಿ ಬಳಿಕ ಸೌಜನ್ಯ ಪ್ರಕರಣ ಕ್ಕೆ ನ್ಯಾಯ ಒದಗಿಸುವಂತೆ ವೇದಿಕೆ ಒತ್ತಾಯಿಸಲಿದೆ. ನಗರದಲ್ಲಿ ಮಾರ್ಚ್ 6, 7 ಮತ್ತು 8 ರಂದು ಮಹಿಳಾ ಸಮಾ ವೇಶ ನಡೆಯಲಿದೆ ಇದಕ್ಕೆ ಪೂರ್ವ ತಯಾರಿಯಾಗಿ ಗುರುವಾರ ಸಂಜೆ 4.45 ಕ್ಕೆ ಜ್ಯೋತಿಯಿಂದ ಲೈಟ್‌ಹೌಸ್ ಮೂಲಕ ಲೇಡೀಸ್ ಕ್ಲಬ್‌ವರೆಗೆ ಮೌನ ಮೆರವಣಿಗೆ ನಡೆಯಲಿದ್ದು ಇದರಲ್ಲಿ ವಿವಿಧ ಸಂಘಟನೆಗಳು ಭಾಗವಹಿಸಲಿವೆ. ಈ ಸಂದರ್ಭ ಮುಂಬೈನ ಖ್ಯಾತ ಮಹಿಳಾ ಹಕ್ಕುಗಳ ನ್ಯಾಯವಾದಿ ಫ್ಲೇವಿಯಾ ಆಗ್ನೆಸ್ ಭಾಗವಹಿಸಿ ಮಾತನಾಡಲಿದ್ದಾರೆ ಎಂದರು.
ಶೆಹನಾಝ್ ಎಂ, ಲೊರೆಟ್ಟೋ ರೆಬೆಲ್ಲೋ, ಡಾ.ಡೆರಿಕ್ ಲೋಬೋ ಮತ್ತು ನಝೆರೆನ್ ಬಿ.ಎಂ.ಸುನ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English