ವಿಶ್ವ ಕೊಂಕಣಿ ಕೇಂದ್ರದಲ್ಲಿ “ಕ್ಷಿತಿಜ” ಕೌಶಲ್ಯಾಭಿವೃದ್ದಿ ಶಿಬಿರ

10:41 PM, Friday, October 18th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದು ಅಲ್ಲಿಯೇ ಉತ್ತಮ ಉದ್ಯೊಗಾವಕಾಶವಿದ್ದರೂ, ತನ್ನ ತಾಯ್ನಾಡಿನ ಬಳುವಳಿ – ಕೌಟುಂಬಿಕ ಉದ್ಯಮಕ್ಕೆ ಮರಳಿ, ಅನುಕರಣೀಯ ಮಾದರಿ ನಿರ್ಮಿಸಿದ ಕೀರ್ತಿ ಆನಂದ ಜಿ ಪೈಯವರದ್ದು ಎಂದು ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ ಎ ನಂದಗೋಪಾಲ ಶೆಣೈಯವರು ಅಭಿಪ್ರಾಯ ಪಟ್ಟರು.

ವಿಶ್ವಕೊಂಕಣಿ ಕೇಂದ್ರದಲ್ಲಿ ನಡೆಯುತ್ತಿರುವ ವಿದ್ಯಾಕಲ್ಪಕ ವಿದ್ಯಾರ್ಥಿವೇತನ ಯೋಜನೆಯ ‘ಕ್ಷಿತಿಜ”- ಮೂರು ದಿನಗಳ ಉಚಿತ ಕೌಶಲ್ಯಾಭಿವೃದ್ದಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಕೆನರಾ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷರಾದ ಶ್ರೀ ಆನಂದ ಪೈಯವರು ಪ್ರೇರಣಾ ಭಾಷಣ ಮಾಡಿದರು. ಒಂದು ಸರಳವಾದ ಬೀಡಿ ವ್ಯವಹಾರದೊಂದಿಗೆ ಪ್ರಾರಂಭಗೊಂಡು ಎರಡು ಮೂರು ತಲೆಮಾರುಗಳಲ್ಲಿ, ಕುಟುಂಬದ ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು, ಆಧುನಿಕ ಕಾರ್ಪೊರೇಟ್ ಸಂಸ್ಥೆಯ ರೂಪ ಗಳಿಸಿದ ಭಾರತ್ ಸಮೂಹ ಉದ್ಯಮದ ಯಶೋಗಾಥೆಯನ್ನು ತಿಳಿಸಿ ಯುವ ವಿದ್ಯಾರ್ಥಿಗಳ ಮುನ್ನಡೆಗೆ ಸ್ಪೂರ್ತಿಯಿತ್ತರು.

ಉದ್ಘಾಟನಾ ಸಮಾರಂಭದಲ್ಲಿ ಸಿಎ ಜಯಂತ ಶೆಣೈ ನಗರ್‍, ವೇದಮೂರ್ತಿ ಗಣಪತಿ ಭಟ್‍, ಎಮ್ ಗಣೇಶ್ ಭಟ್ ಅತಿಥಿಗಳಾಗಿ ಭಾಗವಹಿಸಿದರು. ಡಾ ಬಿ ದೇವದಾಸ ಪೈ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿದ 70 ಮಂದಿ ವಿದ್ಯಾಕಲ್ಪಕ ವಿದ್ಯಾರ್ಥಿವೇತನದ ಫಲಾನುಭವಿಗಳು ಭಾಗವಹಿಸುವ ಈ ಶಿಬಿರದಲ್ಲಿ 27 ಯುವ ಉದ್ಯಮಿಗಳು, ಸಂಪನ್ಮೂಲ ವ್ಯಕ್ತಿಗಳಾಗಿ ಸಂವಹನ ರೂಪದಲ್ಲಿ ವಿವಿಧ ಕ್ಷೇತ್ರದ ಅನುಭವ ಹಂಚುವಿಕೆ ನಡೆಸಿ, ವಿದ್ಯಾರ್ಥಿಗಳ ಭವಿಷ್ಯದ ಜೀವನಕ್ಕೆ ಅಗತ್ಯವುಳ್ಳ ಮನೋಸ್ಪೂರ್ತಿ ನೀಡಲಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English