ಪುತ್ತೂರಿನಲ್ಲಿ ಕಾಂಗ್ರೆಸ್ ಸೋಲಲು ಪ್ರಮುಖ ಕಾರಣ ಹೇಮನಾಥ ಶೆಟ್ಟಿ : ಶಕುಂತಲಾ ಶೆಟ್ಟಿ

9:48 PM, Friday, November 18th, 2022
Share
1 Star2 Stars3 Stars4 Stars5 Stars
(No Ratings Yet)
Loading...

ಪುತ್ತೂರು : ಹೈಕಮಾಂಡ್ ತೀರ್ಮಾನಿಸಿ ಕೊಡುವ ವಿಧಾನ ಸಭಾ ಚುನಾವಣೆಯ ಸೀಟು ನಾನು ಹೇಮನಾಥ ಶೆಟ್ಟಿ ಗೆ ಬಿಟ್ಟುಕೊಡುವುದಾಗಿ ಹೇಳಿಲ್ಲ ಎಂದು ಶಕುಂತಲಾ ಶೆಟ್ಟಿ ಹೇಳಿದ್ದಾರೆ.

ಶಕುಂತಲಾ ಶೆಟ್ಟಿ ಅಭ್ಯರ್ಥಿತನ ಬಿಟ್ಟು ಕೊಡುವ ಪ್ರಮಾಣ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಹೇಳಿಕೆಗೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ವ್ಯಂಗ್ಯವಾಡಿದ್ದಾರೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಕಾಂಗ್ರೆಸ್ ಸೋಲಲು ಹೇಮನಾಥ ಶೆಟ್ಟಿಈ ಕಾರಣ. ವಿರೋಧ ಪಕ್ಷದವರ ಜೊತೆ ಸೇರಿ ಪಕ್ಷದ ಕಾರ್ಯಕರ್ತರ ಮತಗಳನ್ನು ಕಾಂಗ್ರೆಸ್ಸಿಗೆ ಹಾಕದಂತೆ ಮಾಡಿದ್ದು ಹೇಮನಾಥ ಶೆಟ್ಟಿ ಎಂದು ಆರೋಪಿಸಿದ್ದಾರೆ.

ಹೈಕಮಾಂಡ್ ಮೂಲಕ ಆಯ್ಕೆಯಾದ ವ್ಯಕ್ತಿ ಇನ್ನೊಬ್ಬರಿಗೆ ಪಕ್ಷದ ಟಿಕೆಟ್ ಕೊಡುವಂತೆ ಸೂಚಿಸಲು ಸಾಧ್ಯವೂ ಇಲ್ಲ. ನಾನು ಪ್ರಮಾಣ ಮಾಡುವ ಮೊದಲು ಕಾವು ಹೇಮನಾಥ ಶೆಟ್ಡಿ ಪ್ರಮಾಣ ಮಾಡಬೇಕು. ಪಕ್ಷದಲ್ಲಿದ್ದು ಪಕ್ಷಕ್ಕೆ ದ್ರೊಹ ಮಾಡಿಲ್ಲ. ವಿರೋಧ ಪಕ್ಷದವರ ಜೊತೆ ಸೇರಿ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎನ್ನುವ ಪ್ರಮಾಣವನ್ನು ಹೇಮನಾಥ ಶೆಟ್ಟಿ ಮಾಡಬೇಕು ಎಂದು ಹೇಳಿದ್ದಾರೆ.

ಪ್ರಮಾಣ ಮಾಡಿದ್ದೇನೆ ಎನ್ನುವ ವಿಚಾರ ಸಂಪೂರ್ಣ ಸುಳ್ಳು. ವಿರೋಧ ಪಕ್ಷದವರ ಅಣತಿಯಂತೆ ನಡೆಯುವ ಹೇಮನಾಥ ಶೆಟ್ಟಿ ಮೊದಲು ಪಕ್ಷಕ್ಕೆ ನಿಷ್ಠರಾಗಬೇಕು. ಆ ಬಳಿಕ ಅಭ್ಯರ್ಥಿತನದ ಬಗ್ಗೆ ಯೋಚಿಸಬೇಕು ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English