ದಕ ಜಿಲ್ಲೆ: ಗ್ರಾಮದ ಸ್ಚಚ್ಛತೆಗೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಶೌಚಾಲಯಗಳನ್ನು ಬಳಸಬೇಕು ಎಂದು ಮೂಲ್ಕಿ ಮೂಡಬಿದ್ರಿ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ ಮತಿ ದಯಾವತಿ ಹೇಳಿದರು.
ತಾಲೂಕಿನ ಹಳೆಯಂಗಡಿ ಗ್ರಾಮದಲ್ಲಿ ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ವತಿಯಿಂದ ವಿಶ್ವ ಶೌಚಾಲಯ ದಿನಾಚರಣೆ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಜಾಥ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕ ಪಂಚಾಯತ್ ರಾಜ್ ಘನ ತ್ಯಾಜ್ಯ ನಿರ್ವಹಣಾ ಮಾದರಿ ಉಪವಿಧಿ 2020 ನ್ನು ಓದಿ ಹೇಳುವ ಮೂಲಕ ಗ್ರಾಮ ಪಂಚಾಯತನಲ್ಲಿ ಬೈಲಾವನ್ನು ಜಾರಿ ಮಾಡಲು ಸೂಚಿಸಿದರು.
ಕಸ ವಿಂಗಡಣೆಗೆ ಗ್ರಾಮಸ್ಥರ ಸಹಕಾರ ಅವಶ್ಯವಿದೆ. ತಮ್ಮ ಮನೆಯ ಮುಂದೆ ನಮ್ಮ ಗ್ರಾ.ಪಂ ನ ಕಸ ವಿಲೇವಾರಿ ವಾಹನ ಬಂದಾಗ ಒಣ ಮತ್ತು ಹಸಿ ಕಸವನ್ನು ವಿಂಗಡಿಸಿ ಒಣ ಕಸವನ್ನು ಮಾತ್ರ ಕೊಡಬೇಕು. ಇದರಿಂದ ಕಸವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಸ್ವಚ್ಛ ಭಾರತ್ ಐಇಸಿ ಸಂಯೋಜಕ ಡೊಂಬಯ್ಯ ಇಡ್ಕಿದು ಮಾತನಾಡಿ ಗ್ರಾಮದ ನೈರ್ಮಲ್ಯಕ್ಕೆ ಶೌಚಾಲಯ ಬಳಕೆ ಅತೀ ಮುಖ್ಯ ಎಲ್ಲರೂ ಶೌಚಾಲಯ ಬಳಸಿ ಎಂದರು. ಕಾರ್ಯಕ್ರಮದಲ್ಲಿ ಸ್ವಚ್ಛತಾ ಪ್ರತಿಜ್ಞಾ ವಿಧಿ ಮತ್ತು ರಾಷ್ಟ್ರೀಯ ಐಕ್ಯತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಸ್ವಚ್ಛತಾ ಜಾಥಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಸ್ವಚ್ಛತೆಯ ಕುರಿತು ಜಾಗೃತಿಯನ್ನು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ಅರುಣ್ ಡಿಸೋಜಾ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಮತಿ ಪೂರ್ಣಿಮಾ, ಪಿಡಿಓ ಮುತ್ತಪ್ಪ, ಹಾಗೂ ಗ್ರಾ.ಪಂ ಸರ್ವ ಸದಸ್ಯರು, ಗ್ರಾ.ಪಂ.ಸಿಬ್ಬಂದಿಗಳು, ಜಲ ಜೀವನ ಮಿಷನ್ ಸಿಬ್ಬಂದಿಗಳು ಸಾಹಸ್ ಸಂಸ್ಥೆಯ ಸಿಬ್ಬಂದಿಗಳು, ಸ್ವಸಹಾಯ ಸಂಘದ ಒಕ್ಕೂಟದವರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ, ಹಾಗೂ ನಾರಾಯಣ ಸನಿಲ್ ಪದವಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿ, ಶಾಲಾ, ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English