ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ವೈಭವ, ಕಣ್ಮನ ಸೆಳೆಯುತ್ತಿರುವ ವಿದ್ಯುದ್ದೀಪಾಲಂಕಾರ

10:04 PM, Sunday, November 20th, 2022
Share
1 Star2 Stars3 Stars4 Stars5 Stars
(5 rating, 1 votes)
Loading...
ಲಕ್ಷದೀಪೋತ್ಸವ

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಶನಿವಾರ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಶುಭಾರಂಭಗೊಂಡಿವೆ.

ದೇವಸ್ಥಾನ, ಬಸದಿ, ಬಾಹುಬಲಿ ಬೆಟ್ಟ (ರತ್ನಗಿರಿ), ಎಲ್ಲಾ ವಸತಿ ಛತ್ರಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಶಾಸಕ ಹರೀಶ್ ಪೂಂಜ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು. ಸರ್ಕಾರದ ವಿವಿಧ ಇಲಾಖೆಗಳ ಮಳಿಗೆಗಳೂ ಸೇರಿದಂತೆ ಕೃಷಿ, ಆರೋಗ್ಯ, ಶಿಕ್ಷಣ, ವಾಣಿಜ್ಯ ಹಾಗೂ ಹೈನುಗಾರಿಕೆಗೆ ಸಂಬAಧಿಸಿದ ಇನ್ನೂರಕ್ಕೂ ಮಿಕ್ಕಿ ಮಳಿಗೆಗಳಿದ್ದು ಭಕ್ತರು ಹಾಗೂ ಪ್ರವಾಸಿಗರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

ಹಿಂದೂಗಳು, ಜೈನರು, ಮುಸ್ಲಿಮರು, ಕ್ರೆöÊಸ್ತರು ಸೇರಿದಂತೆ ಸರ್ವಧರ್ಮೀಯರೂ ಆಗಮಿಸಿದ್ದು ದೇವರದರ್ಶನದ ಬಳಿಕ ಅನ್ನಪೂರ್ಣದಲ್ಲಿ ಇಪ್ಪತ್ತೈದು ಸಾವಿರಕ್ಕೂ ಮಿಕ್ಕಿ ಭೋಜನ ಸ್ವೀಕರಿಸಿದರು.

ಬಂದವರೆಲ್ಲ ಉದ್ಯಾನ, ಮಂಜೂಷಾ ವಸ್ತುಸಂಗ್ರಹಾಲಯ, ಕಾರ್‌ಮೂಸಿಯಂ, ಬಸದಿ, ಜಮಾ ಉಗ್ರಾಣ, ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನ (ತಾಳೆಗರಿ ಗ್ರಂಥಗಳ ಅಮೂಲ್ಯ ಸಂಗ್ರಹ) ವೀಕ್ಷಿಸಿ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿಕೊಂಡರು.

ಎಲ್ಲೆಲ್ಲೂ ಸೊಬಗಿದೆ, ಸೊಗಸಿದೆ, ಸೊಗಡಿದೆ. ಸಂಭ್ರಮ-ಸಡಗರವಿದೆ. ಶಿಸ್ತು, ಸ್ವಚ್ಛತೆ, ದೇವಳ ನೌಕರರ ಸೌಜನ್ಯಪೂರ್ಣ ಸೇವೆ ಭಕ್ತರಿಗೆ ಮುದ ನೀಡುತ್ತಿದೆ.

ರಥಬೀದಿಯಿಂದ ಮುಖ್ಯಪ್ರವೇಶ ದ್ವಾರದ ವರೆಗೂ ನೂರಾರು ವೈವಿಧ್ಯಮಯ ಮಳಿಗೆಗಳಿದ್ದು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಪಾದಯಾತ್ರೆ: ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಶನಿವಾರ ಅಪರಾಹ್ನ ಮೂರು ಗಂಟೆಗೆ ಇಪ್ಪತ್ತೈದು ಸಾವಿರಕ್ಕೂ ಮಿಕ್ಕಿ ಭಕ್ತರು ಹಾಗೂ ಸಾರ್ವಜನಿಕರು ಭಜನೆ, ಪ್ರಾರ್ಥನೆ ಹಾಗೂ ಶಿವಪಂಚಾಕ್ಷರಿ ಪಠಣದೊಂದಿಗೆ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಿದರು. ಪಾದಯಾತ್ರೆಯ ಹತ್ತನೆ ವರ್ಷವಾಗಿದ್ದು ಹೆಗ್ಗಡೆಯವರನ್ನು ಗೌರವಿಸಲಾಯಿತು.

ರಾತ್ರಿ ಹೊಸಕಟ್ಟೆ ಉತ್ಸವ ನಡೆಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English