ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯೆ ನಾಪತ್ತೆ ಪ್ರಕರಣಕ್ಕೆ ತಿರುವು, ವಿಡಿಯೋ ವೈರಲ್

8:49 PM, Wednesday, November 23rd, 2022
Share
1 Star2 Stars3 Stars4 Stars5 Stars
(No Ratings Yet)
Loading...
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್

ಸುಳ್ಯ : ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯೆ ಭಾರತಿ ಮೂಕಮಲೆ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ಆಕೆಯನ್ನು ಯಾರು ಕಿಡ್ನಾಪ್ ಮಾಡಿಲ್ಲ , ಸ್ವಇಚ್ಛೆ ಯಿಂದ ಹೋಗಿರುವುದಾಗಿ ಹೇಳಿದ್ದಾರೆ.

ವಿಡಿಯೋ ಮೂಲಕ ಮಾತನಾಡಿದ ಅವರು ತಾನು ಯಾರಿಂದಲೂ ಅಪಹರಣಕ್ಕೆ ಒಳಗಾಗಿಲ್ಲ ಆದರೆ ತನ್ನ ಸ್ವಂತ ಇಚ್ಛೆಯ ಮೇರೆಗೆ ಮನೆ ಬಿಟ್ಟಿದ್ದಾಗಿ ಭಾರತಿ ವಿಡಿಯೋದಲ್ಲಿ ಹೇಳಿದ್ದಾರೆ.

ಯಾರೂ ನನ್ನನ್ನು ಕಿಡ್ನಾಪ್ ಮಾಡಿಲ್ಲ, ನನ್ನ ಮನೆಗೆ ನನ್ನ ಸ್ನೇಹಿತನಿಗೆ ಬರಲು ಹೇಳಿದ್ದೆ, ನಾನು ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಆತನ ಜೊತೆ ತೆರಳಿದ್ದೇನೆ , ದಯವಿಟ್ಟು ನಮಗೆ ತೊಂದರೆ ಕೊಡಬೇಡಿ. ನೀವು ಹಾಗೆ ಮಾಡಿ್ದರೆ, ನಾವಿಬ್ಬರೂ ನಮ್ಮ ಜೀವನವನ್ನು ಕೊನೆಗೊಳಿಸುತ್ತೇವೆ, ಎಂದು ಭಾರತಿ ವಿಡಿಯೋದಲ್ಲಿ ಹೇಳುತ್ತಿದ್ದಾರೆ.

ಅಕ್ಟೋಬರ್ 29 ರಿಂದ ಭಾರತಿ ನಾಪತ್ತೆಯಾಗಿದ್ದು, ಪ್ರಕರಣ ದಾಖಲಾಗಿತ್ತು. ಆಕೆಯನ್ನು ಕಿಡ್ನಾಪ್ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಆದರೆ, ಈಗ ಪ್ರಕರಣ ತಿರುವು ಪಡೆದುಕೊಂಡಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English