ಅಗರಬತ್ತಿ ಉದ್ಯಮಕ್ಕೆ ರಾಜ್ಯ ಸರ್ಕಾರದಿಂದ ಎಲ್ಲ ಸಹಕಾರ: ಮುಖ್ಯಮಂತ್ರಿ

9:48 PM, Thursday, November 24th, 2022
Share
1 Star2 Stars3 Stars4 Stars5 Stars
(No Ratings Yet)
Loading...

ಬೆಂಗಳೂರು : ಅಗರಬತ್ತಿ ಉದ್ಯಮಕ್ಕೆ ರಾಜ್ಯ ಸರ್ಕಾರದಿಂದ ಎಲ್ಲ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಅವರು ಇಂದು ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘದ ವತಿಯಿಂದ ಆಯೋಜಿಸಿದ್ದ ಐಮಾ ಎಕ್ಸ್ ಪೋ ( AIAMA )2022 ಉದ್ಘಾಟಿಸಿ ಮಾತನಾಡಿದರು.

ಅಗರಬತ್ತಿ ಉದ್ಯಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಉದ್ಯೋಗ ನೀಡುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ.

ಗ್ರಾಮೀಣ ಪ್ರದೇಶದಲ್ಲಿ ಈ ಉದ್ಯಮ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಈ ಕಾರಣದಿಂದಲೇ ನಮ್ಮ ಸರ್ಕಾರ ಎಂಥ ಸಹಕಾರವನ್ನಾದರೂ ನೀಡಲಿದೆ ಎಂದರು. ರಾಜ್ಯ ಉತ್ತರ ಕರ್ನಾಟಕದಲ್ಲಿ ಕೂಲಿಕಾರರ ವೆಚ್ಚವೂ ಕಡಿಮೆಯಿದೆ. ಅಗರಬತ್ತಿ ಉದ್ಯಮವನ್ನು ಉತ್ತರ ಕರ್ನಾಟಕ ಜಿಲ್ಕೆಗಳಿಗೂ ವಿಸ್ತರಿಸಲು ಆಹ್ವಾನ ನೀಡಿದರು. ಕಳೆದ 20 ವರ್ಷಗಳಲ್ಲಿ ಅಗರಬತ್ತಿ ಉದ್ಯಮ ಅಗಾಧ ಬದಲಾವಣೆ ಹೊಂದಿದೆ. ವಾಸು ಅಗರಬತ್ತಿ ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ ಎಂದರು.

ಆರ್ಥಿಕತೆ ಕೆಳ ಸ್ಥರದಿಂದ ಬಲಗೊಳ್ಳುತ್ತದೆ
ಸರ್ಕಾರವು ಸಣ್ಣ ಪುಟ್ಟ ಸಮುದಾಯಗಳಾದ ಕುಂಬಾರ ಬಡಿಗಾರರು, ಚಮ್ಮಾರ, ಕಮ್ಮಾರ, ಸೇರಿದಂತೆ ಇತರ ಸಮುದಾಯಗಳಿಗೆ ಸಾಲ ನೀಡುವ ಯೋಜನೆ ಜಾರಿಗೆ ತರಲಾಗುತ್ತಿದೆ. ದುಡಿಮೆಯೇ ದೊಡ್ಡಪ್ಪ ಎಂದು ನಂಬಿರುವ ನಮ್ಮ ಸರ್ಕಾರ ಆರ್ಥಿಕತೆ ಕೆಳ ಸ್ಥರದಿಂದ ಬಲಗೊಳ್ಳುತ್ತದೆ ಎಂದು ನಂಬಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಪರಿಮಳದ ಜೊತೆಗೆ ಸಂತೋಷ ಹರಡುವ ಕೆಲಸ
ಅಗರಬತ್ತಿ ಉದ್ಯಮ‌ ಪರಿಮಳದ ಜೊತೆಗೆ ಸಂತೋಷ ಹರಡುವ ಕೆಲಸ ಮಾಡುತ್ತಿದೆ. 250 ವರ್ಷಗಳಿಂದ ಪರಿಮಳದ ಜೊತೆಗೆ ಸಂತೋಷ ಹರಡುತ್ತಿದ್ದೀರಿ. ಯಾವುದೇ ಉದ್ಯಮ ಇದಕ್ಕೆ ಸರಿಸಾಟಿಯಿಲ್ಲ. ಸಣ್ಣ ಸಣ್ಣ ವಿಚಾರದಲ್ಲಿ ಸೌಂದರ್ಯ ಹಾಗೂ ಸಂತೋಷವಿದೆ. ಪರಿಮಳ ನಮಗೆ ಅನೇಕ ಸಂದರ್ಭಗಳನ್ನು ನೆನಪಿಸುತ್ತದೆ. ಅಗರಬತ್ತಿ ಶುಭಕಾರ್ಯಗಳ ಸಂಕೇತ. ಸುಗಂಧವು ಮನುಷ್ಯ ಎಂಥ ಸ್ಥಿತಿಯಲ್ಲಿ ಇದ್ದರೂ ಅವನ ಮನಸ್ಸು, ಚಿಂತನೆಯನ್ನು ಬದಲಾಯಿಸುತ್ತದೆ. ಅಗರಬತ್ತಿ ಮಾನವನ ಸುಖಕ್ಕಾಗಿ ಮಾಡಿದ ಅತ್ಯುತ್ತಮ ಆವಿಷ್ಕಾರಗಳಲ್ಲಿ ಒಂದು. ಸುಗಂಧಕ್ಕೆ ದೊಡ್ಡ ಇತಿಹಾಸವಿದೆ‌. ಇದೊಂದು ರಾಸಾಯನಿಕ ವಿಜ್ಞಾನ. ಸಾಂಪ್ರದಾಯಿಕ ಸುಗಂಧ ತಯಾರಿಕೆಗೆ ನಮ್ಮ ಹೂಗಳಂಥ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಲಾಗುತ್ತಿತ್ತು. ಪಶ್ಚಿಮಾತ್ಯ ದೇಶಗಳಲ್ಲಿ ಕೃತಕ ಪರಿಮಳ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅಗರಬತ್ತಿ ಯ ಯಶಸ್ಸು ಅದರ ಸುಗಂಧದಲ್ಲಿದೆ ಎಂದರು. ಅಗರಬತ್ತಿ ಉದ್ಯಮದಲ್ಲಿತ್ತುವವರು ವಿಶ್ವದ ಅತ್ಯುತ್ತಮ ಸುಗಂಧಗಳನ್ನು ಬಳಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಅಗರಬತ್ತಿ ಉದ್ಯಮಕ್ಕೆ ಸಾಕಷ್ಟು ಪ್ರೋತ್ಸಾಹ
ಭಾರತ ಜೀವ ವೈವಿದ್ಯ ವಿರುವ ದೇಶ‌. ನಮ್ಮಲ್ಲಿ ಪ್ರಾಕೃತಿಕವಾಗಿಯೇ ಪರಿಮಳ ಬೀರುವ ಉತ್ಪನ್ನಗಳು ದೊರೆಯುತ್ತಿವೆ. ಸುಗಂಧ ತಯಾರಿಕೆಗಾಗಿಯೇ ಹೂಗಳನ್ನು ಬೆಳೆಯುವುದು ಹೆಚ್ಚಬೇಕು. ಅರುಣ್ ಕುಮಾರ್ ಎಂಬುವರು ಸುಗಂಧವನ್ನು ಅಗರಬತ್ತಿಗೆ ಸರಬರಾಜು ಮಾಡುತ್ತಿದ್ದರು. ನನ್ನ ಕ್ಷೇತ್ರದಲ್ಲಿಯೂ ಒಬ್ಬರು ಸುಮಾರು 2000 ಎಕರೆ ಪ್ರದೇಶದಲ್ಲಿ ಪುಷ್ಪ ಕೃಷಿ ಮಾಡುತ್ತಿದ್ದಾರೆ. ಸುಗಂಧ ತಯಾರಿಕೆಯ ಉದ್ಯಮವನ್ನು ಆತ್ಮನಿರ್ಭರ್ ಯೋಜನೆಯಡಿ ತರಲಾಗಿದೆ. ಅಗರಬತ್ತಿ ಉದ್ಯಮಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಮಹಿಳೆಯರಿಗೆ ಉದ್ಯೋಗಾವಕಾಶ
ನಮ್ಮ ಸರ್ಕಾರ ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ ಜಾರಿಗೆ ತಂದಿದೆ ಅವರಿಗೆ 1.5 ಲಕ್ಷ ಸರ್ಕಾರ ನೀಡುತ್ತದೆ. 5 ಲಕ್ಷದವರೆಗೆ ಅನುದಾನ ನೀಡಲಾಗುತ್ತಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಲ್ಪಿಸಲು ಅನುಕೂಲವಾಗುತ್ತದೆ. ಈ ಉದ್ಯಮದಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಕೆಲಸಕ್ಕೆ ತೊಡಗಿಸಿಕೊಳ್ಳಬಹುದು. ಮಹಿಳೆಯರನ್ನು ಬೃಹತ್ ಉತ್ಪಾದನೆಯಲ್ಲಿ ತೊಡಗಿಸುವ ಉದ್ದಿಮೆಗಳು ಅಗತ್ಯವಿದೆ. ನಮ್ಮಲ್ಲಿ ಉಳಿತಾಯ ಸಂಸ್ಕೃತಿ ಇದ್ದು, ಮಹಿಳೆಯರು ಹೆಚ್ಚಿನ ಉಳಿತಾಯ ಮಾಡುತ್ತಾರೆ. ಅವರು ಉತ್ಪಾದನೆಯಲ್ಲಿ ತೊಡಗಿದರೆ ಕುಟುಂಬದಲ್ಲಿ ಹೆಚ್ಚಿನ ಉಳಿತಾಯವಾಗಲಿದೆ.

ಮಹಿಳೆಯರು ಮನೆಯಲ್ಲಿಯೇ ಕುಳಿತು ಕೆಲಸ ಮಾಡಬಹುದು. ಅಗರಬತ್ತಿ ಉದ್ದಿಮೆಯ ಮುಖ್ಯಸ್ಥರು ಈ ಯೋಜನೆಗೆ ಕೈಜೋಡಿಸಿ ಬದಲಾವಣೆ ತರಬೇಕೆಂದರು. ನಮ್ಮ ಆದ್ಯತೆ ಮಹಿಳೆಯರು. ಮಹಾತ್ಮಾ ಗಾಂಧಿ ಹೆಚ್ಚಿನ ಜನರಿಂದ ಉತ್ಪಾದನೆಯಾಗಬೇಕು ಎಂದು ಹೇಳಿದ್ದರು ಎಂದರು. ಅಗರಬತ್ತಿ ಉದ್ಯಮದಲ್ಲಿ ಶೇ. 100 ರಷ್ಟು ಜನರಿಂದ ಆಗುವ ಉದ್ಯಮ ಎಂದರು.

ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಶಾಸಕ ರಾಜುಗೌಡ, ಐಮಾ ಅಧ್ಯಕ್ಷ ಅರ್ಜುನ್ ರಂಗಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English