ಆಟೋರಿಕ್ಷಾ ದರ 5 ರೂ ಏರಿಕೆ, 15 ನಿಮಿಷ ವೈಟಿಂಗ್ ಚಾರ್ಜ್ ಇಲ್ಲ

9:08 PM, Friday, November 25th, 2022
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆಟೋರಿಕ್ಷಾ ಚಾಲನೆಯ ವಿವಿಧ ಅಂಶಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಆಟೋರಿಕ್ಷಾ ಚಾಲಕರ, ಮಾಲಕರ ಹಾಗೂ ಆಟೋರಿಕ್ಷಾಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಹಿತದೃಷ್ಟಿಯಿಂದ ಈ ಹಿಂದೆ 2020ರ ಫೆಬ್ರವರಿ 27ರಂದು ನಿಗದಿ ಪಡಿಸಿದ ಆಟೋರಿಕ್ಷಾ ದರಗಳನ್ನು ಪುನರ್ ಪರಿಷ್ಕರಿಸಿ, 2022ರ ಡಿಸೆಂಬರ್ 01ರಿಂದ ಜಾರಿಗೆ ಬರುವಂತೆ ನಿಗದಿಪಡಿಸಿದೆ.

ಮೊದಲ 1.5 ಕಿ.ಮೀ. ಕನಿಷ್ಠ ದರ 35ರೂ.ಗಳು (ಗರಿಷ್ಠ 3 ಜನ ಪ್ರಯಾಣಿಕರು), ನಂತರದ ಪ್ರತಿ ಕಿ.ಮೀ. ದರ 20ರೂ.ಗಳು (ಗರಿಷ್ಠ 3 ಜನ ಪ್ರಯಾಣಿಕರು), ಕಾಯುವ ದರ ಮೊದಲ 15 ನಿಮಿಷ ಉಚಿತ, ನಂತರದ 15 ನಿಮಿಷದವರೆಗೆ 5ರೂ.ಗಳು. ಪ್ರಯಾಣಿಕರ ಸರಕಿಗೆ (ಲಗೇಜ್) ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಜೊತೆ ಇರಬೇಕು. ಮೊದಲ 20 ಕಿ.ಗ್ರಾಂ. ಗಳಿಗೆ ಉಚಿತ ಹಾಗೂ ನಂತರದ ಪ್ರತಿ 10 ಕಿ.ಗ್ರಾಂ. ಅಥವಾ ಅದರ ಭಾಗಕ್ಕೆ 5ರೂ.ಗಳು. ರಾತ್ರಿ ವೇಳೆ ದರ 10 ಗಂಟೆಯಿಂದ ಬೆಳಗಿನ ಜಾವ 5ರ ವರೆಗೆ ಮಾತ್ರ ಈ ಮೇಲಿನ ದರದ ಒಂದೂವರೆ ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶವಿದೆ.

2022ರ ಡಿಸೆಂಬರ್ 01ರಿಂದ ಒಂದು ತಿಂಗಳೊಳಗೆ ಎಲ್ಲಾ ಆಟೋರಿಕ್ಷಾ ಫೇರ್ ಮೀಟರ್‍ನಲ್ಲಿ ಸತ್ಯಾಪನೆ ಮಾಡಿಸಿ ಮುದ್ರೆ ಹಾಕಿಸಿಕೊಂಡು ತೂಕ ಮತ್ತು ಮಾಪನ ಶಾಸ್ತ್ರ ಇಲಾಖೆಯಿಂದ ದೃಢೀಕರಿಸಿಕೊಳ್ಳಬೇಕು.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಿದ ದರ ಪಟ್ಟಿಯನ್ನು ಪ್ರತಿಯೊಂದು ಆಟೋರಿಕ್ಷಾಗಳಲ್ಲಿಯೂ ಪ್ರದರ್ಶಿಸಬೇಕು. ಆಟೋರಿಕ್ಷಾ ಚಾಲಕ ಮಾಲೀಕರು ತಮ್ಮ ಆಟೋರಿಕ್ಷಾಗಳ ಪ್ಲಾಗ್ ಮೀಟರ್ ಮರು ನಿಗದಿ ಪಡಿಸಿದ ದರವನ್ನು ರಿಕ್ಯಾಲಿಬರೇಷನ್ ಹಾಗೂ ಸೀಲ್ ಮಾಡಿಸಿಕೊಂಡು ಪ್ರಯಾಣಿಕರಿಂದ ಪ್ರಯಾಣಕ್ಕೆ ತಕ್ಕಂತೆ ಪರಿಷ್ಕರಿಸಿದ ಮೀಟರ್ ದರವನ್ನು ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಪ್ರಯಾಣಿಕರು ಪ್ರಯಾಣಿಸುವ ಸ್ಥಳಗಳಿಗೆ ಹೋಗಲು ನಿರಾಕರಿಸಿದಲ್ಲಿ ಹಾಗೂ ಸಾರ್ವಜನಿಕ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದಲ್ಲಿ, ಅಂತಹ ಚಾಲಕರ ವಿರುದ್ಧ ಕಾನೂನಿನಂತೆ ದಂಡ ವಿಧಿಸುವುದು, ಪರವಾನಿಗೆ ಅಮಾನತ್ತು, ರದ್ದತಿ ಕುರಿತು ಕ್ರಮ ಕೈಗೊಳ್ಳುವುದು ಹಾಗೂ ಇತರೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

ಅಧಿಕ ದರ ವಸೂಲು ಮಾಡಿದಲ್ಲಿ ಮಂಗಳೂರು ಕಚೇರಿ ದೂ.ಸಂಖ್ಯೆ: 0824-2220577, ಅಥವಾ ಡಿಣomಟಿg-ಞಚಿ@ಟಿiಛಿ.iಟಿ, ಪುತ್ತೂರು ದೂ.ಸಂ: 08251-230729, rtomng-ka@nic.in ಹಾಗೂ ಬಂಟ್ವಾಳ ದೂ.ಸಂ: 08255-280504 artobantwal@gmail.com ಅವರಿಗೆ ಸಾರ್ವಜನಿಕರು ದೂರುಗಳನ್ನು ನೀಡುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English