ಲಾಹೋರ್ : 50ರ ಹರೆಯದ ಪಾಕಿಸ್ತಾನಿ ಪ್ರಜೆ ಜಾನ್ ಮುಹಮ್ಮದ್ ಖಿಲ್ಜಿ ಜನವರಿ 1ರಂದು ಭಾನುವಾರ ಬೆಳಗ್ಗೆ 60ನೇ ಮಗುವಿಗೆ ತಂದೆಯಾಗಿದ್ದಾನೆ. ಅಲ್ಲದೆ, ತನ್ನ ಗುರಿ 100 ಮಕ್ಕಳನ್ನು ಪಡೆಯುವುದು ಎಂದು ಆತ ಹೇಳಿಕೊಂಡಿವುದು ವರದಿಯಾಗಿದೆ.
60ನೇ ಮಗುವಿಗೆ ಹಾಜಿ ಖುಶಾಲ್ ಖಾನ್ ಎಂದು ಹೆಸರಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಪಾಕಿಸ್ತಾನದ ಕ್ವೆಟ್ಟಾದ ಜಾನ್ ಮುಹಮ್ಮದ್ ಅವರಿಗೆ ಮೂವರು ಹೆಂಡತಿಯರಿದ್ದಾರೆ ಮತ್ತು ನಾಲ್ಕನೆಯವಳನ್ನು ಮದುವೆಯಾಗಲು ಹುಡುಕಾಟ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. “ನಾನು ನಾಲ್ಕನೆಯವಳನ್ನು ಹುಡುಕುತ್ತಿದ್ದೇನೆ ಎಂದು ಖಿಲ್ಜಿ ಹೇಳಿದರು.
ಜಾನ್ ಮುಹಮ್ಮದ್ ಅವರ ಹಿರಿಯ ಮಗಳು ಶಗುಫ್ತಾ ನಸ್ರೀನ್ ಅವರಿಗೆ ಈಗ 22 ವರ್ಷವಂತೆ, ಹುಡುಗಿಯರು ಹುಡುಗರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳುತ್ತಾರೆ. ಕೆಲ ವರ್ಷಗಳ ಹಿಂದೆ ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಶಗುಫ್ತಾ ಕೂಡ ಗಂಭೀರವಾಗಿ ಗಾಯಗೊಂಡಿದ್ದರು.
ಜಾನ್ ಮುಹಮ್ಮದ್ ಖಿಲ್ಜಿಯ ಐದು ಮಕ್ಕಳು ಸಾವನ್ನಪ್ಪಿದ್ದರೆ, 55 ಮಂದಿ ಜೀವಂತವಾಗಿದ್ದಾರೆ. ಈಗ ಹೆಚ್ಚುತ್ತಿರುವ ಮಕ್ಕಳ ಸಂಖ್ಯೆ ಮತ್ತು ಹಣದುಬ್ಬರದಿಂದಾಗಿ ವೆಚ್ಚಗಳು ದ್ವಿಗುಣಗೊಂಡಿದೆ ಎಂದು ಅವರು ಹೇಳಿದರು.
ಜಾನ್ ಮುಹಮ್ಮದ್ ಬಲೂಚಿಸ್ತಾನ್ ಪ್ರಾಂತ್ಯದ ಪ್ರಾಂತೀಯ ರಾಜಧಾನಿಯಾದ ಕ್ವೆಟ್ಟಾದ ಪೂರ್ವ ಹೊರವಲಯದಲ್ಲಿರುವ ಮಣ್ಣಿನ ಗೋಡೆಯ ಇಟ್ಟಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. 2016 ರಲ್ಲಿ ಜನಗಣತಿ ಅಧಿಕಾರಿಗಳು ಅವರ ಮಕ್ಕಳ ಪಟ್ಟಿಯನ್ನು ಪಡೆದಾಗ ಜಾನ್ ಮುಹಮ್ಮದ್ ಅವರು ಬೆಳಕಿಗೆ ಬಂದರು. ಅವರ ಪುತ್ರಿಯರು ಮತ್ತು ಪುತ್ರರ ದೀರ್ಘ ಪಟ್ಟಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಇದು ದೇವರ ಆಶೀರ್ವಾದ ಎಂದು ಜಾನ್ ಮುಹಮ್ಮದ್ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅವರು 100 ಮಕ್ಕಳ ತಂದೆಯಾಗಲು ಬಯಸುತ್ತಾರೆ. ಶೀಘ್ರದಲ್ಲೇ ನಾಲ್ಕನೇ ಮದುವೆಯಾಗುವುದಾಗಿ ಹೇಳಿದ್ದಾರೆ. ಜಾನ್ ಮುಹಮ್ಮದ್ ಯಾವುದೇ ಪೂರ್ವಜರ ಆಸ್ತಿ ಅಥವಾ ಯಾವುದೇ ದೊಡ್ಡ ವ್ಯವಹಾರವನ್ನು ಹೊಂದಿಲ್ಲ. ಅವರು ವೃತ್ತಿಯಲ್ಲಿ ಕಾಂಪೌಂಡರ್ ಆಗಿದ್ದು, ಉಪನಗರಗಳಲ್ಲಿ ಸ್ವಂತ ಕ್ಲಿನಿಕ್ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English