ಮೂರನೆಯ ಮದುವೆಯ ಸಿದ್ಧತೆಯಲ್ಲಿದ್ದಾರೆ ಮೆಗಾಸ್ಟಾರ್​ ಚಿರಂಜೀವಿ ಪುತ್ರಿ ಶ್ರೀಜಾ

2:40 PM, Wednesday, January 4th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಬೆಂಗಳೂರು : ಮೆಗಾಸ್ಟಾರ್​ ಚಿರಂಜೀವಿ ಪುತ್ರಿ ಶ್ರೀಜಾ ಎರಡು ಮದ್ವೆ ಆಗಿ ಸಂಸಾರ ಸರಿ ಆಗದೆ ಇಬ್ಬರಿಂದಲೂ ದೂರವಾಗಿ ಈಗ ಮೂರನೆಯ ಮದುವೆಯ ಸಿದ್ಧತೆಯಲ್ಲಿದ್ದಾರೆ ಎಂಬ ಸುದ್ದಿ ಇದೆ.

ಚಿರಂಜೀವಿ ಅವರ ಕಿರಿಯ ಮಗಳು ಶ್ರೀಜಾ ಅವರು ಸದ್ಯ ಇದೇ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಕೆಲ ವಾಹಿನಿ ಹಾಗೂ ವೆಬ್‌ಸೈಟ್ ವರದಿಗಳ ಪ್ರಕಾರ ಶ್ರೀಜಾ ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿವೆ.

ಇದೇನೂ ಹೊಸ ಸುದ್ದಿಯಲ್ಲ. ಕೆಲ ತಿಂಗಳಿನಿಂದ ಈ ಸುದ್ದಿ ಸಿನಿರಂಗದಲ್ಲಿ ಹರಿದಾಡುತ್ತಲೇ ಇದೆ. ಅದರೆ ಅದಕ್ಕೆ ಸಾಕ್ಷಿ ಎಂಬಂತೆ ಶ್ರೀಜಾ ಮಾಡಿರುವ ಇನ್​ಸ್ಟಾಗ್ರಾಮ್​ ಪೋಸ್ಟ್​ ಒಂದು ವೈರಲ್​ ಆಗಿದ್ದು, ಬಿಸಿಬಿಸಿ ಚರ್ಚೆ ಶುರುವಾಗಿದೆ.

ಅಷ್ಟಕ್ಕೂ ಶ್ರೀಜಾ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿರುವುದೇನೆಂದರೆ, “ಡಿಯರ್ 2022, ನೀನು ನನಗೆ ಬಹಳ ಮುಖ್ಯವಾದ ವ್ಯಕ್ತಿಯನ್ನು ಭೇಟಿ ಮಾಡಿಸಿರುವೆ. ನನ್ನ ಬಗ್ಗೆ ಚೆನ್ನಾಗಿ ಅರಿತಿರುವ, ನನ್ನನ್ನು ಬಹಳ ಪ್ರೀತಿಸುವ, ತುಂಬಾ ಕೇರ್​ ಮಾಡುವ, ಕಷ್ಟ- ಸುಖದಲ್ಲಿ ನನಗೆ ಸಾಥ್​ ನೀಡುತ್ತಿರುವ, ಯಾವಾಗಲೂ ನನಗೆ ಬೆಂಬಲವಾಗಿ ನಿಲ್ಲುವ ವ್ಯಕ್ತಿಯನ್ನು ನೀನು ಭೇಟಿ ಮಾಡಿಸಿರುವೆ. ನನ್ನ- ಅವನ ಭೇಟಿ ನಿಜಕ್ಕೂ ಬಹುದೊಡ್ಡ ಅದ್ಭುತ. ಹೊಸ ಪಯಣ ಶುರುವಾಗುತ್ತಿದೆ” ಎಂದಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English