ಶಿರಸಿ : ಸಹಸ್ರಲಿಂಗದಲ್ಲಿ ಚಿಕನ್ ಬಿರಿಯಾನಿ ಸೇವಿಸಿದ ಮುಸ್ಲಿಂ ದಂಪತಿ!

1:09 PM, Saturday, January 7th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಹುಬ್ಬಳ್ಳಿ (ವರದಿ:ಶಂಭು ನಾಗನೂರಮಠ) ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ, ಭಕ್ತಿಯ ಸ್ಥಳವಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಹಸ್ರಲಿಂಗದಲ್ಲಿ ಮುಸ್ಲಿಂ ದಂಪತಿ ಚಿಕನ್ ಬಿರಿಯಾನಿ ಸೇವನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಸಹಸ್ರ ಲಿಂಗಕ್ಕೆ ಪ್ರವಾಸಕ್ಕೆ ಬಂದಿದ್ದ ಮುಸ್ಲಿಂ ದಂಪತಿಯಿಂದ ಲಿಂಗಗಳಿರುವ ಪಕ್ಕದ ಕಲ್ಲಿನಲ್ಲಿ ಕುಳಿತು ಬಿರಿಯಾನಿ ಸೇವನೆ ಮಾಡಿದ್ದಾರೆ. ಈಗ ಮುಸ್ಲಿಂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ನಡೆದಿರುವ ಈ ಘಟನೆಯ ವಿಡಿಯೋ ನೋಡಿ ಜಿಲ್ಲೆಯ ಜನರಿಂದ ಅಸಮಾಧಾನ ವ್ಯಕ್ತವಾಗುತ್ತಿದೆ. ಇದರಲ್ಲಿ ಮುಸ್ಲಿಂ ದಂಪತಿ ಕ್ಷೇತ್ರದಲ್ಲಿ ಬಿರಿಯಾನಿ ಸೇವಿಸಿದ್ದನ್ನು ಮಹಿಳೆಯೊಬ್ಬರು ವಿಡಿಯೋ ಮಾಡಿ ಪ್ರಶ್ನಿಸಿದ್ದರು.’ ಮಹಿಳೆಯೊಬ್ಬರು ನೀವಿಲ್ಲಿ ಬಿರಿಯಾನಿ ತಿನ್ನುತ್ತಿದ್ದೀರಾ?’ ಎಂದು ಪ್ರಶ್ನಿಸಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಮುಸ್ಲಿಂ ದಂಪತಿಯ ನಡೆಗೆ ನೆಟ್ಟಿಗರಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವವರ ವಿರುದ್ಧ ಕ್ರಮಕ್ಕೆ ಜನರಿಂದ ಒತ್ತಾಯ ಕೇಳಿಬಂದಿದೆ. ಅಲ್ಲದೇ ಸಹಸ್ರಲಿಂಗವು ಹಿ೦ದೂಗಳ ಧಾರ್ಮಿಕ ತಾಣವಾಗಿದ್ದು, ಇಲ್ಲಿ ಸಾವಿರಾರು ಶಿವ ಲಿಂಗಗಳಿವೆ. ಇದರಿಂದ ಮತ್ತಷ್ಟು ಆಕ್ರೋಶ ಹೆಚ್ಚಾಗಿದ್ದು, ಪಾವಿತ್ರ್ಯತೆ ಹಾಳು ಮಾಡಿದವರ ವಿರುದ್ಧ ಕ್ರಮ ಆಗಬೇಕು ಎಂಬ ಆಗ್ರಹ ವ್ಯಕ್ತವಾಗುತ್ತಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English